

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಸಂಜೆ 6 ಗಂಟೆಗೆ ಮಾತನಾಡುವುದಾಗಿ ಬೆಳಗ್ಗೆಯೇ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಮಹತ್ವದ ಘೋಷಣೆಯ ನಿರೀಕ್ಷೆ ಗರಿಗೆದರಿದ್ದು, ಅವರ ಭಾಷಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲರೂ ಈ ಬಗ್ಗೆ ಕುತೂಹಲಭರಿತರಾಗಿದ್ದಾರೆ.
ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಅನೇಕ ಸಲ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಲಾಕ್ಡೌನ್ ಘೋಷಣೆ ಮತ್ತು ಇತರೆ ಕ್ರಮಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಅದಾಗಿ ಲಾಕ್ಡೌನ್ ನಿಲ್ಲಿಸಿ, ಅನ್ಲಾಕ್ ಪ್ರಕ್ರಿಯೆ ಶುರುಮಾಡುವ ಮುನ್ನವೂ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಅವರ ಇಂದಿನ ಭಾಷಣ ಕೋವಿಡ್ 19 ಸಂಕಷ್ಟದ ಅವಧಿಯ 7 ಭಾಷಣವಾಗಿದೆ.
ಟಿವಿ ಭಾಷಣದಲ್ಲಿ ಅವರು ಅನೇಕ ಮಹತ್ವದ ಘೋಷಣೆಗಳನ್ನು ಘೋಷಿಸಿರುವುದು ಇದುವರೆಗಿನ ವಾಡಿಕೆ. ಜೂನ್ 30ರ ಟಿವಿ ಭಾಷಣದಲ್ಲಿ ಅವರು ಪ್ರಧಾನಿ ಮಂತ್ರಿ ಗರೀಬ್ ಕಲ್ಯಅಣ್ ಅನ್ನ ಯೋಜನೆಯ ಅವಧಿ ವಿಸ್ತರಣೆಯನ್ನು ಘೋಷಿಸಿದ್ದರು. ಇದು 80 ಕೋಟಿಗೂ ಅಧಿಕ ಬಡವರಿಗೆ ಉಚಿತ ರೇಷನ್ ಒದಗಿಸುವ ಯೋಜನೆ. ಈ ಯೋಜನೆ ನವೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. (ಏಜೆನ್ಸೀಸ್)