ನಾಳೆ BSNL 'ಸ್ವದೇಶಿ' 4G ನೆಟ್‌ವರ್ಕ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ| network

BSNL
Published on

ನವದೆಹಲಿ: ಬಿಎಸ್ಎನ್ಎಲ್ ನಾಳೆಯಿಂದ (ಸೆ.27) ಭಾರತದಾದ್ಯಂತ ತನ್ನ 4G ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ ರಾಬರ್ಟ್ ಜೆ ರವಿ ದೃಢಪಡಿಸಿದ್ದಾರೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ 'ಸ್ವದೇಶಿ' 4ಜಿ ನೆಟ್‌ವರ್ಕ್ ಅನ್ನು ನಾಳೆ ಒಡಿಶಾದ ಜಾರ್ಸುಗುಡದಲ್ಲಿ ಉದ್ಘಾಟಿಸಲಿದ್ದಾರೆ. ಡಿಜಿಟಲ್ ಭಾರತ್ ನಿಧಿ ಮೂಲಕ ಭಾರತದ 100 ಪ್ರತಿಶತ 4G ಸ್ಯಾಚುರೇಶನ್ ನೆಟ್‌ವರ್ಕ್ ಅನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ.

ಇದು ದೂರಸಂಪರ್ಕ ಉಪಕರಣಗಳನ್ನು ಉತ್ಪಾದಿಸುವ ಮತ್ತು ತಯಾರಿಸುವ ರಾಷ್ಟ್ರಗಳ ಅಪೇಕ್ಷಿತ ಲೀಗ್‌ಗೆ ಭಾರತ ಪ್ರವೇಶವನ್ನು ಗುರುತಿಸುತ್ತದೆ. ಭಾರತ ನಿರ್ಮಿತ ನೆಟ್‌ವರ್ಕ್ ಕ್ಲೌಡ್ ಆಧಾರಿತವಾಗಿದ್ದು, ಭವಿಷ್ಯದ 5G ಗೆ ಸರಾಗವಾಗಿ ಅಪ್‌ಗ್ರೇಡ್ ಮಾಡಬಹುದು ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ನಾಳೆ ಬಿಎಸ್‌ಎನ್‌ಎಲ್‌ನ 4ಜಿ ಸೇವೆ ದೇಶದ ಸುಮಾರು 98,000 ಪ್ರದೇಶಗಳಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಹಲವಾರು ರಾಜ್ಯಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

(ಏಜೆನ್ಸೀಸ್)

ದೇಶಾದ್ಯಂತ 1 ಲಕ್ಷ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು BSNL 25,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಇನ್ನೂ 1 ಲಕ್ಷ ಟವರ್​ ಸ್ಥಾಪಿಸಲು ಯೋಜನೆ ರೂಪಿಸಿಕೊಂಡಿದೆ. ಸರ್ಕಾರಿ ಸ್ವಾಮ್ಯದ ಕಂಪನಿಯು ನೆಟ್‌ವರ್ಕ್ ಉಪಕರಣಗಳಿಗಾಗಿ TCS ಮತ್ತು C-DOT ಜೊತೆ ಪಾಲುದಾರಿಕೆ ಹೊಂದಿದ್ದು, ಅದರ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸಲು ಹೆಚ್ಚುವರಿಯಾಗಿ 47,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಎಸ್ಎನ್ಎಲ್ ಈಗಾಗಲೇ ತನ್ನ 4G ಸೇವೆಗಳನ್ನು ಪ್ರಾರಂಭಿಸಿದೆ. ಇನ್ನೂ 4G ಬಳಕೆಯ ಸಾಧನಗಳನ್ನು ಹೊಂದಿರುವ ಬಳಕೆದಾರರು ಈಗ ತಮ್ಮ ಬಿಎಸ್ಎನ್ಎಲ್ ಸಿಮ್‌ಗಳನ್ನು ಬಳಸಿ 4G ಸೇವೆಗಳನ್ನು ಅನುಭವಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net