ಅಗ್ನಿ-5 ಕ್ಷಿಪಣಿ ಮೊದಲ ಹಾರಾಟ..ಮಿಷನ್ ದಿವ್ಯಾಸ್ತ್ರಕ್ಕಾಗಿ ಪ್ರಧಾನಿ ಮೋದಿ ಡಿಆರ್​ಡಿಒಗೆ ಶ್ಲಾಘನೆ

drdo
Published on

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆ, ಮಿಷನ್ ದಿವ್ಯಾಸ್ತ್ರಕ್ಕಾಗಿ ಪ್ರಧಾನಿ ಮೋದಿ ಡಿಆರ್​ಡಿಒ ವನ್ನು ಶ್ಲಾಘಿಸಿದ್ದಾರೆ.

ಅಗ್ನಿ-5 ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆ ಯಶಸ್ವಿಯಾಗಿದ್ದು, ಇದು 'ಮಿಷನ್ ದಿವ್ಯಾಸ್ತ್ರ'ದ ಭಾಗವಾಗಿ ಡಿಆರ್‌ಡಿಒ ವಿಜ್ಞಾನಿಗಳು ಇದನ್ನು ಅಭಿವೃದ್ಧಿಪಡಿಸಿದ್ದರು.

ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆಯಾದ ಮಿಷನ್ ದಿವ್ಯಾಸ್ತ್ರಕ್ಕಾಗಿ ನಮ್ಮ ಡಿಆರ್​ಡಿಒ ವಿಜ್ಞಾನಿಗಳ ಬಗ್ಗೆ ಹೆಮ್ಮೆಯಿದೆ ಎಂದು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net