More

    ಬೆಳಗಾವಿ ಗಲಭೆ: ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್​) ಯ ಪುಂಡಾಟ ಮುಂದುವರಿದಿದ್ದು, ಎಂಇಎಸ್ ನಿಷೇಧಕ್ಕೆ ರಾಜ್ಯಾದ್ಯಂತ ಆಗ್ರಹ ಕೇಳಿಬಂದಿದೆ.
    ಬೆಳಗಾವಿಯಲ್ಲಿ ನಿನ್ನೆ ರಾತ್ರಿ 20ಕ್ಕೂ ಹೆಚ್ಚು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ, ರಾತ್ರೋರಾತ್ರಿ ಬೆಳಗಾವಿಯ ಅನಗೊಳದಲ್ಲಿರುವ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಕೈ ಕತ್ತರಿಸಿ ಅಪಮಾನ ಎಸಗಿದ್ದ ಆರೋಪದ ಮೇರೆಗೆ 27 ಮಂದಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣವಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಳಗಾವಿ ನಗರದ್ಯಾಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಶನಿವಾರ ಬೆಳಗ್ಗೆ 8 ಗಂಟೆಯಿಂದ ಭಾನುವಾರ ರಾತ್ರಿ ಎಂಟು ಗಂಟೆವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ.

    ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಪ್ರಕರಣ ಖಂಡಿಸಿ ಕನ್ನಡಪರ ಹಾಗೂ ಹಿಂದುಪರ ಹೋರಾಟಗಾರರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿಸುತ್ತಿದ್ದಾರೆ. ಎಂಇಎಸ್ ಪುಂಡರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕನ್ನಡಪರ ಸಂಘಟನೆಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿವೆ. ನೂರಾರು ಕುರಿಗಳು ಕರೆತಂದು, ಹೆಗಲ ಮೇಲೆ ಕಂಬಳಿ ಹೊತ್ತು ಪ್ರತಿಭಟನೆಗಿಳಿದ ಪ್ರತಿಭಟನಾಕಾರರು, ಬೆಳಗಾವಿ ಜಿಲ್ಲೆಯಿಂದ ಎಂಇಎಸ್​ ಪುಂಡರನ್ನು ಹೊರಕಳಿಸಿ. ಇಲ್ಲವಾದರೆ ಕಾನೂನು ಮೀರಿ ಎಂಇಎಸ್ ಪುಂಡರ ವಿರುದ್ಧ ನಾವೇ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಬೆಳಗಾವಿ ಗಲಭೆ: ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ

    ಇನ್ನು ಬೆಂಗಳೂರಿನಲ್ಲಿ ಶಿವಾಜಿ ಮಾಹಾರಾಜರ ಮೂರ್ತಿಗೆ ಮಸಿ ಬಳಿದ ಆರೋಪ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನ ಮಾಡಿ, ಕಲ್ಲು ನಡೆಸಿದ್ದ ಪ್ರಕರಣ ಹಿನ್ನೆಲೆ ಮರಾಠಿಗರೇ ಹೆಚ್ಚು ಇರುವ ನಿಪ್ಪಾಣಿ ನಗರಕ್ಕೆ ಭೇಟಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ ಅವರು ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜ್ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ಭಾಷಾ ಭಾವೈಕ್ಯದ ಸಂದೇಶ ಸಾರಿದರು.

    ಬೆಳಗಾವಿಯಲ್ಲಿ ಮುಂದುವರಿದ ಎಂಇಎಸ್ ಪುಂಡರ ಅಟ್ಟಹಾಸ: ರಾಯಣ್ಣನ ಪ್ರತಿಮೆ ಭಗ್ನ, 144 ಸೆಕ್ಷನ್ ಜಾರಿ

    ಗಂಡನ ಆ ಒಂದು ವಿರೋಧಕ್ಕೆ ನೊಂದು ಮಗು ಜತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts