

ಅಜಾಮ್ಗಢ: ಅತ್ಯಾಚಾರ ಸಂತ್ರಸ್ತೆಯ ಬಳಿ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಶನಿವಾರ ಬಂಧಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇನ್ಸ್ಪೆಕ್ಟರ್ ರಾಮಧಾರಿ ಮಿಶ್ರಾ, ಕಾನ್ಸ್ಟೇಬಲ್ ದಿಲೀಪ್ ಕುಮಾರ್, ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವುದಾಗಿ ನಂಬಿಸಿ ಸಂತ್ರಸ್ತೆಯಿಂದ 20 ಸಾವಿರ ರೂ. ಲಂಚ ಪಡೆದುಕೊಳ್ಳಲು ಮುಂದಾಗಿದ್ದ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಒಂದು ಹಣ ಕೊಡಲು ನಿರಾಕರಿಸಿದರೆ, ಕ್ರಮ ತೆಗೆದುಕೊಳ್ಳುವುದಾಗಿಯೂ ದಿಲೀಪ್ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ. ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಕಾನ್ಸ್ಟೇಬಲ್ ದಿಲೀಪ್ನನ್ನು ಬಂಧಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ. (ಏಜೆನ್ಸೀಸ್)