More

    ‘ಚುನಾವಣಾ ಆಯುಕ್ತರನ್ನು ಸರ್ಕಾರ ನೇಮಿಸುವುದಕ್ಕೆ ತಡೆ ನೀಡಿ’ : ಸುಪ್ರೀಂ ಕೋರ್ಟ್‌ನಲ್ಲಿ ಮನವಿ

    ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರನ್ನು (ಇಸಿ) ನೇಮಕ ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

    ಇದನ್ನೂ ಓದಿ: ಶುಗರ್​ಗೆ ಇನ್ನು ಗುಡ್​ಬೈ:ಸಿಎಂ ಪೋಟೋದೊಂದಿಗೆ ​ಫೇಕ್ ವೀಡಿಯೋ ವೈರಲ್​!

    ಸರ್ಕಾರ ಚುನಾವಣಾ ಆಯುಕ್ತರನ್ನು ನೇಮಿಸುವ ಕ್ರಮವು ಸಂವಿಧಾನದ 14, 21, 50 ಮತ್ತು 324 ನೇ ವಿಧಿಗಳ ಅಡಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ತತ್ವಗಳ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲಿ ನ್ಯಾಯಾಲಯವು ನಿಗದಿಪಡಿಸಿದ ತತ್ವಗಳಿಗೆ ಇದು ವಿರುದ್ಧವಾಗಿದೆ ಎಂದು ವಕೀಲ ವರುಣ್ ಠಾಕೂರ್ ಮೂಲಕ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸಲ್ಲಿಸಿದ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

    ಇದಕ್ಕೂ ಮುನ್ನ, ಇಸಿ ನೇಮಕದ ಹೊಸ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಜಯಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೊಸ ಕಾನೂನು CEC ಮತ್ತು ECಗಳನ್ನು ಆಯ್ಕೆ ಮಾಡುವ ಉದ್ದೇಶಕ್ಕಾಗಿ ರಚಿಸಲಾದ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಾಧೀಶರ ಸ್ಥಾನವನ್ನು ಸಚಿವರನ್ನಾಗಿ ಮಾಡಿದೆ. ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ನೇರ ಸಂಘರ್ಷದಲ್ಲಿದೆ ಎಂದು ಮನವಿಯಲ್ಲಿ ಹೇಳಲಾಗಿತ್ತು. ಜಯಾ ಮನವಿ ಪರಿಗಣಿಸಿ ಸುಪ್ರೀಂ ಕೋರ್ಟ್ ಜನವರಿ 12 ರಂದು ನೋಟಿಸ್ ನೀಡಿತ್ತು.

    ಇನ್ನು ಈ ಅರ್ಜಿಯ ಬಾಕಿ ಇರುವಾಗಲೇ, ಚುನಾವಣಾ ಆಯೋಗದ ಸದಸ್ಯ ಅರುಣ್ ಗೋಯೆಲ್ ಮಾರ್ಚ್ 9ರಂದು ರಾಜೀನಾಮೆ ನೀಡಿದ್ದರು. ಅದನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ ಎಂದು ಮನವಿಯಲ್ಲಿ ವಾದಿಸಲಾಗಿದೆ.

    ಕಾಂತಾರ 2 ರಲ್ಲಿ ಜೂ.ಎನ್​ಟಿಆರ್​.. ಕನ್ನಡ- ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಸಂಚಲನ!

    “2024 ರ ಲೋಕಸಭಾ ಚುನಾವಣೆಗೆ ಶೀಘ್ರ ನೋಟಿಫಿಕೇಷನ್​ ಘೋಷಣೆಯಾಗಬೇಕಿದ್ದು, ಹೊಸ ಆಯುಕ್ತರ ನೇಮಕವು ತಕ್ಷಣವೇ ಆಗಬೇಕಿದೆ. ಅದಕ್ಕಾಗಿ ನ್ಯಾಯಾಲಯವು ಅನೂಪ್ ಪ್ರಕರಣದಲ್ಲಿ ಸ್ಪಷ್ಟ ತೀರ್ಪು ನೀಡಿದೆ.

    “ಅನೂಪ್ ಬರನ್ವಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ” ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ಹುದ್ದೆಗಳ ನೇಮಕಾತಿಗಾಗಿ ನಿಯಮಗಳು/ವಿಧಾನಗಳನ್ನು ಅನುಸರಿಸಲು ಕೇಂದ್ರಕ್ಕೆ ತಕ್ಷಣ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts