ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ...! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ...?

Sushanth Singh - CBI - Final
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣ ದಿನವೂ ಒಂದಿಲ್ಲೊಂದು ತಿರುವು ಪಡೆಯುತ್ತಲೇ ಇದೆ. ಈಗ ಆತ ನೇಣು ಹಾಕಿಕೊಳ್ಳಲು ಬಳಸಿದ್ದೇನು ಎಂಬ ಬಗ್ಗೆ ತನಿಖೆ ನಡೆದಿದೆ.

ಜೂನ್​ 14ರಂದು ಬಾಂದ್ರಾದ ಮನೆಯಲ್ಲಿ ಸುಶಾಂತ್​ ಸಿಂಗ್​ ದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ನೋಡಿದ ಮನೆಗೆಲಸದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ದೇಹವನ್ನು ಕೆಳಗಿಳಿಸಿ ಬೆಡ್​ ಮೇಲೆ ಮಲಗಿಸಿದ್ದರು.

ಸುಶಾಂತ್​ ನೇಣು ಹಾಕಿಕೊಳ್ಳಲು ಕುರ್ತಾ ಬಳಸಿಕೊಂಡಿದ್ದರು. ಅದನ್ನು ಕತ್ತರಿಸಿ ದೇಹವನ್ನು ಕೆಳಗಿಸಲಾಗಿತ್ತು. ಈ ವೇಳೆ ಬೆಡ್​ ಮೇಲೆ ಮತ್ತೊಂದು ವಸ್ತು ಇರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಅದು ಬಾತ್​ರೂಮ್​ನ ನಿಲುವಂಗಿಗೆ ಸುತ್ತಿಕೊಳ್ಳುತ್ತಿದ್ದ ಬಟ್ಟೆಯ ಬೆಲ್ಟ್​ ಆಗಿತ್ತು. ಅದು ಎರಡು ತುಂಡಾಗಿತ್ತು.

ಸುಶಾಂತ್​ ನೇಣು ಹಾಕಿಕೊಳ್ಳಲು ಮೊದಲು ಬಟ್ಟೆಯ ಬೆಲ್ಟ್​ ಬಳಸಿದ್ದರು ಎಂಬುದು ಪೊಲೀಸರ ಅನುಮಾನ. ಅದು ಭಾರ ತಾಳದೆ ತುಂಡಾಗಿದೆ. ಅಲ್ಲಿಗೆ ಆತ್ಮಹತ್ಯೆಯ ಮೊದಲ ಯತ್ನ ಕೈಗೂಡಿಲ್ಲ. ಇಷ್ಟಕ್ಕೆ ಸುಶಾಂತ್​ ಸುಮ್ಮನಾಗಿದ್ದರೆ....! ಖಂಡಿತ ದುರಂತದ ಗಳಿಗೆಯಿಂದ ಪಾರಾಗಿರುತ್ತಿದ್ದರಾ...?

ಇಷ್ಟಾದ ಬಳಿಕ ಸುಶಾಂತ್​ ಕಬೋಡ್​ರ್ನಲ್ಲಿದ್ದ ಬಟ್ಟೆಗಳನ್ನೆಲ್ಲ ತಡಕಾಡಿ ಕುರ್ತಾ ಎತ್ತಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಬೋರ್ಡ್​ನಲ್ಲಿದ್ದ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಅದರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇಷ್ಟಕ್ಕೂ ಕುರ್ತಾದ ಬಟ್ಟೆ ಅವರ ದೇಹದ ಭಾರ ತಾಳಿಕೊಳ್ಳುವಷ್ಟು ಗಟ್ಟಿಯಾಗಿತ್ತಾ ಎಂಬುದನ್ನು ಪತ್ತೆ ಹಚ್ಚಲು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜತೆಗೆ, ಬಟ್ಟೆಯ ಬೆಲ್ಟ್​ ತುಂಡಾಗಿದ್ದೇಕೆ ಎಂಬುದನ್ನೂ ಪತ್ತೆ ಹಚ್ಚುತ್ತಿದ್ದಾರೆ. ಈ ಅಂಶಗಳು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net