ಪ್ರಧಾನಿ ಮೋದಿ ಬೆಂಗಳೂರು ಮೆಗಾ ರೋಡ್​ ಶೋ ಫೋಟೋ ಝಲಕ್​ ಇಲ್ಲಿದೆ…

PM Modi Road Show
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಇಂದು ಬಹುತೇಕ ಕೇಸರಿಮಯವಾಗಿತ್ತು. ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜಧಾನಿಯಲ್ಲಿ ಇಂದು ಮತಬೇಟೆಗೆ ಇಳಿದ ಪ್ರಧಾನಿ ಮೋದಿ ಮೆಗಾ ರೋಡ್​ ಶೋ ನಡೆಸಿದರು. ಶ್ರೀ ಸೋಮೇಶ್ವರ ಸಭಾ ಭವನದಿಂದ ಆರಂಭವಾದ ರೋಡ್​ ಶೋ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಕೊನೆಗೊಂಡಿತು. ದಾರಿಯುದ್ದಕ್ಕೂ ಮೋದಿ ಮೋದಿ ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. ನೆಚ್ಚಿನ ಪ್ರಧಾನಿ ಮೇಲೆ ಬೆಂಗಳೂರಿಗರು ಹೂಮಳೆ ಸುರಿಸಿದರು. ಕೇಸರಿ ಬಾವುಟಗಳು ರಾರಾಜಿಸಿದವು. ಒಟ್ಟಾರೆ ಹೇಳಬೇಕೆಂದರೆ ಇಡೀ ರೋಡ್​ ಶೋ ಅದ್ಧೂರಿಯಾಗಿ ನಡೆಯಿತು. ಅದರ ಫೋಟೋ ಝಲಕ್​ ಅನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದು.

PM Modi Road Show (7)
PM Modi Road Show (6)
PM Modi Road Show (1)
PM Modi Road Show (1)
PM Modi Road Show (3)
PM Modi Road Show Bengaluru (11)
PM Modi Road Show Bengaluru (1)
PM Modi Road Show Bengaluru (6)
PM Modi Road Show Bengaluru (10)
PM Modi Road Show Bengaluru (4)
PM Modi Road Show Bengaluru (9)
PM Modi Road Show Bengaluru (8)
PM Modi Road Show Bengaluru (3)
PM Modi Road Show Bengaluru (7)
PM Modi Road Show Bengaluru (12)
PM Modi Road Show Bengaluru (5)

ರೋಡ್​ ಶೋ ಸಾಗಿದ ಹಾದಿ

ಶ್ರೀ ಸೋಮೇಶ್ವರ ಸಭಾ ಭವನದಿಂದ ಆರಂಭವಾಗಿ, ಜೆಪಿ ನಗರ ಐದನೇ ಹಂತ, ಜಯನಗರ 5ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಸೌತ್ ಎಂಡ್ ಸರ್ಕಲ್, ಮಾಧವರಾವ್ ವೃತ್ತ ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಇಗ್ನಲ್, ಚಾಮರಾಜಪೇಟೆ ಐದನೇ ಮೇನ್, ಈದ್ಗಾ ಮೈದಾನ, ಮೈಸೂರು ಸಿಗ್ನಲ್, ಟೋಲ್‌ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರಸ್ತೆ ಜಂಕ್ಷನ್, ಶಂಕರ ಮಠ ಚೌಕ, ಮಲ್ಲೇಶ್ವರ ವೃತ್ತ ಮೂಲಕ ಸಾಗಿ ಸಂಪಿಗೆ ರಸ್ತೆ (18ನೇ ಅಡ್ಡ ರಸ್ತೆ ಜಂಕ್ಷನ್)ಯಲ್ಲಿ ಕೊನೆಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net