More

    ಬೆಂಗಳೂರಿಗೆ 8 ಅಂಶಗಳ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್​

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್​ ಪಕ್ಷವೂ ಬೆಂಗಳೂರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಣಾಳಿಕೆಯನ್ನು ಇಂದು (ಮೇ.6) ಬಿಡುಗಡೆ ಮಾಡಿದೆ.

    ಬೆಂಗಳೂರು ಮಹಾನಗರ ಸಮಗ್ರ ಅಭಿವೃದ್ಧಿಗೆ ಜನತಾ ಪ್ರಣಾಳಿಕೆ ಹೆಸರಿನಲ್ಲಿ ಒಟ್ಟು 8 ಅಂಶಗಳನ್ನು ಒಳಗೊಂಡಿರುವ ಪ್ರಣಾಳಿಕೆಯನ್ನು ಜೆಡಿಎಸ್​ ಬಿಡುಗಡೆ ಮಾಡಿದೆ.

    ಪ್ರಣಾಳಿಕೆಯಲ್ಲಿರುವ 8 ಅಂಶಗಳು

    1. ಸಾಮಾಜಿಕ ಭದ್ರತೆಗಳು ಮತ್ತು ಆರೋಗ್ಯ ಶ್ರೀರಕ್ಷೆ
    2. ಮಹಾನಗರ ಪಾಲಿಕೆ ಆಡಳಿತ ಸುಧಾರಣೆ
    3. ಶಿಕ್ಷಣವೇ ಆಧುನಿಕ ಶಕ್ತಿ
    4. ಆರೋಗ್ಯವೇ ಸಂಪತ್ತು
    5. ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ
    6. ಬೆಂಗಳೂರು ಮಹಾನಗರ ಹಸರೀಕರಣ ಮತ್ತು ಅರಣೀಕರಣ
    7. ಬೆಂಗಳೂರು ನಗರದಲ್ಲಿನ ಕಣಿವೆ, ಕೆರೆಗಳ ಸಂರಕ್ಷಣೆ ಮತ್ತು ಕಾಲುವೆಗಳ ಪುನಃಶ್ವೇತನ
    8. ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ ಏತ ನೀರಾವರಿ ಯೋಜನೆಯ ಆಧುನೀಕರಣ

    ಬೆಂಗಳೂರು ಜನತೆಗೆ ಸಾಮಾಜಿಕ ಭದ್ರತೆಗಳು ಮತ್ತು ಆರೋಗ್ಯ ಶ್ರೀರಕ್ಷೆ

    ಸಾಮಾಜಿಕ ಭದ್ರತೆಗಳು

    ವಸತಿ ಆಸರೆ
    ನಗರದ ಬಡವರ ಕೈಗೆಟುಕುವ ವಸತಿ ಯೋಜನೆಗಳು-ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೊಳಿಸುತ್ತಿರುವ ಹಲವಾರು ವಸತಿ ಯೋಜನೆಗಳನ್ನು ಒಗ್ಗೂಡಿಸಿ ನಿವೇಶನ ಮತ್ತು ವಸತಿ ಹೀನರಿಗೆ ಕೈಗೆಟುಕುವ ದರದಲ್ಲಿ ವಸತಿ ಆಸರೆ ಕಲ್ಪಿಸಲಾಗುವುದು.

    ಏಷ್ಯಾದಲ್ಲಿ ಅತಿ ವಿಸ್ತಾರವಾದ ಮತ್ತು ದೊಡ್ಡದಾದ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿನ ಕಾರ್ಮಿಕರು ಮತ್ತು ಇತರೆ ಉದ್ಯೋಗಿಗಳು ಒಳಗೊಂಡಂತೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಸತಿ ಯೋಜನೆಗಳನ್ನು ಸೂಕ್ತವಾಗಿ ಮಾರ್ಪಡಿಸಿ ವಿಶೇಷ ಯೋಜನೆ ಅಡಿ ವಸತಿ ಒದಗಿಸಲಾಗುವುದು.

    ಕುಟುಂಬದ ಪೌಷ್ಠಿಕತೆಗಾಗಿ, ಪಡಿತರ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ನೀಡಲಾಗುವುದು.

    * ಖಾಸಗಿ ಶಾಲಾ ಶಿಕ್ಷಕರಿಗೆ, ಆಟೋ ಚಾಲಕರಿಗೆ ಮತ್ತು ಬೀದಿ ಬದಿ ವ್ಯಾಪರಿಗಳಿಗೆ ಭದ್ರತೆ
    * ಖಾಸಗಿ ಶಾಲೆಗಳಲ್ಲಿ ರೂ. 10,000 ಕ್ಕಿಂತ ಕಡಿಮೆ ಸಂಬಳ ಪಡೆಯುತ್ತಿರುವ ಶಿಕ್ಷಕರಿಗೆ ಸಹಾಯಧನ.
    * ನೊಂದಾಯಿತ ಆಟೋ ಚಾಲಕರಿಗೆ ಮತ್ತು ಭದ್ರತಾ ಸಿಬ್ಬಂದಿಗೆ ಮಾಸಿಕ ರೂ. 2,000 ಸಹಾಯಧನ ಯೋಜನೆ.
    * ಬೀದಿ ಬದಿಯ ವ್ಯಾಪಾರಿಗಳಿಗೆ ದುಡಿಮೆ ರೂಪದಲ್ಲಿ ವೇತನ ನೀಡುವ ಯೋಜನೆ.

