ಪ್ರೀತಿ, ಮದುವೆ ಹೆಸರಿನಲ್ಲಿ ಹುಡುಗಿಯರ ಮತಾಂತರ; ಪಾಕಿಸ್ತಾನಿ ಯುವಕನನ್ನ ಬಂಧಿಸಿದ ಪೊಲೀಸರು|Arrest

Arrest
Published on

Arrest: ಪ್ರೀತಿ ಮತ್ತು ಮದುವೆ ಹೆಸರಿನಲ್ಲಿ ಅನ್ಯಧರ್ಮದ ಯುವತಿಯರನ್ನು ಮತಾಂತರ ಮಾಡಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಹೈದರಾಬಾದ್​ನಲ್ಲಿ ಪಾಕಿಸ್ತಾನ ಮೂಲದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತನನ್ನು ಪಾಕಿಸ್ತಾನ ಫಹಾದ್ ಎಂದು ಗುರುತಿಸಲಾಗಿದೆ. 1998ರಲ್ಲೇ ಭಾರತಕ್ಕೆ ವಲಸೆ ಬಂದು ಹೈದರಾಬಾದ್​ನಲ್ಲಿ ನೆಲೆಸಿದ್ದ ಎನ್ನಲಾಗಿದೆ. ಹೈಟೆಕ್ ಸಿಟಿ ಬಳಿಯ ಸಿಪಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲೇ ಕೆಲಸ ಮಾಡುತ್ತಿದ್ದ ಕೀರ್ತಿ ಎಂಬ ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ಬಳಿಕ 2016ರಲ್ಲಿ ಕೀರ್ತಿ ಧರ್ಮವನ್ನು ಬದಲಾಯಿಸಿಕೊಂಡು ದೋಹಾ ಫಾತಿಮಾ ಆಗಿದ್ದಳು.

ದೋಹಾ ಫಾತಿಮಾ ತನ್ನ ಪತಿ ಮತ್ತೊಬ್ಬರ ಸಂಬಂಧ ಬೆಳಸಿರುವುದರ ಬಗ್ಗೆ ಅನುಮಾನಗೊಂಡು, ರೆಡ್ ಹ್ಯಾಂಡ್ ಆಗಿ ಪತಿಯನ್ನು ಹಿಡಿದಿದ್ದಾಳೆ. ಬಂಜಾರ ಹಿಲ್ಸ್‌ನ ಮೌಂಟ್ ಬಂಜಾರ ಕಾಲೋನಿಯಲ್ಲಿ ತನ್ನ ಪತಿಗೆ ಅನೈತಿಕ ಸಂಬಂಧವಿದೆ ಎಂದು ತಿಳಿದ ನಂತರ ಇಂದು ಬೆಳಿಗ್ಗೆ ಪೊಲೀಸರ ಜೊತೆ ಅಲ್ಲಿಗೆ ಹೋಗಿ ಇಬ್ಬರನ್ನು ಹಿಡಿದಿದ್ದಾಳೆ. ಪೊಲೀಸರ ಆಕೆಯ ಪತಿ ಮತ್ತು ಇನ್ನೊಬ್ಬ ಮಹಿಳೆ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ಈ ಮಧ್ಯೆ ಫಹಾದ್ ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಅನ್ಯಧರ್ಮದ ಹುಡುಗಿಯರನ್ನು ಮತಾಂತರಿಸಿ ವಂಚನೆ ಮಾಡುತ್ತಿದ್ದಾನೆ ಎಂಬ ಅನುಮಾನಗಳಿವೆ. ಫಹಾದ್‌ನ ಪೂರ್ವಾಪರಗಳನ್ನು ಹಿನ್ನೆಲೆಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net