ಮೆಲ್ಬೋರ್ನ್​ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಅಡ್ಡಿಪಡಿಸಿದ ಖಲಿಸ್ತಾನಿ ಉಗ್ರರು| Khalistani

Melborne
Published on

Khalistani: ಆಸ್ಟ್ರೇಲಿಯಾದ ಮೆಲ್ಬೋರ್ನ್​​ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಅನಿವಾಸಿ ಭಾರತೀಯರು ಆಚರಿಸುತ್ತಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಖಲಿಸ್ತಾನಿ ಉಗ್ರಗಾಮಿಗಳು ಅಡ್ಡಿ ಪಡಿಸಿದ್ದು, ಕೆಲಕಾಲ ಆತಂಕದ ವಾತಾವರಣದ ಘಟನೆ ನಡೆದಿದೆ ಎಂದು ವರದಿಯಾಗಿದೆ.

ರಾಯಭಾರಿ ಕಚೇರಿಯಲ್ಲಿ ಭಾರತೀಯರು ದೇಶಭಕ್ತಿಗಳನ್ನು ಹಾಡುತ್ತಿದ್ದರೆ ಅಲ್ಲಿಗೆ ಆಗಮಿಸಿದ ಕೆಲವು ಖಲಿಸ್ತಾನಿ ಉಗ್ರರು, ಖಲಿಸ್ತಾನಿ ಧ್ವಜಗಳನ್ನಿ ಬೀಸುತ್ತಾ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಪ್ರತಿಯಾಗಿ ಭಾರತೀಯ ಗುಂಪುಗಳು ಸಹ ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿದ್ದಾರೆ. ಈ ನಡುವೆ 2 ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದ್ದಾರೆ. ಬಳಿಕ ಧ್ವಜಾರೋಹಣ ಮಾಡಲಾಗಿದೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಆಸ್ಟ್ರೇಲಿಯಾದ ಬೊರೋನಿಯಾದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದ ಮೇಲೂ ಇತ್ತೀಚೆಗೆ ಅಪರಿಚಿರು ದ್ವೇಷಪೂರಿತ ಬರಹಗಳನ್ನು ಬರೆದಿದ್ದರು. ಏಷ್ಯನ್ನರು ನಡೆಸುತ್ತಿರುವ ರೆಸ್ಟೋರೆಂಟ್​ನಲ್ಲೂಈ ಬರಹಗಳು ಕಂಡು ಬಂದಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net