    ಉಚಿತವಾಗಿ ಲಸಿಕೆಗಳನ್ನು ನೀಡುವುದು
    * ನಗರ ಆಸ್ಪತ್ರೆಗಳಲ್ಲಿ ವಿವಿಧ ಯೋಜನೆ ಅಡಿ – ಮಕ್ಕಳು, ವಯಸ್ಥರು, ಮಹಿಳೆಯರು ಮತ್ತು ವೃದ್ಧರಿಗೆ ನೀಡುವ ಲಸಿಕೆಯನ್ನು ನಿಯತಕಾಲಿಕವಾಗಿ ಪ್ರತಿಯೊಬ್ಬರಿಗೂ ಉಚಿತವಾಗಿ ನೀಡಲಾಗುವುದು.
    * ನಗರದಲ್ಲಿರುವ ಬೀದಿ ನಾಯಿಗಳ ಉಪಟಳ ತಪ್ಪಿಸಲು ಪ್ರಾಣಿಗಳ ಜನ್ಮ ನಿಯಂತ್ರಣ (Animal Birth Control – ABC) ಕಾರ್ಯಕ್ರಮವನ್ನು ಕಡ್ಡಾಯಗೊಳಿಸಲಾಗುವುದು ಹಾಗೂ ಮಹಾನಗರ ಪಾಲಿಕೆಯಲ್ಲಿರುವ ಶ್ವಾನ ದಳವನ್ನು ಕಾರ್ಯೋನ್ಮುಖ ಮಾಡಿ ಬೆಳಗಿನ ಹಾಗೂ ರಾತ್ರಿ ಹೊತ್ತು ಬೀದಿ ನಾಯಿಗಳು ಶಾಲಾ ಮಕ್ಕಳು ಒಳಗೊಂಡಂತೆ ವೃದ್ಧರನ್ನು ಹಲ್ಲೆ ಮಾಡುವುದನ್ನು ತಪ್ಪಿಸಲಾಗುವುದು.
    * ಹುಚ್ಚು ನಾಯಿ ಕಚ್ಚುವಿಕೆಗೆ ಮತ್ತು ಹಾವು ಕಡಿತಕ್ಕೆ ಅಗತ್ಯವಿರುವ ಔಷಧಿಯು ನಗರ ಪಾಲಿಕೆ ಆಸ್ಪತ್ರೆಯಲ್ಲಿ ಪ್ರತಿದಿನ 24X7 ಕಾಲದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು.
    * ರಾಜ್ಯದಲ್ಲಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗುವವುದು.

    ಬೆಂಗಳೂರು ನಗರದಲ್ಲಿ ಶೌಚಾಲಯ ವ್ಯವಸ್ಥೆ
    * ಬೆಂಗಳೂರು ನಗರಕ್ಕೆ ಪ್ರತಿದಿನ ಲಕ್ಷಾಂತರ ಮಂದಿ ಕಾರ್ಯನಿಮಿತ್ತ ಬರುತ್ತಾರೆ. ಇಂತಹ ಜನರಿಗೆ ಬೆಂಗಳೂರಿನಲ್ಲಿ 479 ಶೌಚಾಲಯಗಳಿವೆ. ಇವುಗಳನ್ನು 1964ರಿಂದ 2014ರವರೆಗೆ ನಿರ್ಮಿಸಲ್ಪಟ್ಟವು.
    * ಆದರೆ ಸ್ವಚ್ಛ ಭಾರತ (ನಗರ) ಯೋಜನೆ ಅನುಷ್ಠಾನದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತುಂಬಾ ಹಿಂದೆ ಬಿದ್ದಿದೆ. ಸ್ವಚ್ಛತೆಯ ಸೂಚಕ ಅಂಕದಲ್ಲಿ ಬೆಂಗಳೂರು ನಗರ 2019ರಲ್ಲಿ ಪಡೆದಿದ್ದ 194ನೇ ಸ್ಥಾನದಿಂದ 2020 ರಲ್ಲಿ 214ನೇ ಸ್ಥಾನಕ್ಕೆ ಇಳಿದಿದೆ.
    * ಒಂದು ಸಮೀಕ್ಷೆ ಪ್ರಕಾರ, ಬೆಂಗಳೂರು ನಗರಕ್ಕೆ 1100 ಶೌಚಾಲಯಗಳ ಅವಶ್ಯಕತೆಯಿದೆ. ಈ ಬಗ್ಗೆ ಸರ್ಕಾರ ಯೋಜನೆ ರೂಪಿಸಿ, ನಗರದ ಜನ ಸಂದಣೆ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ನೂತನವಾದ ಹಾಗೂ ಮಕ್ಕಳ – ವಯಸ್ಕರ ಸ್ನೇಹಮಯಿ ಶೌಚಾಲಗಳನ್ನು ನಿರ್ಮಿಸಿ ಗುತ್ತಿಗೆ ಆಧಾರದ (Franchise) ಮುಖೇನ ಸಂಘ-ಸಂಸ್ಥೆಗಳಿಗೆ ನಿರ್ವಹಿಸಲು ನೀಡಲಾಗುವುದು.

    ಶೌಚ ಗುಂಡಿಯ ಕರ ಸ್ವಚ್ಛತೆ ನಿರ್ಮೂಲನೆ
    * ಕೇಂದ್ರ ಸರ್ಕಾರದ ಕಾಯಿದೆಯಂತೆ 2020 ರ ಅಂತ್ಯದೊಳಗೆ ಶೌಚ ಗುಂಡಿಯ ಕರ ಸ್ವಚ್ಛತೆ (ಜಾಡು ಮಾಲಿ ವೃತ್ತಿ)ನಿರ್ಮೂಲನೆ ಮಾಡಲು ಆದೇಶವಿದ್ದು ಇನ್ನೂ ಜಾರಿಯಲ್ಲಿದೆ. ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 40 ಜನರು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕುಗಳ ಸ್ವಚ್ಚತೆಯಲ್ಲಿ ಮರಣ ಹೊಂದಿದ್ದಾರೆ. ಇಂತಹ ಅವಘಡಗಳನ್ನು ತಡೆಗಟ್ಟಲು:
    * ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯಂತ್ರಗಳನ್ನು ಉಪಯೋಗಿಸಿ ಒಳ ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕಗಳನ್ನು ಇದ್ದು, ಕಿರಿದಾದ ಸ್ವಚ್ಛಗೊಳಿಸುವ ವ್ಯವಸ್ಥೆ ರಸ್ತೆ ಹಾಗೂ ಗಲ್ಲಿಗಳಲ್ಲಿ ವಾಹನ ಹೋಗಲು ಅವಕಾಶವಿಲ್ಲದೆ, ಇನ್ನೂ ಜಾಡು ಮಾಲಿಗಳನ್ನು ಉಪಯೋಗಿಸಿಕೊಂಡು ಸ್ವಚ್ಛ ಮಾಡಲಾಗುತ್ತಿದೆ.
    * ಈ ರಾಜ್ಯದಲ್ಲಿ ಉತ್ತಮ ದರ್ಜೆಯ ಯಂತ್ರಗಳನ್ನು ಬಳಸಿ, ಒಳ ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕುಗಳ ಸ್ವಚ್ಛತೆ ಕೈಗೊಳ್ಳಲಾಗುವುದು. ಮತ್ತು ಸಂಪೂರ್ಣ ಹಸ್ತ ಚಾಲಿತ ಸ್ಯಾವೆಂಜಿಂಗ್ ನಿರ್ಮೂಲನೆ ಮಾಡಲಾಗವುದು.

    ಮಹಿಳಾ ಸುರಕ್ಷತೆ
    * ನಿರ್ಭಯ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಒನ್ ಸ್ಟಾಪ್ ಸೆಂಟರ್ (ಸಖಿ) ಮತ್ತು ಮಹಿಳೆಯರ ಸುರಕ್ಷತಾ ನಗರ ಯೋಜನೆ (ಸೇಫ್ ಸಿಟಿ ಪ್ರಾಜೆಕ್ಟ್‌ಫಾ‌ ಸೇಫ್ಟಿ ಆಫ್ ವುಮೆನ್)ಗಳ ಅನುಷ್ಠಾನವನ್ನು ರಾಜ್ಯದ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ವಿಸ್ತರಿಸಲಾಗುವುದು.

    ಮಹಾನಗರ ಪಾಲಿಕೆ ಆಡಳಿತ ಸುಧಾರಣೆ

    ಸಾರಿಗೆ ನೌಕರರ ಬೇಡಿಕೆ ಈಡೇರಿಕೆ
    * ಹದಗೆಟ್ಟಿರುವ ಪಾಲಿಕೆಯ ಆರ್ಥಿಕ ವ್ಯವಸ್ಥೆ ಸುಧಾರಣೆ ಮಾಡಲು ನೂತನ ಮತ್ತು ಸರಳ ಆರ್ಥಿಕ ನಿರ್ವಹಣೆ ವ್ಯವಸ್ಥೆ ನೀಡುವ ಬಳಕೆ (New and Simple Financial Management System) ಪಾಲಿಕೆಯನ್ನು Fiscal Responsibility and Budget Management Act w ತರುವುದು.
    * ಸ್ವತ್ತು ತೆರಿಗೆಯಿಂದ ನುಣುಚಿಕೊಂಡಿರುವ ಮತ್ತು ತೆರಿಗೆ ವಂಚಿಸುವ ಸ್ವತ್ತುಗಳನ್ನು ಗುರುತಿಸಿ ತೆರಿಗೆ ವಿಧಿಸಿ, ವಸೂಲಾತಿ ಕ್ರಮ ಜರುಗಿಸುವುದು.
    * ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆಯುವ ವ್ಯಾಪಕ ಮತ್ತು ಕಳಪೆ ಕಾಮಗಾರಿ ತಡೆಗಟ್ಟುವುದು. ದಂಧೆ
    * ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆ ಸುಧಾರಿಸಲು ಹೊಸ ಕಾಯಿದೆಯನ್ನು 2020ರಲ್ಲಿ ರೂಪಿಸಿದೆ. ಆದರೆ, ಮಹಾನಗರ ಪಾಲಿಕೆ ಕಾರ್ಯಾವಧಿ ಮುಗಿದು 3 ವರ್ಷಗಳು ಕಳೆದರೂ ಇದುವರೆಗೂ ಚುನಾವಣೆ ನಡೆದಿಲ್ಲ. ವಾರ್ಡ್ಗಳ ವಿಂಗಡಣೆ ನನೆಗುದಿಗೆ ಬಿದ್ದಿದೆ. ಕ್ಷೇತ್ರವಾರು ಮೀಸಲಾತಿ ಮತ್ತು ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿ ನೆನೆಗುದಿಗೆ ಬಿದ್ದು, ನ್ಯಾಯಾಲಯಗಳ ಮೆಟ್ಟಿಲೇರಿದೆ.
    * ಮಹಾನಗರ ಪಾಲಿಕೆ ಆಡಳಿತವನ್ನು ಚುನಾಯಿತ ಪ್ರತಿನಿಧಿಗಳಿಗೆ ವಹಿಸಲು ಎಲ್ಲಾ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು.
    * ಬೆಂಗಳೂರು ಮಹಾನಗರದ ವ್ಯವಸ್ಥಿತ ಅಭಿವೃದ್ಧಿಗೆ ಅಗತ್ಯವಿರುವ ಪುರಷ್ಯತ ಬೃಹದ್ಯೋಜನೆ – 2041 (Revised Master Plan – RMP) ತ್ವರಿತವಾಗಿ ತಯಾರಿ, ಕಾರ್ಯರೂಪಕ್ಕೆ
    ತರಲಾಗುವುದು.
    * 5ನೇ ಹಂತ ಕಾವೇರಿ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರ್ಪಡೆಯಾಗಿ ಮೂಲ ಸೌಕರ್ಯದಿಂದ ವಂಚಿತವಾಗಿರುವ 110 ಗ್ರಾಮಗಳಿಗೆ ಪೈಪ್ ಲೈನ್ ಗಳನ್ನು ವಿಸ್ತರಿಸಿ, ಕುಡಿಯುವ ನೀರನ್ನು ಒದಗಿಸಲಾಗುವುದು.
    * ನಗರದಲ್ಲಿ ‘ಬಿ’ ಖಾತೆಯಲ್ಲಿರುವ ಆರು ಲಕ್ಷ ಸ್ವತ್ತುಗಳನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯಿದೆ – 1961 ಅಡಿ ನಿಯಮಗಳನ್ನು ರೂಪಿಸಿ ದಂಡವಿಧಿಸಿ ಈ ಸ್ವತ್ತುಗಳನ್ನು ‘ಎ’ ಖಾತಾ ಸ್ವತ್ತುಗಳಾಗಿ ಪರಿವರ್ತಿಸಿ, ದಶಕ ಕಾಲ ನೆನೆಗುದಿಗೆ ಬಿದ್ದಿರುವ ಸಮಸ್ಯೆಯನ್ನು ಪರಿಹರಿಸಲಾಗುವುದು.
    * ಮಹಾನಗರ ಪಾಲಿಕೆ ವತಿಯಿಂದ ಕೈಗೊಳ್ಳುವ ಎಲ್ಲಾ ಕಾಮಗಾರಿಗಳನ್ನು ವಿಸೃತ ಯೋಜನಾ ವರದಿಯನ್ನು (DPR) ನ್ನು ಉನ್ನತ ಮಟ್ಟದ ತಾಂತ್ರಿಕ ಸಮಿತಿಯಿಂದ ಅನುಮೋದನೆ ಪಡೆದು ತದನಂತರ, ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಬೇಕು.
    * ಯೋಜನೆ ಅನುಷ್ಠಾನದಲ್ಲಿ ಉಂಟಾಗುವ ಅಡೆ- ತಡೆ ಮತ್ತು ಬದಲಾವಣೆ ಬಗ್ಗೆ ಉನ್ನತ ಸಮಿತಿ ಕಾಲಾನುಕಾಲಕ್ಕೆ ವರದಿ ಸಲ್ಲಿಸುವುದು.
    * ಯೋಜನಾ ಕಾಮಗಾರಿಗಳ ಪೂರ್ಣಗೊಂಡ ವರದಿಯನ್ನು ಅಂತಿಮ ಬಿಲ್ಲಿನೊಂದಿಗೆ ಉನ್ನತ ಸಮಿತಿ ಮುಂದೆ ಮಂಡಿಸುವುದು.

    ತ್ಯಾಜ್ಯನಿರ್ವಹಣೆ – ಮರುವಿನ್ಯಾಸಗೊಳಿಸುವುದು
    * ಪ್ರಸ್ತುತ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವನ್ನು ಏಜೆನ್ಸಿಗಳು ಪ್ರತ್ಯೇಕವಾಗಿ ಎರಡು ಪ್ರತ್ಯೇಕ ಎರಡು ವಾಹನಗಳಲ್ಲಿ ಸಂಗ್ರಹಿಸುತ್ತಿವೆ.
    * ಹಸಿ ತ್ಯಾಜ್ಯ: ಗುತ್ತಿಗೆದಾರರಿಂದ ಪ್ರತಿ ದಿನ ಸಂಗ್ರಹಿಸಲಾಗುವುದು.
    * ಒಣ ತ್ಯಾಜ್ಯ: ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ( DWCCs) ನಿರ್ವಹಿಸುವವರು ವಾರಕ್ಕೆ ಎರಡು ಬಾರಿ ಸಂಗ್ರಹಿಸುತ್ತಾರೆ.
    * ಇಂದು ಹಸಿ ತ್ಯಾಜ್ಯ ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ವೈದ್ಯಕೀಯ ತ್ಯಾಜ್ಯ ನಿರ್ಮಾಣ ಮತ್ತು ಕಾಮಗಾರಿ ತ್ಯಾಜ್ಯ ಪ್ರಾಣಿ ತ್ಯಾಜ್ಯ ಮತ್ತು ಬೃಹತ್ ಕೈಗಾರಿಕೆಗಳ ತ್ಯಾಜ್ಯಕ್ಕೆ ವಿವಿಧ ಏಜೆನ್ಸಿಗಳನ್ನು ಹೊಂದಿದ್ದೇವೆ. ಬಹುಸಂಖ್ಯೆಯ ಏಜೆನ್ಸಿಗಳನ್ನು ರಚಿಸುವುದು ಯಾರನ್ನು ಲೆಕ್ಕಕ್ಕೆ ಇಡುವುದು ಎಂಬುದು ಕಷ್ಟಕರವಾಗಿದೆ. ಆದ್ದರಿಂದ ತ್ಯಾಜ್ಯದ ಎಲ್ಲಾ ತೊರೆಗಳನ್ನು ಸಂಗ್ರಹಿಸಲು ಮತ್ತು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲು ಒಂದು ಉತ್ತಮ ವ್ಯವಸ್ಥೆಯನ್ನು ಅಳವಡಿಸಲಾಗುವುದು.
    * ಗೃಹ ಬಳಕೆಯಲ್ಲಿ ಬಳಸಿ, ತ್ಯಾಜ್ಯವಾಗಿರುವ ಸಾವ- ಯವ ವಸ್ತುಗಳನ್ನು ತೂಕದ ಆಧಾರದ ಮೇಲೆ ತ್ಯಾಜ್ಯವಾಗಿ ಸ್ವೀಕರಿಸಲಾಗುವುದು. ಪ್ರತಿ ಮನೆಯಲ್ಲಿ ಅಪಾರ್ಟ್ ಮೆಂಟ್ ಆವರಣದಲ್ಲಿ ಮತ್ತು ಹೋಟೆಲ್ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಬಯೋಗ್ಯಾಸ್‌ ಉತ್ಪಾದನೆ ಪ್ಲಾಂಟ್ ನ್ನು ಸ್ಥಾಪಿಸಿ, ಗ್ಯಾಸನ್ನು ಅಡಿಗೆ ಅನಿಲವಾಗಿ ಉಪಯೋಗಿಸಲು ಉತ್ತೇಜನ ನೀಡಲಾಗುವುದು. ಈ ಪ್ರಕ್ರಿಯೆಯಲ್ಲಿ ಉತ್ಪನ್ನವಾಗುವ ಗೊಬ್ಬರವನ್ನು ಮಾರಲು ಸರ್ಕಾರವು ಸೂಕ್ತ ವ್ಯವಸ್ಥೆಯನ್ನು ರೂಪಿಸುವುದು.
    * ನಾಲ್ಕು ಸದಸ್ಯರು ಇರುವ ಕುಟುಂಬದಲ್ಲಿ ಶೌಚಾಲಯದಿಂದ ಮಲ-ಮೂತ್ರ ವಿಸರ್ಜನೆಗೆ ಪ್ರತಿನಿತ್ಯ ಸರಾಸರಿ 200 ಲೀಟರ್ ನಷ್ಟು ನೀರನ್ನು ಬಳಸಲಾಗುತ್ತದೆ. ಇದರ ಬದಲಿಗೆ ವಾಯು ಶೂನ್ಯತೆಯ ಕಮೋಡ್ ಗಳನ್ನು (Vaccum- Based Commodes) ಅಳವಡಿಸಿ ಉಪಯೋಗಿಸಲು ಉತ್ತೇಜನ ನೀಡಿ, ಪ್ರೋತ್ಸಾಹಿಸಲಾಗುವುದು. ಉಳಿಕೆ ಒಣ ಮಲ- ಮೂತ್ರಗಳ ಅವಶೇಷಗಳನ್ನು ಸುಟ್ಟು ಸುಭ್ರಗೊಳಿಸುವ ಟೆಕ್ನಾಲಜಿಯನ್ನು ಒದಗಿಸಲಾಗುವುದು.
    * ಇದು ಒಂದು ಮಹತ್ವದ ಹೆಜ್ಜೆ ಆಗಿದ್ದು, ಬೆಂಗಳೂರು ನಗರದಲ್ಲಿರುವ ಕಣಿವೆಗಳನ್ನು ಮತ್ತು ಕೆರೆಗಳನ್ನು ಸಂರಕ್ಷಿಸಬಹುದಾಗಿದೆ.
    * ಬೆಂಗಳೂರು ನಾಗರೀಕರು ಮನೆಗಳಲ್ಲಿ ಉಪಯೋಗಿಸುವ ಡಿಟರ್ಜೆಂಟ್ ಗಳು ಪಾಸ್ ಪೇಟ್ ಭರಿತವಾಗಿದ್ದು, ಪ್ರತಿದಿನ 70 ಟನ್ ಗಳಷ್ಟು ಸೋಪ್ ಮತ್ತು ಡಿಟರ್ಜೆಂಟ್ ಗಳನ್ನು ಉಪಯೋಗಿಸುತ್ತಿದ್ದು, ಮೊದಲ ಹಂತದಲ್ಲಿ ಪಾಸ್ ಪೇಟ್ ಯುಕ್ತ ಡಿಟರ್ಜೆಂಟ್ ಬಳಕೆಯನ್ನು ನಿಷೇಧಿಸಲಾಗುವುದು. ಸಾವ- ಯವ ಸಾಬೂನುಗಳನ್ನು ಉಪಯೋಗಿಸಲು ತೆರಿಗೆ ವಿನಾಯಿತಿ ಮತ್ತು ತಯಾರಿಕೆಗೆ ಉತ್ತೇಜನ ಒಳಗೊಂಡ ಯೋಜನೆಗಳನ್ನು ರೂಪಿಸಲಾಗುವುದು.
    * ನಗರದಲ್ಲಿರುವ ಹೋಟೆಲ್ ಗಳಲ್ಲಿ ಸಾಮೂಹಿಕ ಸಭಾಂಗಣಗಳಲ್ಲಿ ಮತ್ತು ಮದುವೆ ಛತ್ರಗಳಲ್ಲಿ ಯಾವುದೇ ರೂಪದಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗುವುದು.
    * ಎಲ್ಲಾ ಸಭೆ ಮತ್ತು ಸಮಾರಂಭಗಳಲ್ಲಿ ಸಾವ- ಯವ ತಟ್ಟೆಗಳು ಮತ್ತು ಲೋಟಗಳನ್ನು ಬಳಸುವುದನ್ನು ಕಡ್ಡಾಯ ಮಾಡಲಾಗುವುದು.

