ಬಿಸಿ ಹಾಲಿನ ಪಾತ್ರೆಗೆ ಬಿದ್ದು ಮಗು ಸಾವು! ಸಿಸಿಟಿವಿಯಲ್ಲಿ ದೃಶ್ಯ ಸೆರೆ | Milk Container

untitled-design-2025-09-26t133515951-68d64957daf32
Published on

Milk Container : ಶಾಲೆಯ ಅಡುಗೆಮನೆಯಲ್ಲಿ ಇರಿಸಿದ್ದ ಹಾಲಿನ ಪಾತ್ರೆಯೊಳಗೆ ಬಿದ್ದು 17 ತಿಂಗಳ ಬಾಲಕಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ.

ಘಟನೆ ಏನು?

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ ವಿಡಿಯೋದಲ್ಲಿ ಪಟ್ಟ ಮಗುವೊಂದು ತನ್ನ ತಾಯಿಯೊಂದಿಗೆ ಅಡುಗೆ ಮನೆಗೆ ಹೋಗುತ್ತಿರುವುದನ್ನು ಕಾಣಬಹುದು. ಈ ವೇಳೆ ಮಗು ಬಿಸಿ ಹಾಲು ಸಂಗ್ರಹಿಸಿದ ಪಾತ್ರೆಯನ್ನು ನೋಡಲು ನಿಂತಿದ್ದಾಗ ಕಾಲು ಜಾರಿ ಪಾತ್ರೆಯೊಳಗೆ ಬಿದ್ದಿದ್ದಾಳೆ.

ಇನ್ನು ಮಗು ಜೋರಾಗಿ ಕಿರುಚಲು ಅರಂಭಿಸಿ ಹೊರ ಬರಲು ಪ್ರಯತ್ನಿಸುತ್ತದೆ. ಆದರೆ ಇದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಮಗಳ ಕಿರುಚಾಟವನ್ನು ನೋಡಿದ ತಾಯಿ ಹಾಲಿನ ಪಾತ್ರೆ ಬಳಿ ಬಂದು ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಈ ವಿಡಿಯೋ ತೋರಿಸುತ್ತಿದೆ.

ಮೃತ ಮಗುವನ್ನು ಅಕ್ಷತಾ ಎಂದು ಗುರುತಿಸಲಾಗಿದ್ದು, ಆಕೆ ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಕೃಷ್ಣ ವೇಣಿ ಅವರ ಪುತ್ರಿ ಎಂದು ಸುದ್ಧಿ ಮೂಲಗಳು ವರದಿ ಮಾಡಿವೆ. ಮಗುವನ್ನು ಮನೆಯಲ್ಲಿ ಇರಿಸಲಾಗದೆ ಆಕೆಯನ್ನು ಶಾಲೆಗೆ ಕರೆದುಕೊಂಡು ಬಂದಿದ್ದಳು ಎಂದು ತಿಳಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು!

ಮಗುವು ಪಾತ್ರೆಯೊಳಗೆ ಬಿದ್ದಿದ್ದನ್ನು ನೋಡಿದ ತಾಯಿ ಆಕೆಯನ್ನು ಎತ್ತುಕೊಂಡು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಈ ವೇಳೆಗಾಗಲೇ ಮಗುವಿನ ದೇಹ ಸುಟ್ಟುಹೋಗಿದ್ದು, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆದರೆ, ತೀವ್ರ ನೋವಿನಿಂದ ಬಳಲುತ್ತಿದ್ದ ಮಗುವು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net