ಮಚ್ಚು ತೋರಿಸಿದ್ದ ಕಾಂಗ್ರೆಸ್​ ಮುಖಂಡ ಶಫೀಕ್​ ದಂಪತಿಯ ಬಂಧನ; ಇಬ್ಬರ ವಿರುದ್ಧವೂ ರೌಡಿಶೀಟ್​ ದಾಖಲು

Shafeeq
ಶಫೀಕ್ ಪತ್ನಿ ಮಚ್ಚು ತೋರಿಸಿದ್ದ ಸಂದರ್ಭದ ದೃಶ್ಯ
Published on

ಮೈಸೂರು: ತಪ್ಪು ಮಾಡಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದರ್ಪ ತೋರಿದ್ದಲ್ಲದೆ ಪೊಲೀಸರ ಎದುರೇ ಮಚ್ಚು ತೋರಿಸಿದ್ದ ಕಾಂಗ್ರೆಸ್ ಮುಖಂಡ ಶಫೀಕ್ ಅಹಮದ್​ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಸುದ್ದಿಗೋಷ್ಠಿ ನಡೆಸಿ ಬಂಧನದ ವಿಷಯವನ್ನು ತಿಳಿಸಿದ್ದಾರೆ.

ಸಾತಗಳ್ಳೀ ಬಸ್ ಡಿಪೋಗೆ ಸೇರಿದ್ದ ಕಟ್ಟಡವನ್ನು 2017ರಲ್ಲಿ 12 ವರ್ಷಗಳ ಅವಧಿಗೆ ಬಾಡಿಗೆ ಪಡೆದಿದ್ದ ಶಫೀಕ್ ಅಹಮದ್, ಪ್ರತಿ ತಿಂಗಳು 48 ಲಕ್ಷ ರೂ. ಬಾಡಿಗೆ ಕೊಡುತ್ತಿದ್ದು, ಎರಡು ವರ್ಷದಿಂದ ಬಾಡಿಗೆ ಹಣ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಸಾತಗಳ್ಳಿ ಬಸ್ ಡಿಪೋ ಅಧಿಕಾರಿಗಳು ಕ್ರಮ ಜರುಗಿಸಲು ನೋಟಿಸ್ ನೀಡಲು ಹೋಗಿದ್ದಾಗ ಗಂಡ-ಹೆಂಡತಿ ದರ್ಪ ತೋರಿದ್ದಲ್ಲದೆ, ಪೊಲೀಸರ ಎದುರೇ ಮಚ್ಚು ತೋರಿಸಿದ್ದರು.

ಬಾಡಿಗೆ ಕಟ್ಟದ್ದಕ್ಕೆ ಕೋವಿಡ್ ಕಾರಣ ನೀಡಿ ಕೋರ್ಟ್ ಮೂಲಕ ಸ್ಟೇ ತಂದಿದ್ದ ಶಫಿ, ನಂತರ ಸ್ಟೇ ತೆರವುಗೊಂ ಆದ ನಂತರ ಅಧಿಕಾರಿಗಳು ಕಟ್ಟಡ ಖಾಲಿ ಮಾಡಿಸಲು ಹೋಗಿದ್ದರು. ಸಾರಿಗೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡದೆ ಹೋಗಿದ್ದರಿಂದ ತಕ್ಷಣಕ್ಕೆ ಪೊಲೀಸರು ಸ್ಥಳದಲ್ಲಿ ಇರಲಿಲ್ಲ. ಘಟನೆ ಬಳಿಕ ದಂಪತಿ ಪರಾರಿಯಾಗಿದ್ದರು. ನಿನ್ನೆ ವಿರಾಜಪೇಟೆ ಬಳಿ ಅವರನ್ನು ಬಂಧಿಸಿ, ಇಬ್ಬರ ವಿರುದ್ಧವೂ ರೌಡಿಶೀಟರ್ ತೆರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net