

Bike: ಪ್ರಿಯಕರನಿಗೆ ಬೈಕ್ ಕೊಡಿಸಲು ಯುವತಿ ಕಳ್ಳಿಯಾಗಿ ಮಾರ್ಪಟ್ಟಿರುವ ವಿಚಿತ್ರ ಘಟನೆ ಛತ್ತಿಸ್ಘಡದ ಕಂಕಿರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಹೌದು, ಪ್ರಿಯಕರ ವಿಶ್ವಕರ್ಮನಿಗೆ ಬೈಕ್ ಕೊಡಿಸುವ ಉದ್ದೇಶದಿಂದ ಯುವತಿ ಕರುಣಾ ಪಟೇಲ್ ತನ್ನ ಸಂಬಂಧಿಯೊಬ್ಬರ ಮನೆಗೆ ಕನ್ನ ಹಾಕಿದ್ದಾಳೆ. ಬೀಗ ಹಾಕಿದ ಮನೆಗೆ ತನ್ನ ಲವರ್ನನ್ನು ಕರೆದುಕೊಂಡ ಹೋದ ಕರುಣಾ, ಮನೆಯಲ್ಲಿದ್ದ 2 ಲಕ್ಷ ರೂ ಮೌಲ್ಯದ ಬಂಗಾರ ಸೇರಿ 95 ಸಾವಿರ ನಗದು ಕದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮನೆ ಓನರ್ ಕನ್ನಯ್ಯ ಪಟೇಲ್ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಪತ್ತೆ ಮಾಡಿ ವಿಚಾರಣೆ ಮಾಡಿದ್ದಾರೆ.
ತನ್ನ ಗೆಳೆಯನಿಗೆ ಬೈಕ್ ಖರೀದಿಸಲು ಹೀಗೆ ಮಾಡಿದ್ದೇನೆ ಎಂದು ಗೆಳತಿ ವಿಚಾರಣೆ ವೇಳೆ ಹೇಳಿದ್ದಾಳೆ. ಬೈಕ್‌ಗೆ ತನ್ನ ಗೆಳೆಯನಿಗೆ ಹಣ ನೀಡಿ ಆಭರಣಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.(ಏಜೆನ್ಸೀಸ್)