More

    ‘ಭಗವದ್ಗೀತೆ ಹಿಡಿದವರಿಗೆ ವೋಟ್​ ಹಾಕ್ತೀರೊ, ಬೈಬಲ್​ ಹಿಡಿದವರಿಗೊ? ಆಯ್ಕೆ ನಿಮಗೆ ಬಿಟ್ಟಿದ್ದು…’

    ಹೈದರಾಬಾದ್: ಮತದಾರರು ಬೈಬಲ್ ಮತ್ತು ಭಗವದ್ಗೀತೆ ಮಧ್ಯೆ ಯಾವುದನ್ನು ಆಯ್ಕೆ ಮಾಡುತ್ತೀರಿ? ಭಗವದ್ಗೀತೆ ಹಿಡಿದವರಿಗೆ ವೋಟ್​ ಹಾಕ್ತೀರೊ, ಬೈಬಲ್​ ಹಿಡಿದವರಿಗೊ? ಆಯ್ಕೆ ನಿಮಗೆ ಬಿಟ್ಟಿದ್ದು ಎಂದು ಹೇಳಿಕೆ ನೀಡುವ ಮೂಲಕ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಈಗ ಭಾರಿ ಸುದ್ದಿಯಾಗುತ್ತಿದ್ದಾರೆ.

    ತಿರುಪತಿ ಲೋಕಸಭೆ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ತಿರುಮಲದ ದೇವತೆಯನ್ನು ‘ರೆಂಡು ಕೊಂಡಲವಾಡ ಗೋವಿಂದ’ (ಎರಡು ಬೆಟ್ಟಗಳ ದೇವರು) ಎಂದು ವರ್ಣಿಸುವ ಪಕ್ಷಕ್ಕೆ ಮತ ಚಲಾಯಿಸುವಿರೋ ಅಥವಾ ‘ಯೆಡು ಕೊಂಡಲವಾಡ ವೆಂಕಟರಮಣ ಗೋವಿಂದ’ (ಏಳು ಬೆಟ್ಟಗಳ ದೇವರು) ಎಂದು ಹೇಳುವ ಪಕ್ಷಕ್ಕೆ ಮತ ಚಲಾಯಿಸುವಿರೋ ನೀವೇ ನಿರ್ಣಯಿಸಿ ಎಂದು ಹೇಳಿದರು.

    ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಹಿಂದೂ ದೇವಾಲಯಗಳ ಮೇಲಿನ ದಾಳಿಯ ಘಟನೆಯನ್ನು ಉಲ್ಲೇಖಿಸಿದ ಅವರು, ಆಂಧ್ರ ಪ್ರದೇಶ ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ, ಇಲ್ಲದಿದ್ದರೆ ನೀವು ಖಂಡಿತಾ ಬೆಲೆ ತೆರಬೇಕಾಗುತ್ತದೆ. ಬಿಜೆಪಿ ಕಾರ್ಯಕರ್ತರು ಬೀದಿಗೆ ಬಂದು ವಂದೇ ಮಾತರಂ, ಜೈ ಶ್ರೀರಾಮ್​, ಭಾರತ್ ಮಾತಾ ಕಿ ಜೈ ಪಠಿಸಿದರೆ ವೈಎಸ್​ಆರ್ಸಿಪಿ ತಮ್ಮ ಕಚೇರಿಯನ್ನು ಖಾಲಿ ಮಾಡಬೇಕಾಗುತ್ತದೆ ಎಂದು ಬಂಡಿ ಗುಡುಗಿದ್ದಾರೆ.

    ಇದೇ ಸಂದರ್ಭದಲ್ಲಿ ವೈಎಸ್​ಆರ್​ಸಿ ವಿರುದ್ಧ ವಾಗ್ದಾಳಿ ನಡೆಸಿದ ಬಂಡಿ ಸಂಜಯ್​, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ತೆಲಂಗಾಣದಲ್ಲಿ ನಿರ್ದಿಷ್ಟ ಧರ್ಮವನ್ನು ಪ್ರೋತ್ಸಾಹಿಸುತ್ತಿದ್ದರೆ, ಮತ್ತೊಂದು ಧರ್ಮ ಆಂಧ್ರ ಪ್ರದೇಶ ಸರ್ಕಾರವಾಗಿದೆ, ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಒಂದು ಧರ್ಮವನ್ನು ಪ್ರೋತ್ಸಾಹಿಸುತ್ತಿದ್ದರೆ, ಹಿಂದೂಗಳು ಈ ಉಪ ಚುನಾವಣೆಯಲ್ಲಿ ವೋಟ್ ಬ್ಯಾಂಕ್ ಆಗಲಿದ್ದಾರೆ ಎಂದರು.

    ಕಗ್ಗತ್ತಲಿನಲಿ ಮಂಗಳೂರಿನ ದಾರಿಮೇಲೆ ಕಂಡುಬಂದ ‘ಭೂತ’: ವಿಡಿಯೋ ವೈರಲ್​

    ಹುಟ್ಟುಹಬ್ಬಕ್ಕೆಂದು ದುಬೈನಿಂದ ಬಂದು ಪೊಲೀಸ್​ ಕೇಸ್​ನಲ್ಲಿ ಸಿಲುಕಿಕೊಂಡ ಸಲ್ಮಾನ್​ ಸಹೋದರರು!

    ಸಮೋಸಾ ಕದ್ದು ಗುದದ್ವಾರದಲ್ಲಿ ಇಟ್ಟುಕೊಂಡ ಕೈದಿ- ಕಾರಣ ಕೇಳಿ ‘ಅಯ್ಯೋ ಪಾಪಾ‘ ಎಂದ ಪೊಲೀಸರು!

    ಮದುವೆ ಸಾಕುಸಾಕಾಗಿದೆ, ಒಬ್ಬರ ಮೇಲೊಬ್ಬರಿಗೆ ಅಸಹ್ಯ ಹುಟ್ಟಿದೆ- ವಿಚ್ಛೇದನಕ್ಕೆ ಕಾಯಲೇಬೇಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts