ಚೆನ್ನೈ: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಗೆ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಲಿಫ್ಟ್ ಕೊಟ್ಟು ಅತ್ಯಾಚಾರವೆಸಗಿದ ಘಟನೆ ತಂಜಾವೂರು ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ನನಗೂ ಲೈಂಗಿಕ ಕಿರುಕುಳ ಆಗಿತ್ತು! ಸಿಮ್ರಾನ್ ಶಾಕಿಂಗ್ ಕಾಮೆಂಟ್ಸ್
ತಂಜಾವೂರು ಜಿಲ್ಲೆ, ಪುತ್ತಲೂರು ಸಮೀಪದ ಹಳ್ಳಿಯ 42 ವರ್ಷದ ಅವಿವಾಹಿತ ಮಹಿಳೆ ಕಳೆದ 3ರಂದು ಕೆಲಸಕ್ಕೆ ಹೋಗಿದ್ದು, ರಾತ್ರಿ ಮನೆಗೆ ತೆರಳಲು ಪುತ್ತಲೂರಿನಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಆ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ರಾಯಂದೂರಿನ ಪ್ರವೀಣ್ (32) ಹಾಗೂ ರಾಜಕಪ್ಪೂರ್ (26) ಬಸ್ ನಿಲ್ದಾಣದಲ್ಲಿ ಮಹಿಳೆ ಒಬ್ಬಳೇ ಇರುವುದನ್ನು ಕಂಡಿದ್ದಾರೆ. ಪ್ರವೀಣ್ ಲಿಫ್ಟ್ ಕೊಡುತ್ತೇನೆ ಎಂದು ಹೇಳಿ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಾನೆ. ರಾಜ್ ಕಪೂರ್ ಮತ್ತೊಂದು ಬೈಕ್ ನಲ್ಲಿ ಅವರನ್ನು ಹಿಂಬಾಲಿಸಿದ್ದಾನೆ. ಪುತ್ತಲೂರು ದಾಟಿದ ನಂತರ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅಲ್ಲಿಂದ ಓಡಿ ಹೋಗಿದ್ದಾರೆ.
ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮಹಿಳೆಗೆ ಮದ್ಯಕುಡಿಸಿ ಪುಟ್ಪಾತ್ಮೇಲೆ ಹಾಡಹಗಲೇ ಅತ್ಯಾಚಾರ.. ಆಘಾತಕಾರಿ ವೀಡಿಯೋ ವೈರಲ್!