ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹೊಕಾಟೊ.. ಪ್ರಧಾನಿ ಮೋದಿ ಶ್ಲಾಘನೆ

olyampics (1)
Published on

ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹೊಕಾಟೊ ಹೊಟೊಝೆ ಸೆಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

ಶನಿವಾರ ನಡೆದ ಪುರುಷರ ಶಾಟ್‌ಪುಟ್‌ ಎಫ್‌ 57 ಫೈನಲ್‌ನಲ್ಲಿ ಹೊಕಾಟೊ ಹೊಟೊಜೆ ಸೆಮಾ ಕಂಚಿನ ಪದಕ ಗೆದ್ದರು. ತಮ್ಮ ಅಧಿಕೃತ X ಹ್ಯಾಂಡಲ್‌ ನಲ್ಲಿ ಪ್ರಧಾನಿ ಮೋದಿ ಅವರು ಹೊಕಾಟೊ ಅವರದ್ದು "ನಂಬಲಾಗದ" ಶಕ್ತಿ. ಇದು ರಾಷ್ಟ್ರಕ್ಕೆ "ಹೆಮ್ಮೆಯ ಕ್ಷಣ" ಎಂದು ಅಭಿನಂದಿಸಿದ್ದಾರೆ.

ಹೊಕಾಟೊ ಹೊಟೊಝೆ ಸೆಮಾ ಅವರು ಪುರುಷರ ಶಾಟ್‌ಪುಟ್ ಎಫ್​57 ನಲ್ಲಿ ಕಂಚಿನ ಪದಕವನ್ನು ತಂದಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯ ಎಂದು ಪ್ರಧಾನಿ ಮೋದಿ X ನಲ್ಲಿ ಬರೆದಿದ್ದಾರೆ.

ಹೊಕಾಟೊ ಅವರು 14.65 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ದಾಖಲಿಸಿದರು, ಇದು ಅವರ ವೈಯಕ್ತಿಕ ಶ್ರೇಷ್ಠವಾಗಿದೆ. ಇರಾನ್‌ನ ಯಾಶಿನ್ ಖೋಸ್ರಾವಿ 15.96 ಮೀ ಎಸೆದು ಚಿನ್ನ ಗೆದ್ದರೆ, 15.06 ಮೀ ಎಸೆದ ಬ್ರೆಜಿಲ್‌ನ ಥಿಯಾಗೊ ಪಾಲಿನೊ ಡಾಸ್ ಸ್ಯಾಂಟೋಸ್ ಬೆಳ್ಳಿ ಪಡೆದರು.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ ಎಫ್ 46 ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಶನಿವಾರ ಭಾರತದ ಪ್ಯಾರಾ ಅಥ್ಲೀಟ್ ಭಾವನಾಬೆನ್ ಚೌಧರಿ ಐದನೇ ಸ್ಥಾನ ಪಡೆದರು. ಭಾವನಾಬೆನ್ ತನ್ನ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ 39.70 ಮೀಟರ್‌ಗಳ ಅತ್ಯುತ್ತಮ ಎಸೆತವನ್ನು ಹಾಕಿದರೂ ಸ್ಪರ್ಧೆಯಿಂದ ಹೊರಗುಳಿದರು.

ಪ್ಯಾರಾಲಿಂಪಿಕ್ಸ್‌ನಲ್ಲಿ ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು 12 ಕಂಚಿನ ಪದಕಗಳೊಂದಿಗೆ ಭಾರತದ ಪದಕಗಳ ಸಂಖ್ಯೆ 27 ಕ್ಕೆ ಏರಿದೆ. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಗೆದ್ದಿರುವ ಅತಿ ಹೆಚ್ಚು ಚಿನ್ನ ಇದಾಗಿದೆ. ವಿಶೇಷವಾಗಿ ಭಾರತದ ಪ್ಯಾರಾ ಅಥ್ಲೀಟ್‌ಗಳು ಮೂರು ಚಿನ್ನ, ಆರು ಬೆಳ್ಳಿ ಮತ್ತು ಆರು ಕಂಚಿನ ಪದಕಗಳೊಂದಿಗೆ ಒಟ್ಟು 15 ಪದಕಗಳನ್ನು ನೀಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net