ಸಿಎಂ ಸಿದ್ದರಾಮಯ್ಯ, ಪುತ್ರ ಯತೀಂದ್ರ ವಿರುದ್ಧ ದೂರು ದಾಖಲು: ಆರೋಪವೇನು?

Siddaramaiah (10)
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ತಿ.ನರಸೀಪುರ ತಾಲೂಕಿನ ಅಲಗೂರಿನ ಎ.ಎನ್.ರಂಗು ಎಂಬವರು ಈ ದೂರು ನೀಡಿದ್ದಾರೆ. ನಿವೃತ್ತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ನೇತೃತ್ವದಲ್ಲಿ ಈ ದೂರನ್ನು ನೀಡಲಾಗಿದೆ.

ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಕುಕ್ಕರ್​-ಐರನ್​ ಬಾಕ್ಸ್ ಹಂಚಿರುವ ಕುರಿತು ಸೆ. 15ರಂದು ಮಡಿವಾಳ ಸಮಾಜದ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೇಳಿದ್ದರು ಎಂಬುದನ್ನು ಉಲ್ಲೇಖಿಸಿ ರಂಗು ದೂರು ನೀಡಿದ್ದಾರೆ.

ಕಾನೂನು ಉಲ್ಲಂಘಿಸಿ ಮತದಾರರಿಗೆ ಆಮಿಷ ತೋರಿ ಪಕ್ಷಕ್ಕೆ ಮತ ಹಾಕಿಸಿಕೊಂಡಿದ್ದು, ಈ ಖರ್ಚು ವೆಚ್ಚ ಚುನಾವಣೆಯ ಲೆಕ್ಕದಲ್ಲಿ ತೋರಿಸಿಲ್ಲ. ಇದು ಆರ್​ಪಿಐ-1951 ಐಪಿಸಿ ಅನ್ವಯ ಅಪರಾಧವಾಗಿದೆ. ಹೀಗಾಗಿ ಡಾ.ಯತೀಂದ್ರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪಾರದರ್ಶಕವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಎಂದು ಇವರು ದೂರು ನೀಡಿದ್ದು, ಡಿವೈಎಸ್​ಪಿ ಗೋವಿಂದರಾಜ್ ದೂರು ಸ್ವೀಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net