ಪ್ರಧಾನಿ ಮೋದಿಯಿಂದ ಮಂಗಳೂರು-ಕೊಚ್ಚಿನ್ ಸಿಎನ್​ಜಿ ಪೈಪ್​ಲೈನ್ ಲೋಕಾರ್ಪಣೆ

CNG Pipeline
Published on

ಮಂಗಳೂರು: ಮಂಗಳೂರು ಹಾಗೂ ಕೊಚ್ಚಿನ್ ನಡುವಿನ ಸಿಎನ್​ಜಿ ಪೈಪ್​ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಜ.5) ಲೋಕಾರ್ಪಣೆಗೊಳಿಸಿದರು.

ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಪರೆನ್ಸ ಮೂಲಕ ಸಿಎನ್​ಜಿ ಪೈಪ್​ಲೈನ್​ ಅನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, 450 ಕಿ.ಮೀ ಉದ್ದ ಪೈಪ್​ಲೈನ್​ ಅನ್ನು ರಾಷ್ಟ್ರಕ್ಕೆ ಅರ್ಪಿಸುವುದು ನನಗೆ ಒದಗಿದ ಗೌರವ ಎಂದರು. ಭಾರತೀಯರ ಪಾಲಿಗೆ ಇದು ಅತ್ಯಂತ ಮಹತ್ವದ ದಿನ. ಅದರಲ್ಲೂ ವಿಶೇಷವಾಗಿ ಕರ್ನಾಟಕ ಮತ್ತು ಕೇರಳ ಜನರಿಗೆ ಮಹತ್ವದ ದಿನ ಎಂದರು.

ಅನೇಕ ವರ್ಷಗಳ ಹಿಂದೆ ಭಾರತದ ಬೆಳವಣಿಗೆಯ ದರದ ಹಿಂದಿನ ಕಾರಣದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಭಾರತ ಇಂದು ನಿಧಾನಗತಿಯಲ್ಲಿ ಅಭಿವೃದ್ಧಿ ಸಾಧಿಸುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಭಾರತ ತನ್ನ ವೇಗ, ಪ್ರಮಾಣ ಮತ್ತು ಅಭಿವೃದ್ಧಿ ವ್ಯಾಪ್ತಿಯನ್ನು ಹೆಚ್ಚಿಕೊಂಡಿದೆ ಎಂದು ಪ್ರಧಾನಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಪಿಣರಾಯಿ ವಿಜಯನ್, ಪೆಟ್ರೋಲಿಯಂ ಖಾತೆ ಸಚಿವ ಧಮೇಂದ್ರ ಪ್ರಧಾನ್ ಪಾಲ್ಗೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net