

Rahul Gandhi: 2023ರಲ್ಲಿ ಶುರುವಾದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನೂರಾರು ಸಾವು-ನೋವುಗಳಿಗೆ ಕಾರಣವಾಗಿತ್ತು. ಇದೇ ಮೊದಲ ಬಾರಿಗೆ ನಾಳೆ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗಲಭೆ ಪೀಡಿತ ಪ್ರದೇಶದ ಪ್ರಧಾನಿ ಭೇಟಿ ದೊಡ್ಡ ವಿಷಯವಲ್ಲ ಎಂದು ಶುಕ್ರವಾರ(ಸೆ.12) ಹೇಳಿದ್ದಾರೆ.
ಗುಜರಾತ್ನ ಜುನಾಗಢ್ ಏರ್ಪೋರ್ಟ್ನಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, "ಮಣಿಪುರ ಬಹಳ ಸಮಯದಿಂದ ತೊಂದರೆಯಲ್ಲಿದೆ. ಪ್ರಧಾನಿ ಮೋದಿ ಈಗ ಅಲ್ಲಿಗೆ ಹೋಗಲು ನಿರ್ಧರಿಸಿದ್ದಾರೆ. ಆದ್ದರಿಂದ ಅದು ದೊಡ್ಡ ವಿಷಯವಲ್ಲ. ಭಾರತದಲ್ಲಿ ಇಂದಿನ ಪ್ರಮುಖ ವಿಷಯವೆಂದರೆ ಮತ ಕಳ್ಳತನ. ಎಲ್ಲೆಡೆ ಜನರು "ವೋಟ್ ಚೋರ್" ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಗಳಲ್ಲಿ ಮತಗಳ್ಳತನ ಮೂಲಕ ಗೆದ್ದಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ನಾವು ಅದನ್ನು ಸಾಬೀತುಪಡಿಸಿದ್ದೇವೆ. ಆದ್ದರಿಂದ, ಮುಖ್ಯ ವಿಷಯವೆಂದರೆ ಮತ ಕಳ್ಳತನ ಎಂದು ತಿಳಿಸಿದರು.
ಮೋದಿ ನಾಳೆ (ಸೆ. 12) ಮಣಿಪುರಕ್ಕೆ ಭೇಟಿ ನೀಡಲಿದ್ದು, ಚುರಾಚಂದ್‌ಪುರ ಮತ್ತು ರಾಜ್ಯ ರಾಜಧಾನಿ ಇಂಫಾಲ್‌ನಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಎರಡು ವರ್ಷಗಳ ಹಿಂದೆ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಪ್ರಧಾನಿಯವರು ಮಣಿಪುರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. (ಏಜೆನ್ಸೀಸ್)