More

    ದಕ್ಷಿಣದಲ್ಲಿ ಎನ್‌ಡಿಎಗೆ 38, ‘I.N.D.I.A’ 60ರಲ್ಲಿ ಗೆಲುವು: ಕರ್ನಾಟಕದಲ್ಲಿ ‘ಕೈ’ಗೆ ಕೇವಲ 4ಸ್ಥಾನ! ಸಮೀಕ್ಷೆ ವಿವರ ಇಲ್ಲಿದೆ ನೋಡಿ..

    ನವ ದೆಹಲಿ: ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್ ಪೋಲ್ ಪ್ರಕಾರ ಪುದುಚೇರಿ ಸೇರಿದಂತೆ ದಕ್ಷಿಣ ರಾಜ್ಯಗಳ ಒಟ್ಟು 130 ಲೋಕಸಭಾ ಸ್ಥಾನಗಳಲ್ಲಿ ಪ್ರತಿಪಕ್ಷ ‘I.N.D.I.A ‘ ಮೈತ್ರಿ ಕೂಟ 60 ಸ್ಥಾನ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 38 ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿಸಿದೆ.

    ಇದನ್ನೂ ಓದಿ: ‘ಚುನಾವಣಾ ಆಯುಕ್ತರನ್ನು ಸರ್ಕಾರ ನೇಮಿಸುವುದಕ್ಕೆ ತಡೆ ನೀಡಿ’ : ಸುಪ್ರೀಂ ಕೋರ್ಟ್‌ನಲ್ಲಿ ಮನವಿ

    ವೈಎಸ್ಆರ್ ಕಾಂಗ್ರೆಸ್, ಟಿಡಿಪಿ, ಎಐಎಡಿಎಂಕೆ, ಬಿಆರ್​ಎಸ್, ಎಐಎಂಐಎಂ ಸೇರಿದಂತೆ ಇತರ ಪಕ್ಷಗಳು ಉಳಿದ 32 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

    ಇನ್ನು ಯಾವ ರಾಜ್ಯದಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದು ಎಂಬುದರ ವಿವರ ಇಲ್ಲಿದೆ..

    ಕರ್ನಾಟಕ: ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಒಟ್ಟು 28 ಸ್ಥಾನಗಳಿದ್ದು, ಬಿಜೆಪಿ 22, ಮಿತ್ರಪಕ್ಷ ಜೆಡಿಎಸ್​ 2 ಮತ್ತು ಕಾಂಗ್ರೆಸ್ 4 ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಪ್ರದೇಶವಾರು ನೋಡುವುದಾದರೆ, ಉತ್ತರ ಕರ್ನಾಟಕದ ಒಟ್ಟು 11 ಸ್ಥಾನಗಳಲ್ಲಿ (ಎನ್​ಡಿಎ 9, ‘I.N.D.I.A ‘ ಮೈತ್ರಿ ಕೂಟ 2), ಕರಾವಳಿ ಕರ್ನಾಟಕದ ಒಟ್ಟು 3ಸ್ಥಾನಗಳಲ್ಲಿ (ಎನ್​ಡಿಎ 3), ದಕ್ಷಿಣ ಕರ್ನಾಟಕದ ಒಟ್ಟು 9 (ಎನ್​ಡಿಎ 8, ‘INDIA’ ಮೈತ್ರಿ ಕೂಟ 1), ಬೆಂಗಳೂರಿನ 5ಸ್ಥಾನಗಳ ಪೈಕಿ (ಎನ್​ಡಿಎ 4, ‘I.N.D.I.A ‘ ಮೈತ್ರಿ ಕೂಟ 1) ಸ್ಥಾನ ಪಡೆದುಕೊಳ್ಳಲಿದೆ.

    ತಮಿಳುನಾಡು: ಡಿಎಂಕೆ ಆಡಳಿತವಿರುವ ತಮಿಳುನಾಡಿನಲ್ಲಿ ಒಟ್ಟು 39 ಸ್ಥಾನಗಳಿದ್ದು, ‘INDIA’ ಮೈತ್ರಿ ಕೂಟ 30, ಎನ್‌ಡಿಎ 5 ಮತ್ತು ಎಐಎಡಿಎಂಕೆ 4 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

    ಪಕ್ಷವಾರು ನೋಡುವುದಾದರೆ, ಡಿಎಂಕೆ 20 ಸ್ಥಾನಗಳನ್ನು ಗೆಲ್ಲಬಹುದು, ಎಐಎಡಿಎಂಕೆ ಮತ್ತು ಬಿಜೆಪಿ ತಲಾ ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ ಆರು ಸ್ಥಾನಗಳನ್ನು ಗೆಲ್ಲಬಹುದು, ಪಿಎಂಕೆ ಒಂದು ಸ್ಥಾನವನ್ನು ಮತ್ತು ಇತರರು ನಾಲ್ಕು ಸ್ಥಾನಗಳನ್ನು ಗೆಲ್ಲಬಹುದು.

    ಪುದುಚೇರಿ: ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ ಬೆಂಬಲದೊಂದಿಗೆ ಪುದುಚೇರಿಯ ಏಕೈಕ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಬಹುದು ಎಂದು ಸಮೀಕ್ಷೆ ಹೇಳಿದೆ.

    ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ಒಟ್ಟು 25 ಸ್ಥಾನಗಳಿದ್ದು, ಆಡಳಿತ ಪಕ್ಷ ವೈಎಸ್‌ಆರ್‌ಸಿಪಿ 15 ಸ್ಥಾನ, ತೆಲುಗು ದೇಶಂ ಪಕ್ಷವು 10 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

    ತೆಲಂಗಾಣ: ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಒಟ್ಟು 17 ಸ್ಥಾನಗಳಿದ್ದು, ಆಡಳಿತಾರೂಢ ಕಾಂಗ್ರೆಸ್ 9ಸ್ಥಾನ ಗೆಲ್ಲಬಹುದು. ಬಿಜೆಪಿ 5 ಸ್ಥಾನ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) 2 ಸ್ಥಾನಗಳನ್ನು ಗೆಲ್ಲಬಹುದು. ಅಸಾದುದ್ದೀನ್ ಓವೈಸಿಯ ಎಐಎಂಐಎಂ ಕೇವಲ ಒಂದು ಸ್ಥಾನವನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

    ಕೇರಳ: ಕೇರಳದಲ್ಲಿ ಒಟ್ಟು 20 ಸ್ಥಾನಗಳಿದ್ದು, ಆಡಳಿತದಲ್ಲಿರುವ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ 17 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಬಿಜೆಪಿ ಉಳಿದ ಮೂರು ಸ್ಥಾನಗಳನ್ನು ಗೆಲ್ಲಬಹುದು.

    ಫೆಬ್ರವರಿ 5 ಮತ್ತು 23 ರ ನಡುವೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ ಮತ್ತು ಪುದುಚೇರಿಯ ಎಲ್ಲಾ 130 ಲೋಕಸಭಾ ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹವನ್ನು ನಡೆಸಲಾಗಿದೆ.

    ಶುಗರ್​ಗೆ ಇನ್ನು ಗುಡ್​ಬೈ:ಸಿಎಂ ಪೋಟೋದೊಂದಿಗೆ ​ಫೇಕ್ ವೀಡಿಯೋ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts