pm modi : ದುರ್ಗಾ ಮಾತೆ ಮೇಲೆ ಸ್ವತಃ ಮೋದಿಯೇ ಹಾಡು ಬರೆದಿದ್ದಾರೆ.. ವಿಡಿಯೋ ವೈರಲ್!

pm modi
Published on

ನವದೆಹಲಿ: ಯಾರು ಏನೇ ಟೀಕೆ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ(pm modi) ಅವರು ಮಾತ್ರ ತಮ್ಮ ದೈವ ಭಕ್ತಿಯನ್ನು ವ್ಯಕ್ತಪಡಿಸುವುದಕ್ಕೆ ಹಿಂಜರಿಯುವುದಿಲ್ಲ. ಹಬ್ಬ ಹರಿದಿಗಳು ಮತ್ತು ದೈವೀಕಾರ್ಯಗಳನ್ನು ತಪ್ಪದೆ ಶ್ರದ್ಧಾ, ಭಕ್ತಿ ಭಾವದಿಂದ ನಿರ್ಹಹಿಸುವ ಅವರು ನವರಾತ್ರಿಯ ಈ ಸಂದರ್ಭದಲ್ಲಿ ದುರ್ಗಾ ಮಾತೆ ಮೇಲಿನ ಭಕ್ತಿಯನ್ನು ಆವಟಿ ಕಾಳೇ ಎಂಬ ಹಾಡನ್ನು ಬರೆದು ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದುರ್ಗಾ ಮಾತೆಯ ಆಶೀರ್ವಾದ ಸದಾ ಜನರ ಮೇಲಿರಲಿ ಎಂಬುದು ಅದರ ಸಾರಾಂಶವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್(ಎಕ್ಸ್) ಖಾತೆಯಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ. “ಇದು ನವರಾತ್ರಿಯ ಶುಭ ಸಮಯ. ಜನರು ದುರ್ಗಾಮಾತೆಯನ್ನು ಭಕ್ತಿಯಿಂದ ವಿವಿಧ ರೀತಿಯಲ್ಲಿ ಪೂಜಿಸುತ್ತಾರೆ. ಈ ಸಂದರ್ಭದಲ್ಲಿ ದುರ್ಗಾ ದೇವಿ ಬಗ್ಗೆ ಭಕ್ತಿ ಮತ್ತು ಸಂತೋಷದೊಂದಿಗೆ ಈ ಹಾಡನ್ನು ಸಮರ್ಪಿಸುತ್ತೇನೆ. ಮಾತೆಯ ಶಕ್ತಿ ಅರಿತು ಮತ್ತು ಅಮ್ಮನ ಅನುಗ್ರಹ ನಮ್ಮೆಲ್ಲರ ಮೇಲಿರಲೆಂದು ನಾನು ಬರೆದಿರುವ ಗಾರ್ಬಾ ಹಾಡು, ಅವಟಿ ಕಾಳೆ ಇಲ್ಲಿದೆ. ಅಮ್ಮನ ಆಶೀರ್ವಾದ ಸದಾ ನಮ್ಮ ಮೇಲಿರಲಿ,'' ಎಂದು ಬರೆದಿದ್ದಾರೆ.

ಮತ್ತೊಂದೆಡೆ, "ಈ ಗಾರ್ಬಾ ಹಾಡನ್ನು ಹಾಡಿದ ಮಾಜಿ ಸಚಿವರಿಗೆ ಮತ್ತು ಅಂತಹ ಮಧುರವಾದ ಸಂಗೀತವನ್ನು ಒದಗಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಎಂದು ಹೇಳಿದ್ದಾರೆ.

ನವರಾತ್ರಿಯ ಸಲುವಾಗಿ ದುರ್ಗಾ ದೇವಿಯನ್ನು ವಿಶ್ವದ ನಾನಾ ದೇಶಗಳಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತಮ್ಮ ದೈವ ಭಕ್ತಿಯನ್ನು ವ್ಯಕ್ತಪಡಿಸಿದ್ದು ಮಾತೆ ದುರ್ಗೆಯ ಮೇಲಿನ ತಮ್ಮ ಹಾಡನ್ನು ಮೋದಿ ಅವರು ಸೋಮವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಈ ಹಾಡು ಟ್ರೆಂಡಿಂಗ್ ಆಗಿದೆ. ನವರಾತ್ರಿಯ ಮಂಗಳಕರ ಸಮಯ ಎಲ್ಲರಿಗೂ ದುರ್ಗಾ ಮಾತೆಯ ಆಶೀರ್ವಾದ ಸಿಗಲಿ ಎಂದು ಮೋದಿ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net