'ಗಂಗಾ ಎಕ್ಸ್​ಪ್ರೆಸ್​​ವೇ' ಉತ್ತರ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ: ಪಿಎಂ ಮೋದಿ

1204707
Published on

ಶಹಜಾನ್​​ಪುರ: ಉತ್ತರ ಪ್ರದೇಶ ರಾಜ್ಯದ ಶಹಜಹಾನ್‌ಪುರ ಜಿಲ್ಲೆಯಲ್ಲಿ 594 ಕಿಮೀ ಉದ್ದದ ಸುಮಾರು 36,230 ಕೋಟಿ ರೂ. ವೆಚ್ಚದ ಗಂಗಾ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಡಿಸೆಂಬರ್ 18) ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಗಂಗಾ ಎಕ್ಸ್​ಪ್ರೆಸ್​ ಹೈವೇ ಉತ್ತರ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯುವಕರಿಗೆ ಉದ್ಯೋಗ ಪಡೆಯಲು ಇದು ಸಹಕಾರಿಯಾಗಿದೆ. ‘‘ಮೀರತ್, ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬದೌನ್, ಶಹಜಹಾನ್‌ಪುರ್, ಹರ್ದೋಯಿ, ಉನ್ನಾವೋ, ರಾಯ್‌ಬರೇಲಿ, ಪ್ರತಾಪ್‌ಗಢ್ ಮತ್ತು ಪ್ರಯಾಗ್‌ರಾಜ್‌ನಲ್ಲಿರುವ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಏನಿದು ಗಂಗಾ ಎಕ್ಸ್​ಪ್ರೆಸ್​ವೇ?: ಉತ್ತರಪ್ರದೇಶದ ಪಶ್ಚಿಮ ಮತ್ತು ಪೂರ್ವ ಭಾಗವನ್ನು ಸಂಪರ್ಕಿಸುವ ‘ಗಂಗಾ ಎಕ್ಸ್​ಪ್ರೆಸ್ ವೇ’, ದೆಹಲಿ, ಹರ್ಯಾಣ ಮತ್ತು ಬಿಹಾರಕ್ಕೆ ಉತ್ತರಪ್ರದೇಶವನ್ನು ಇನ್ನಷ್ಟು ಸಮೀಪ ಮಾಡಲಿದೆ. ಗಂಗಾ ಎಕ್ಸ್​ಪ್ರೆಸ್​ ವೇ 594 ಕಿಮೀ ಉದ್ದ ಇರಲಿದ್ದು, 2020ರ ನವೆಂಬರ್​ 26ರಂದು ಯೋಗಿ ಆದಿತ್ಯನಾಥ್​ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. ಸುಮಾರು 36,000 ಕೋಟಿ ಅನುದಾನದಲ್ಲಿ ಈ ಯೋಜನೆ ನಿರ್ಮಾಣವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net