ಸೆಪ್ಟೆಂಬರ್ 13 ರಂದು ಹಿಂಸಾಚಾರ ಪೀಡಿತ ಮಣಿಪುರ, ಮಿಜೋರಾಂಗೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ! PM Modi

PM Modi,Mizoram
Published on

PM Modi: ಇದೇ ಸೆಪ್ಟೆಂಬರ್ 13 ರಂದು ಮಿಜೋರಾಂ ಮತ್ತು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಐಜ್ವಾಲ್‌ನ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಈ ಬಗ್ಗೆ ಮೂಲಗಳ ತಿಳಿಸಿರುವ ಪ್ರಕಾರ, ಪ್ರಧಾನಿ ಮೋದಿಯೂ ಮಿಜೋರಾಂನಿಂದ ತಮ್ಮ ಭೇಟಿಯನ್ನು ಪ್ರಾರಂಭಿಸಲಿದ್ದು, ಅಲ್ಲಿ 51.38 ಕಿ.ಮೀ ಉದ್ದದ ಹೊಸ ಬೈರಾಬಿ-ಸೈರಾಂಗ್ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಈ ಹೊಸ ಯೋಜನೆಯು ಕೇಂದ್ರದ ಆಕ್ಟ್ ಈಸ್ಟ್ ನೀತಿಯ ಅಡಿಯಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿದ್ದು, ಈಶಾನ್ಯ ರಾಜ್ಯಗಳದಾದ್ಯಂತ ಸಂಪರ್ಕ ಬಲಪಡಿಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ರೈಲು ಮಾರ್ಗವು ಪ್ರವೇಶ ಮತ್ತು ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ಸಲುವಾಗಿ ಅಸ್ಸಾಂನ ಸಿಲ್ಚಾರ್ ಮೂಲಕ ಐಜ್ವಾಲ್ ಅನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.

ಮಿಜೋರಾಂ ನಂತರ ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ

ಮಿಜೋರಾಂನಲ್ಲಿ ತಮ್ಮ ಕಾರ್ಯಕ್ರಮವನ್ನು ಮುಗಿಸಿದ ನಂತರ, ಪ್ರಧಾನಿ ಮೋದಿ ಮಣಿಪುರಕ್ಕೆ ವಿಮಾನದಲ್ಲಿ ತೆರಳುವ ನಿರೀಕ್ಷೆಯಿದೆ. 2023ರ ಮೇ ದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಇದು ಮೊದಲ ರಾಜ್ಯ ಭೇಟಿಯಾಗಿದೆ. ಪ್ರಧಾನ ಮಂತ್ರಿಯವರ ಭೇಟಿಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಮಿಜೋರಾಂ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇಂಫಾಲ್ ಅಧಿಕಾರಿಗಳು ಭೇಟಿಯ ಬಗ್ಗೆ ಇನ್ನೂ ದೃಢವಾಗಿಲ್ಲ ಎಂದು ತಿಳಿಸಿದ್ದಾರೆ.

ಐಜ್ವಾಲ್‌ನಲ್ಲಿ ಬರದಿಂದ ಸಾಗುತ್ತಿರುವ ಸಿದ್ಧತೆಗಳು

ಮಿಜೋರಾಂ ಮುಖ್ಯ ಕಾರ್ಯದರ್ಶಿ ಖಿಲ್ಲಿ ರಾಮ್ ಮೀನಾ ತಿಳಿಸಿರುವ ಅವರು ಪ್ರಧಾನಿ ಆಗಮನದ ಸಿದ್ಧತೆಯನ್ನು ನಿರ್ಣಯಿಸಲು ವಿವಿಧ ಇಲಾಖೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಲ್ಲದೆ, ಭದ್ರತಾ ವ್ಯವಸ್ಥೆಗಳು, ಸಂಚಾರ ನಿಯಂತ್ರಣ ಮತ್ತು ಸಾರ್ವಜನಿಕ ಸ್ವಾಗತ ಸೇರಿದಂತೆ ಚರ್ಚೆಗಳು ನಡೆದವು. ಐಜ್ವಾಲ್‌ನ ಲಮ್ಮೌಲ್‌ನಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ನೌಕರರು, ರೈತರು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲು ಅಧಿಕಾರಿಗಳು ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ

ಜನಾಂಗೀಯ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. 2023 ಮೇಯಿಂದ, ರಾಜ್ಯವು ಪ್ರಾಥಮಿಕವಾಗಿ ಮೈಟೈ ಮತ್ತು ಕುಕಿ-ಝೋ ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆಗಳಿಗೆ ಸಾಕ್ಷಿಯಾಗಿದೆ.

ಅಲ್ಲದೆ, ಈ ಸಂಘರ್ಷದಲ್ಲಿ ಕನಿಷ್ಠ 60 ಜನರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸಾವಿರಾರು ಜನರನ್ನು ಸ್ಥಳಾಂತರಿಸಿದೆ. ಮಣಿಪುರ ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ, ಇಂದಿನ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಫೆಬ್ರವರಿ 9 ರಂದು ರಾಜೀನಾಮೆ ನೀಡಿದ ನಂತರ 2025ರ ಫೆಬ್ರವರಿ,13 ರಂದು ರಾಷ್ಟ್ರಪತಿ ಆಡಳಿತ ಹೇರಲಾಯಿತು. 2027 ರವರೆಗೆ ಅಧಿಕಾರಾವಧಿಯನ್ನು ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತುಗೊಳಿಸಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net