    ಶಿಕ್ಷಣವೇ ಆಧುನಿಕ ಶಕ್ತಿ

    ಬೆಂಗಳೂರು ನಗರದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಸುಧಾರಣೆ
    * ಬೆಂಗಳೂರು ಬಡವರು- ಬಲ್ಲಿದರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಎಲ್ಲಾ ವಿಧದಲ್ಲಿ ಶ್ರಮವಹಿಸುತ್ತಾರೆ. ಆದರೆ, ಖಾಸಗಿ ಶಾಲೆಗಳಲ್ಲಿ ವಿಧಿಸುವ ದುಬಾರಿ ಶಿಕ್ಷಣ ಶುಲ್ಕದಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹೈರಾಣ ಹೊಂದಿದ್ದಾರೆ.

    ಪಂಚರತ್ನ ಯೋಜನೆ ಅಡಿಯಲ್ಲಿ ಶಾಲಾ ಆಡಳಿತ ಸುಧಾರಣೆ
    * ಜಿಲ್ಲಾ ಶಾಲಾ ಶಿಕ್ಷಣ ಪರಿಷತ್ (District School Council) ನ್ನು ಸ್ಥಾಪಿಸಲಾಗುವುದು ಮತ್ತು ಈ ಪರಿಷತ್ ನಗರದ ಪ್ರತಿಯೊಂದು ಶೈಕ್ಷಣಿಕ ಜಿಲ್ಲೆಯಲ್ಲಿನ ಶಾಲಾ-ಶಿಕ್ಷಣ ಅನುಷ್ಠಾನದ ಪರಿಶೀಲನೆ ಮತ್ತು ಉಸ್ತುವಾರಿಯನ್ನು ಆಯಾ ವಲಯಗಳಲ್ಲಿ ಶಿಕ್ಷಣ ತಜ್ಞರ, ದಾನಿಗಳ, ಮುಖಂಡರು ಹಾಗೂ ಸಾಧಕರ ಸಹಯೋಗ, ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಕೈಗೊಳ್ಳಲಾಗುವುದು.
    * ಈ ಪರಿಷತ್, ಪೋಷಕರು ಶಾಲಾ ಶಿಕ್ಷಣ ವ್ಯವಸ್ಥೆಗೆ ಜೋಡಿಸಿ, ಹೊಂದಾಣಿಕೆ ಮಾಡುವ ಮಹತ್ವದ ಕಾರ್ಯಭಾರವನ್ನು ನಿರ್ವಹಿಸುತ್ತದೆ.
    * ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆಯ ಅಧಿಕಾರಿ ಜಿಲ್ಲಾ ಶೈಕ್ಷಣಿಕ ಪರಿಷತ್ ನ ಮುಖ್ಯಸ್ಥರಾಗಿರುತ್ತಾರೆ.
    * ಈ ಶೈಕ್ಷಣಿಕ ಪರಿಷತ್ ನಲ್ಲಿ ಶಾಲೆ ನಡೆಸುವ ವ್ಯಕ್ತಿ ಅಥವಾ ಕುಟುಂಬದವರಾಗಲಿ ಅಥವಾ ಶಾಲಾ ವ್ಯವಸ್ಥಾಪಕ ಮಂಡಳಿ ಸದಸ್ಯರಾಗಲಿ ಅಥವಾ ಶಾಲೆಯಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿದವರಿಗೆ ಪರಿಷತ್ ನಲ್ಲಿ ಸದಸ್ಯರಾಗಲು ಅವಕಾಶ ಇರುವುದಿಲ್ಲ
    * ಮುಂದುವರೆದು, ಪ್ರತಿಯೊಂದು ಶೈಕ್ಷಣಿಕ ಜಿಲ್ಲೆಗಳನ್ನು 15 ಸಾವಿರದಿಂದ 20 ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡ ಶಾಲಾ ವಲಯಗಳನ್ನಾಗಿ ವಿಂಗಡಿಸುವುದು.

