ಶಿವಸೇನಾ ನಾಯಕ ಸಂಜಯ್ ರಾವುತ್​ ಪತ್ನಿ ವರ್ಷಾಗೆ ಇಡಿ ಸಮನ್ಸ್

Sanjay Raut and his wife Varsha
Published on

ನವದೆಹಲಿ: ಶಿವಸೇನಾ ನಾಯಕ ಸಂಜಯ್ ರಾವುತ್​ ಅವರ ಪತ್ನಿ ವರ್ಷಾಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದ್ದು, ಡಿಸೆಂಬರ್ 29ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಪಂಜಾಬ್​ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ) ಹಗರಣಕ್ಕೆ ಸಂಬಂಧಿಸಿದ ತನಿಖೆ ಇದಾಗಿದ್ದು, ಅಕ್ರಮದಲ್ಲಿ ಭಾಗಿಯಾದ ಬಗ್ಗೆ ವಿಚಾರಣೆ ನಡೆಸುವುದಕ್ಕಾಗಿ ಸಮನ್ಸ್ ಜಾರಿಗೊಳಿಸಿರುವಂಥದ್ದು.

ಪಿಎಂಸಿ ಬ್ಯಾಂಕ್ ಹಗರಣದ ಆರೋಪಿ ಪರ್ವೀನ್ ರಾವುತ್ ಜತೆಗೆ ವರ್ಷಾ ರಾವುತ್​ 50 ಲಕ್ಷ ರೂಪಾಯಿ ವಹಿವಾಟು ನಡೆಸಿದ್ದಾರೆ. ಜಮೀನು ಖರೀದಿಸುವುದಕ್ಕೆ ಸಾಲ ರೂಪದಲ್ಲಿ ಈ ಹಣವನ್ನು ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಸಂಜಯ್ ರಾವುತ್ ಈ ಸಂಬಂಧ ಜನರಿಗೆ ಸ್ಪಷ್ಟೀಕರಣ ನೀಡಬೇಕು ಎಂದು ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಆಗ್ರಹಿಸಿದ್ದಾರೆ.

ಹೌಸಿಂಗ್ ಡೆವಲಪ್​ಮೆಂಟ್​ ಇನ್​ಫ್ರಾಸ್ಟ್ರಕ್ಚರ್​ ಲಿಮಿಟೆಡ್​ , ರಾಕೇಶ್ ಕುಮಾರ್ ವಾಧ್ವಾನ್​, ಸಾರಂಗ್​ ವಾಧ್ವಾನ್​, ವಾರಿಯಂ ಸಿಂಗ್​, ಜಾಯ್ ಥಾಮಸ್​, ಪಿಎಂಸಿ ಬ್ಯಾಂಕಿನ ಸಿಎಂಡಿ ಮತ್ತು ಇತರರ ವಿರುದ್ಧ 2019ರ ಅಕ್ಟೋಬರ್ 3ರಂದು ಜಾರಿ ನಿರ್ದೇಶನಾಲಯ ಪಿಎಂಎಲ್​ಎ ಕೇಸ್​ ದಾಖಿಸಿಕೊಂಡು ವಿಚಾರಣೆ ಆರಂಭಿಸಿದೆ. 4,355 ಕೋಟಿ ರೂಪಾಯಿ ಅಕ್ರಮ ಪಿಎಂಸಿ ಬ್ಯಾಂಕಿನ ನಡೆದಿರುವ ಬಗ್ಗೆ ಆಪಾದನೆ ಕೇಳಿದ್ದು, ಅದರ ವಿಚಾರಣೆಯೂ ನಡೆಯುತ್ತಿದೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net