ಭೋಪಾಲ್: ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಸೋಮನಾಥ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿತಪ್ಪಿವೆ. ನಿಲ್ದಾಣದಿಂದ 150 ಮೀಟರ್ ದೂರದಲ್ಲಿ ಬೆಳಗ್ಗೆ 5.50ಕ್ಕೆ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ಓವರ್ಟೇಕ್ ತಂದ ಆಪತ್ತು; ಬಸ್-ಟೆಂಪೋ ಡಿಕ್ಕಿಯಾಗಿ 17 ಮಂದಿ ಸಾವು, 18 ಜನ ಗಂಭೀರ
ಇಂದೋರ್-ಜಬಲ್‌ಪುರ್ ಎಕ್ಸ್‌ಪ್ರೆಸ್ ರೈಲು (22191) “ಡೆಡ್ ಸ್ಟಾಪ್ ಸ್ಪೀಡ್” ನಲ್ಲಿ ಹಳಿತಪ್ಪಿತು.
ಜಬಲ್‌ಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 6 ರ ಸಮೀಪಕ್ಕೆ ಬರುತ್ತಿದ್ದಂತೆ, ಮುಂಭಾಗದ ಎರಡು ಬೋಗಿಗಳು ಹಳಿತಪ್ಪಿವೆ. ರೈಲು ಇಂದೋರ್‌ನಿಂದ ಬರುತ್ತಿತ್ತು,
ತಿಂಗಳ ಹಿಂದೆ ಉತ್ತರ ಪ್ರದೇಶದ ಕಾನ್ಪುರ ರೈಲು ನಿಲ್ದಾಣದ ಬಳಿ ಅಹಮದಾಬಾದ್-ವಾರಣಾಸಿ ಸಬರಮತಿ ಎಕ್ಸ್‌ಪ್ರೆಸ್‌ನ 20 ಬೋಗಿಗಳು ಹಳಿತಪ್ಪಿದ್ದವು. ಇದಾದ ಬಳಿಕ ಈಗ ಜಬಲ್‌ಪುರ ರೈಲು ಅಪಘಾತ ಸಂಭವಿಸಿದೆ. ಹಳಿ ಮೇಲೆ ಕಲ್ಲು ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜುಲೈ 30 ರಂದು, ಹೌರಾ-ಮುಂಬೈ ಸಿಎಸ್‌ಎಂಟಿ ಮೇಲ್‌ನ 18 ಟ್ರ್ಯಾಕ್‌ಗಳು ಜಾರ್ಖಂಡ್‌ನ ಜಮ್‌ಶೆಡ್‌ಪುರ ಬಳಿ ಹಳಿತಪ್ಪಿದವು. ಈ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಇದಲ್ಲದೇ ದೇಶಾದ್ಯಂತ ಪದೇ ಪದೇ ರೈಲು ಅಪಘಾತಗಳು ಸಂಭವಿಸುತ್ತಿವೆ.
ಬಸ್ಗಾಗಿ ಕಾಯುತ್ತಿದ್ದ ಮಹಿಳೆಗೆ ಬೈಕ್ನಲ್ಲಿ ಲಿಫ್ಟ್ಕೊಟ್ಟು ಅತ್ಯಾಚಾರ?