    ಶಿಕ್ಷಣ ನೀತಿ
    ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರವೇಶ, ಸಮಾನತೆ, ಗುಣಮಟ್ಟ ಮತ್ತು ಹೊಣೆಗಾರಿಕೆ ಎನ್ನುವ ನಾಲ್ಕು ಸ್ತಂಭಗಳ ಮೇಲೆ ಆಧಾರಿತವಾಗಿದೆ.
    ಈ ಹೊಸ ಶಿಕ್ಷಣ ನೀತಿಯಲ್ಲಿ 3 ವರ್ಷದ ಅಂಗನವಾಡಿ ಅಥವಾ ಶಾಲಾ ಪೂರ್ವ ಶಿಕ್ಷಣ ಒಳಗೊಂಡಂತೆ
    * 5+3+3+4′ ರಚನೆ ಒಳಗೊಂಡ 15 ವರ್ಷ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹೊರ ತರಲಾಗಿದೆ.
    * ಈ ಹೊಸ ಶಿಕ್ಷಣ ನೀತಿಯನ್ನು ಮದರಸಾ ಮತ್ತು ಅಲ್ಪಸಂಖ್ಯಾತ ಸಮುದಾಯದವರು ನಿರ್ವಹಣೆಯಲ್ಲಿರುವ ಶಾಲೆಗಳು ಒಳಗೊಂಡಂತೆ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ ಜಾರಿಗೊಳಿಸಲಾಗುವುದು.
    * ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿಗಳ ರವರ ನೇತೃತ್ವದಲ್ಲಿ ಶಾಲಾ ಶುಲ್ಕ ನಿಗದಿ ಪಡಿಸಲು ಮತ್ತು ಶಾಲೆಗಳಲ್ಲಿ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಿರುವುದನ್ನು ನಿಗಾ ವಹಿಸಲು ಒಂದು ಸಮಿತಿ ರಚಿಸಲಾಗುವುದು.
    * ಶಾಲಾ ಶುಲ್ಕ ನಿಗದಿ ಆಯಾ ಶೈಕ್ಷಣಿಕ ಜಿಲ್ಲೆಗೆ ಅನ್ವಯ ಮತ್ತು ಮೂಲ ಸೌಕರ್ಯ ಮತ್ತು ಸೇವೆಗಳನ್ನು ಕಲ್ಪಿಸಲು ವಿಫಲರಾದ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದಾಗುತ್ತದೆ.
    * ಶಾಲಾ ಪ್ರವೇಶವನ್ನು ಕೇಂದ್ರೀಕೃತ ಆಧಾರದ ಮೇಲೆ ಮಾಡಲಾಗುವುದು ಮತ್ತು ಶಾಲಾ ಸಮಿತಿ ತಿರ್ಮಾನದಂತೆ ಪ್ರತಿ ಶಾಲೆಯಲ್ಲಿ ಲಭ್ಯವಿರುವ ಸೀಟುಗಳನ್ನು ಆಧರಿಸಿ ಪೋಷಕರ ಮತ್ತು ವಿದ್ಯಾರ್ಥಿ ಆಯ್ಕೆಯಂತೆ ಮತ್ತು ಶಾಲಾ ಶುಲ್ಕ ಪಾವತಿಸುವ ಸಾಮರ್ಥ್ಯದ ಆಧಾರದ ಮೇಲೆ ಶಾಲಾ ಪ್ರವೇಶವನ್ನು ನೀಡಲಾಗುವುದು.

    ಸರ್ಕಾರಿ ವಲಯ ಶಾಲೆಗಳು
    * ಗುರುತಿಸಿರುವ ಪ್ರತಿಯೊಂದು ಶಾಲಾ ವಲಯದಲ್ಲಿ (School Territory) ನೂತನ ಶಿಕ್ಷಣ ನೀತಿಯಂತೆ 3 ವರ್ಷದ ಅಂಗನವಾಡಿ/ಶಾಲಾ ಪೂರ್ವ ಶಿಕ್ಷಣ ಒಳಗೊಂಡಂತೆ “5+3+3+4′ ಶ್ರೇಣಿಯ 12 ವರ್ಷದ ಶಿಕ್ಷಣವನ್ನು ಕನ್ನಡ ಅಥವಾ ಇಂಗ್ಲೀಷ್ ಮಾಧ್ಯಮದಲ್ಲಿ ನೀಡಲಾಗುವುದು.
    * ಪ್ರತಿಯೊಂದು ಸರ್ಕಾರಿ ಶಾಲೆಯು ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಯಾಗಿದ್ದು, ಸಕಲ ಮೂಲ ಸೌಕರ್ಯಗಳನ್ನು, ನುರಿತ, ಅನುಭವಿ ಉಪಾಧ್ಯಾಯರುಗಳನ್ನು ಹೊಂದಿರುತ್ತದೆ.
    * ಪ್ರತಿ ತರಗತಿಯಲ್ಲಿ ’40’ ವಿದ್ಯಾರ್ಥಿಗಳನ್ನು ಒಳಗೊಂಡಂತೆ, ಒಂದು ಶಾಲೆಯಲ್ಲಿ 2400 ವಿದ್ಯಾರ್ಥಿಗಳ ಸಂಖ್ಯೆ ಇರುತ್ತದೆ.
    * ಶಾಲಾ ಪ್ರವೇಶವನ್ನು ಪೋಷಕರ ವಾಸಸ್ಥಾನ ಆಧಾರದ ಮೇಲೆ ಮತ್ತು ಅವರು ನೀಡುವ ಪುರಾವೆ ಮೇಲೆ ನೀಡಲಾಗುವುದು. ಪೋಷಕರ ವಾಸಸ್ಥಾನ ಬದಲಾವಣೆಯಾದರೆ ವಿದ್ಯಾರ್ಥಿಗೆ ವರ್ಗಾವಣೆ ಸರ್ಟಿಫೀಕೇಟ್ ನೀಡಲಾಗುವುದು.
    * ಶಾಲೆಗಳಲ್ಲಿ ಪ್ರವೇಶ ಮೀಸಲಾತಿಯನ್ನು ಸರ್ಕಾರದ ಆದೇಶಗಳಂತೆ ನೀಡಲಾಗುವುದು.
    * ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯು ನಿಗದಿ ಪಡಿಸಿದ ಮಾನದಂಡದಂತೆ ಮೂಲ ಸೌಕರ್ಯಗಳನ್ನು ಮತ್ತು ಸೇವೆಗಳನ್ನು ಪ್ರತಿ ಶಾಲೆ ಕಲ್ಪಿಸಬೇಕು.
    * ರಾಜ್ಯ ಸರ್ಕಾರ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಎಲ್ಲಾ ಶಾಲೆಗಳನ್ನು ಆಧುನೀಕರಣಗೊಳಿಸಿ, ವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್‌ಕಲಿಯಲು ಅಂತಾರಾಷ್ಟ್ರೀಯ ಮಟ್ಟದ ಪ್ರಯೋಗಗಳನ್ನು ನಿರ್ಮಿಸುತ್ತದೆ.
    * ಶಾಲಾ ಗ್ರಂಥಾಲಯಗಳನ್ನು ಮೂರು ಹಂತದ ಗ್ರಂಥಾಲಯಗಳಾಗಿ ವಿಭಜಿಸಲಾಗುವುದು.
    * ಶಾಲಾ ಪೂರ್ವ ಮತ್ತು ಪ್ರಾಥಮಿಕ ಗ್ರಂಥಾಲಯ ಹಾಗೂ 6ನೇ ತರಗತಿಯಿಂದ 10ನೇ ತರಗತಿಯಲ್ಲಿನ ವಿದ್ಯಾರ್ಥಿಗಳಿಗೆ ಗ್ರಂಥಾಲಯ
    * ಪ್ರತಿ ಶಾಲೆಯಲ್ಲಿ ಡಿಜಿಟಲ್ ಲೈಬ್ರರಿ ಒದಗಿಸಲಾಗುವುದು. ಎಲ್ಲಾ ಶಾಲಾ ಮಕ್ಕಳಿಗೆ ಒಂದೇ ರೀತಿಯ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ಸರ್ಕಾರದಿಂದ ಒದಗಿಸಲಾಗುವುದು.
    * ಎಲ್ಲಾ ಶಾಲಾ ಮಕ್ಕಳಿಗೆ ಸರ್ಕಾರದ ವತಿಯಿಂದ ಮಧ್ಯಾಹ್ನನದ ಊಟ ಒದಗಿಸಲಾಗುವುದು.
    * ಶಾಲಾ ಉಪಾಧ್ಯಾಯರ ಲಭ್ಯತೆ ಮೇಲೆ ಅವರ ಸೇವೆಯನ್ನು ಶಾಲೆಗಳಿಗೆ ನೀಡಲಾಗುವುದು. ತದನಂತರ, ಜಿಲ್ಲಾ ಸಮಿತಿಗಳಿಗೆ ಸರ್ಕಾರದ ನೇಮಕಾತಿ ನಿಯಮದಂತೆ ಅಧ್ಯಾಪಕರ ನೇಮಕಾತಿ ಮಾಡಲು ಆದೇಶ ನೀಡಲಾಗವುದು.
    * ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಮಕ್ಕಳ ವಾರ್ಷಿಕ ಶೈಕ್ಷಣಿಕ ಮಾಪನ ಮಾಡಲಾಗುವುದು.
    * ಈ ಹಿಂದೆ ಇದ್ದಂತೆ ವಿಧಾನಸೌಧದ ಮುಂಭಾಗದಲ್ಲಿರುವ ಹಸಿರು ಹುಲ್ಲುಗಾವಲು ಮೇಲೆ ರಜಾದಿನಗಳಲ್ಲಿ ಸಾಯಂಕಾಲ 7 ರಿಂದ ರಾತ್ರಿ 10 ಗಂಟೆಯವರೆಗೆ ಮಕ್ಕಳು ಆಡಲು ಅನುವುಮಾಡಿಕೊಡಲಾಗುವುದು.

    ಆರೋಗ್ಯ ಶ್ರೀರಕ್ಷೆ

    ಬೆಂಗಳೂರು ಮಹಾನಗರದಲ್ಲಿನಾಗರೀಕರ ಆರೋಗ್ಯ ಶ್ರೀರಕ್ಷೆ
    * ಇತ್ತೀಚಿನ ವರ್ಷಗಳಲ್ಲಿ ನಗರದ ಜನತೆಯ ಆರೋಗ್ಯ ರಕ್ಷಣೆ ನಿರ್ಲಕ್ಷಕ್ಕೆ ಒಳಗಾಗಿದೆ.
    * ನಗರದ ಜನತೆಯ ತಮ್ಮ ಆರೋಗ್ಯ ಆರೈಕೆಯನ್ನು ನಗರದಲ್ಲಿನ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೊಂಗಳ ಕರುಣೆಗೆ ಬಿಡಲಾಗಿದೆ.
    * ಜಾತ್ಯತೀತ ಜನತಾದಳ ಬೆಂಗಳೂರು ನಗರ ಜನತೆಯ ಆರೋಗ್ಯಶ್ರೀರಕ್ಷೆಗೆ ಈ ಕೆಳಕಂಡ ಕಾರ್ಯಕ್ರಮಗಳನ್ನು ರೂಪಿಸಿದೆ.
    1. ಸಾರ್ವಜನಿಕ ಆರೋಗ್ಯ ದೃಷ್ಟಿಕೋನ
    (Public Health Perspective)
    2. ರೋಗ ನಿವಾರಕ ಆರೋಗ್ಯ ದೃಷ್ಟಿಕೋನ (Curative Health Perspective)

