ಕುಟುಂಬ ರಾಜಕೀಯ ವಿರುದ್ದ ಕಿಡಿ; ಭ್ರಷ್ಟಾಚಾರ ವಿರುದ್ದ ಪಿಎಂ ಸಿಡಿಮಿಡಿ

Modi
Published on

ದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ, ಪಕ್ಷದಿಂದ ಸಂಭ್ರಮಾಚರಣೆ ನಡೆಯುತ್ತಿದೆ. ಸಂಭ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ.

4 ರಾಜ್ಯಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿದ ಮತದಾರರಿಗೆ ಪಿಎಂ ಮೋದಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಇದು ಐತಿಹಾಸಿಕ ಗೆಲುವು ಎಂದು ಬಣ್ಣಿಸಿದ್ದಾರೆ. ಈ ವೇಳೆ ಕುಟುಂಬ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಫ್ಯಾಮಿಲಿ ಪಾಲಿಟಿಕ್ಸ್​​​ನಿಂದ ದೇಶದ ಏಳಿಗೆ ಆಗುವುದಿಲ್ಲ. ಕೇವಲ ಕುಟುಂಬದ ಅಭಿವೃದ್ದಿ ಮಾತ್ರ ಆಗುತ್ತದೆ ಎಂದು ಕಿಡಿಕಾರಿದರು.

ಅದೇ ಭ್ರಷ್ಟಾಚಾರ ಮಾಡುವ ಮೂಲಕ ಅಧಿಕಾರ ಹಿಡಿಯಲು ಬಂದವರಿಗೆ ಮತದಾರರು ಸರಿಯಾಗೆ ಪಾಠ ಕಲಿಸಿದ್ದಾರೆ. ಈ ಗೆಲುವು ಐತಿಹಾಸಿಕ ಗೆಲುವು ಎಂದು ಧನ್ಯವಾದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net