

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೇಹ್ಗೆ ದಿಢೀರ್ ಭೇಟಿ ನೀಡಿದ್ದು, ಸೇನಾ ಮುಂಚೂಣಿ ನೆಲೆಗಳಿಗೂ ಭೇಟಿ ನೀಡಿದರು.
ಅಲ್ಲಿ ಯೋಧರೊಂದಿಗೆ ಸಾಕಷ್ಟು ಸಮಯ ಮಾತುಕತೆ ನಡೆಸಿದರು. ಲಡಾಖ್ನ ನೀಮು ಮುಂಚೂಣಿ ನೆಲೆಯಲ್ಲಿ ಈ ಮಾತುಕತೆ ನಡೆಯಿತು. 11 ಸಾವಿರ ಅಡಿ ಎತ್ತರದಲ್ಲಿ ಇಂಡಸ್ ನದಿ ತಟದಲ್ಲಿ ನಿಂತು ಝಾಂಸ್ಕಾರ್ ಪರ್ವತ ಶ್ರೇಣಿಯ ಸೌಂದರ್ಯವನ್ನೂ ಅವರು ಆಸ್ವಾದಿಸಿದರು.
ಯೋಧರು ಬಿರುಗಣ್ಣು ಬಿಟ್ಟುಕೊಂಡು ಪರಸ್ಪರ ನೋಡುತ್ತಾ ಕುಳಿತಿರುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೇಹ್ಗೆ ದಿಢೀರ್ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಮತ್ತು ಸೇನಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪ್ರಧಾನಿ ಅವರಿಗೆ ಸಾಥ್ ನೀಡಿದ್ದಾರೆ.