More

    ಡಾ.ಬಾಬು ಜಗಜೀವನ ರಾಂ ಸೇವೆ ಸ್ಮರಣೀಯ; ಆಹಾರವನ್ನು ಪಡಿತರ ಮೂಲಕ ವಿತರಿಸಿದ್ದರು; ಡಿ.ಎಸ್.ಮಾಳಗಿ ಹೇಳಿಕೆ

    ಹಾವೇರಿ: ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ ನಗರದ ಕಾಗಿನೆಲೆ ರಸ್ತೆಯಲ್ಲಿನ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಶುಕ್ರವಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 117ನೇ ಜಯಂತಿ ಆಚರಿಸಲಾಯಿತು.
    ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಮಾತನಾಡಿ, ಡಾ.ಬಾಬು ಜಗಜೀವನ ರಾಂ ಅವರು ಬಿಹಾರದಲ್ಲಿ ಚಮ್ಮಾರ ಸಮಾಜದಲ್ಲಿ ಜನಿಸಿ, ಉನ್ನತ ಶಿಕ್ಷಣ ಪಡೆದು ಬಿಹಾರದಿಂದ 9 ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದರು. ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ, ರೈಲ್ವೆ, ಕೃಷಿ, ರಕ್ಷಣಾ ಇಲಾಖೆಗಳ ಸಚಿವರಾಗಿ ಜನಾನುರಾಗಿ ಕೆಲಸಗಳನ್ನು ಮಾಡಿದ್ದಾರೆ. ದೇಶದ ರೈತರಿಗೆ ಬೀಜ, ಗೊಬ್ಬರ, ನೀರಾವರಿ ಕಲ್ಪಿಸಿಕೊಟ್ಟು ದೇಶದಲ್ಲಿ ಬೆಳೆದ ಆಹಾರವನ್ನು ಪಡಿತರ ಮೂಲಕ ಜನರಿಗೆ ನೀಡಿದರು. ಉಪ ಪ್ರಧಾನಮಂತ್ರಿಯಾಗಿ ದೇಶಕ್ಕೆ ನೀಡಿದ ಕೊಡುಗೆ ಸ್ಮರಣೀಯ ಎಂದರು.
    ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, ಡಾ.ಬಾಬು ಜಗಜೀವನ ರಾಂ ಅವರು ಕಾರ್ಮಿಕ ಸಚಿವರಾಗಿದ್ದಾಗ ದೇಶದ ಕಾರ್ಮಿಕರ ಹಕ್ಕು ಬಾದ್ಯತೆಗಳ ಬಗ್ಗೆ ಕಾನೂನು ಜಾರಿಗೆ ತಂದರು. ಈ ದೇಶದ ಕಾರ್ಮಿಕರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡಿದರು. ಈ ದೇಶದಲ್ಲಿ ಎಲ್ಲಿಯವರೆಗೂ ಜಾತೀಯತೆ ಇರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಅವಶ್ಯವಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಹಲವಾರು ಬಾರಿ ಒತ್ತಡ ತಂದಿದ್ದರು ಎಂದರು.
    ಸಮಿತಿಯ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ವೈ.ಎನ್.ಮಾಸೂರ, ಸುಕ್ಷೇತ್ರ ದೇವರಗುಡ್ಡದ ಗೊರವಯ್ಯನವರಾದ ಕರಿಬಸಪ್ಪ ಉರ್ಮಿ, ಮಾತಾರ್ಂಡಪ್ಪ ಏಳುಕುರಿ, ತಮ್ಮಣ್ಣ ಮುದ್ದಿ, ವಿಭೂತಿ ಶೆಟ್ಟಿ, ನಾಗರಾಜ ಮ್ಯಾದಾರ, ಚಂದ್ರಪ್ಪ ಹರಿಜನ, ಜಗದೀಶ ಹರಿಜನ, ಹನುಮಂತಪ್ಪ ಹರಿಜನ, ಶಂಭುಲಿಂಗಪ್ಪ ದಿವಠರ, ರಾಮಪ್ಪ ಮುದಕಮ್ಮನವರ, ಸೋಮಪ್ಪ ಬಸಾಪುರ, ಪ್ರಶಾಂತ ಜೋಗಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts