ಚಿಂತಾಮಣಿ: ನಗರದ ಎಂ.ಜಿ.ರಸ್ತೆಯ ಚೆಮ್ಮನೂರು ಜ್ಯುವೆಲೆರ್ಸ್ ಅಂಗಡಿಯ ಬಳಿ ಮಂಗಳವಾರ ಪ್ರಾರಂಭವಾದ ಬ್ರೋ ಜೋನ್ ಹೋಲ್ ಸೇಲ್ ಮತ್ತು ರೀಟೈಲ್ ಬಟ್ಟೆ ಅಂಗಡಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಕೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಕವರ್ ವಶಕ್ಕೆ ಪಡೆದು 25 ಸಾವಿರ ರೂ.ದಂಡ ವಿಧಿಸಿದ್ದಾರೆ.ಬಟ್ಟೆ ಅಂಗಡಿಯ ಪ್ರಾರಂಭೋತ್ಸವದಲ್ಲಿ ಬಟ್ಟೆಯ ಜತೆಗೆ ಚಪ್ಪಲಿ ಶೂ ಸಹ ಮಾರಾಟ ಮಾಡುತ್ತಿದ್ದು, ನಗರಸಭೆಯ ಟ್ರೇಡ್ ಲೈಸೆನ್ಸ್ ಪಡೆಯದೆ ಹಾಗೂ ಬಹುತೇಕ ಎಲ್ಲ ವಸ್ತುಗಳಿಗೆ ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ನಗರಸಭೆಯ ಪೌರಾಯುಕ್ತ ಜಿ.ಎನ್.ಚಲಪತಿ ಗಮನಕ್ಕೆ ಸಾಯಾಗಿ ಪೋಟೋಗಳು ಸಮೇತ ವಾಟ್ಸ್ಪ್ಗೆ ಕಳುಹಿಸಿಕೊಟ್ಟಿದ್ದಾರೆ. ಪೌರಾಯುಕ್ತರು ನಗರಸಭೆಯ ಆರೋಗ್ಯ ನಿರೀಕ್ಷಕರಾದ ಆರತಿ ಮತ್ತು ವಿಜಯ್ ನೇತೃತ್ವದ ನಗರಸಭೆ ಸಿಬ್ಬಂದಿ ಕಳುಹಿಸಿ ನಿಷೇಧಿತ ಪ್ಲಾಸ್ಟಿಕ್ ಕವರ್ ವಶಕ್ಕೆ ಪಡೆದು 25 ಸಾವಿರ ರೂ.ದಂಡ ಹಾಕಿ ದಂಡ ವಸೂಲಿ ಮಾಡಿ. ಟ್ರೇಡ್ ಲೈಸೆನ್ಸ್
ಪಡೆದುಕೊಂಡು ವ್ಯಾಪಾರ ನಡೆಸುವಂತೆ ಸೂಚಿಸಿದ್ದಾರೆ.