ಬ್ರಿಕ್ಸ್ ಶೃಂಗಸಭೆ: ವೇದಿಕೆಯ ಮೇಲೆ ಬಿದ್ದಿದ್ದ ತ್ರಿವರ್ಣ ಧ್ವಜ ಎತ್ತಿಕೊಂಡ ಪ್ರಧಾನಿ ಮೋದಿ; ವಿಡಿಯೋ ವೈರಲ್​

Untitled design (48)
Published on

ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ವೇದಿಕೆಯ ಮೇಲೆ ಹೋದ ಪ್ರಧಾನಿ ನರೇಂದ್ರ ಮೋದಿ, ಸ್ಟೇಜ್​ನ ನೆಲದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕೈಗೆತ್ತಿಕೊಂಡಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ನಾಯಕರನ್ನು ಗ್ರೂಪ್​ ಫೋಟೋಗೆ ನಿಂತುಕೊಳ್ಳಲು ಕರೆ ನೀಡಲಾಯಿತು. ಈ ವೇಳೆ ಸ್ಟೇಜ್​ ಮೇಲೆ ಆಯಾ ದೇಶಗಳ ಲೀಡರ್​ಗಳ ಗುರುತಿಗಾಗಿ ಇರಿಸಲಾಗಿದ್ದ ಭಾರತದ ಚಿಕ್ಕ ತ್ರಿವರ್ಣ ಧ್ವಜವನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ, ತಾವು ನಿಂತುಕೊಳ್ಳುವ ಜಾಗದಲ್ಲಿ ರಾಷ್ಟ್ರಧ್ವಜವಿರುವುದು ಕಂಡ ಕೂಡಲೇ ಕೈಗೆತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಈ ದೃಶ್ಯ ಇದೀಗ ಭಾರೀ ವೈರಲ್​ ಆಗಿದೆ.

ಪ್ರಧಾನಿ ಮೋದಿ ಅವರು ರಾಷ್ಟ್ರಧ್ವಜ ನೋಡುತ್ತಿದ್ದಂತೆ ಕೆಳಗೆ ಬಗ್ಗಿ, ಕೈಗೆತ್ತಿಕೊಂಡು ತಮ್ಮ ಜೇಬಿನೊಳಗೆ ಇಟ್ಟುಕೊಂಡರು. ಮೋದಿ ಅವರನ್ನು ಗಮನಿಸಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಾಫೋಸಾ ಕೂಡ ನೆಲದ ಮೇಲೆ ಇರಿಸಲಾದ ದಕ್ಷಿಣ ಆಫ್ರಿಕಾದ ಧ್ವಜವನ್ನು ಎತ್ತಿಕೊಳ್ಳುವ ಮೂಲಕ ಅವರಂತೆಯೇ ಅನುಸರಿಸಿದರು. ಸದ್ಯ ಈ ವಿಡಿಯೋಗೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net