    ಸಾರ್ವಜನಿಕ ಆರೋಗ್ಯ ದೃಷ್ಟಿಕೋನ
    * ನಗರದಲ್ಲಿ ಪ್ರತಿದಿನ ಉತ್ಪಾದನೆ ಆಗುವ ಘನತ್ಯಾಜ್ಯವನ್ನು ಬೆಂಗಳೂರು ಸುತ್ತ-ಮುತ್ತಲಿನ ಪ್ರದೇಶ ಮತ್ತು ಹಳ್ಳಿಗಳಲ್ಲಿ ಹಳ್ಳ-ಕೊಳ್ಳಗಳಲ್ಲಿ ಸುರಿದು ನೈಸರ್ಗಿಕ ವಾತಾವರಣಕ್ಕೆ ಮತ್ತು ಸುತ್ತ-ಮುತ್ತಲಿನ ಗ್ರಾಮಸ್ಥರ ಆರೋಗ್ಯಕ್ಕೆ ಧಕ್ಕೆ ತರಲಾಗುತ್ತಿದೆ.
    * ಈ ತ್ಯಾಜ್ಯಗಳು ಬಹುತೇಕವಾಗಿ ಕೊಳೆತು ಗೊಬ್ಬರವಾಗುವ ಅಂಶಗಳಿಂದ ಕೂಡಿಲ್ಲ. ಬಹುತೇಕ ಕರಗದ ಮತ್ತು ಕೊಳೆಯದ ಪ್ಲಾಸ್ಟಿಕ್ ವಸ್ತುಗಳು, ಕಟ್ಟಡದ ಅವಶೇಷಗಳು, ಹಳೇ ಬಟ್ಟೆಗಳು ಮತ್ತು ಶೇಷ ಆಹಾರ ಪದಾರ್ಥಗಳಿಂದ ಕೂಡಿವೆ. ಅಲ್ಲದೆ, ಈ ತ್ಯಾಜ್ಯಗಳಲ್ಲಿ ಮನೆಯಲ್ಲಿ ಸ್ವಚ್ಛತೆಗೆ ಬಳಸುವ ಉಪಯೋಗಿಸುವ ಡಿಟರ್ ಜೆಂಟ್ ಗಳು ಹಾಗೂ ಮಾನವ ಮಲ-ಮೂತ್ರಗಳು ಪ್ರಮುಖ.
    * ಇವೆಲ್ಲವೂ ಒಳಚರಂಡಿ ಮೂಲಕ ಹಳ್ಳ-ಕೊಳ್ಳಗಳಿಗೆ ಹರಿದು ಭೂಮಿಯನ್ನು ಅಶುದ್ಧಗೊಳಿಸುವುದಲ್ಲದೆ, ಕೆರೆ-ಕಟ್ಟೆ ಮತ್ತು ಪರಿಸರವನ್ನು ಮಾಲಿನ್ಯಗೊಳಿಸುತ್ತಿವೆ.
    * ಈ ಮಾಲಿನ್ಯ ತಡೆಯಲು ಎಲ್ಲಾ ಉತ್ಪಾದಕರು ಮತ್ತು ವ್ಯಾಪಾರಸ್ಥರು ಮಾರಾಟದ ಸಾಮಾಗ್ರಿಗಳನ್ನು ಪ್ಲಾಸ್ಟಿಕ್ ಪ್ಯಾಕ್ ಮತ್ತು ಪ್ಲಾಸ್ಟಿಕ್ ಚೀಲ ಹೊರತು ಪಡಿಸಿ ಬೇರೆ ರೂಪದ ಪ್ಯಾಕಿಂಗ್ ಗಳಲ್ಲಿ ಹಾಗೂ ಔಷಧ ಉತ್ಪಾದಕರು ಮತ್ತು ತಯಾರಕರು ಗ್ಲಾಸ್ ಬಾಟಲ್ ಗಳಲ್ಲಿ ತುಂಬಿ ಮಾರಾಟ ಮಾಡಲು ನಿಯಮ ರೂಪಿಸಲಾಗುವುದು.

    ರೋಗ ನಿವಾರಕ ಆರೋಗ್ಯ ದೃಷ್ಟಿಕೋನ
    ನಮ್ಮ ಕ್ಲಿನಿಕ್ Vs 30 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ
    ಬೆಂಗಳೂರು ನಗರದಲ್ಲಿ ಪ್ರಸ್ತುತದಲ್ಲಿರುವ ನಮ್ಮ ಕ್ಲಿನಿಕ್ ನಗರದ ಜನತೆಯ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸಲು ವಿಫಲವಾಗಿವೆ.
    * ಪಂಚರತ್ನ ಯೋಜನೆ ಅಡಿ ರೂಪಿಸಿರುವಂತೆ ಪ್ರತಿಯೊಂದು ವಾರ್ಡ್ ನಲ್ಲೂ 30 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು.
    * ಈ ಆಸ್ಪತ್ರೆಗಳು ವಿನೂತನ ಮತ್ತು ಮಾದರಿ ರೀತಿಯಲ್ಲಿ ಪ್ರತಿದಿನ 24X7 ಕಾಲ ಆರೋಗ್ಯ ಸೇವೆಗಳನ್ನು ಒದಗಿಸುತ್ತವೆ.
    * ಬೆಂಗಳೂರು ನಗರ ಸ್ವಚ್ಛವಾಗಿ, ಸುಂದರವಾಗಿ ಇಡಲು ಲಭ್ಯವಿರುವ ಟೆಕ್ನಾಲಜಿಗಳ ಬಗ್ಗೆ ಪ್ರತಿ ವರ್ಷ ಕೆಳಕಂಡ ವಸ್ತು ಪ್ರದರ್ಶನಗಳನ್ನು ಏರ್ಪಡಿಸಲಾಗುವುದು.
    i. ಪ್ಲಾಸ್ಟಿಕ್ ಬಳಕೆ ಬದಲು ಪರ್ಯಾಯ ಮಾರ್ಗಗಳು
    ii. ಸೋಲಾರ್ ವಿದ್ಯುತ್‌ ಉತ್ಪತ್ತಿ ಮತ್ತು ಬಳಕೆ ಹಾಗೂ ಮಾನವ ಮಲ-ಮೂತ್ರ ವಿಸರ್ಜನೆಗೆ ವ್ಯವಸ್ಥೆ
    iii. ಮನೆಗಳಲ್ಲಿ ಮತ್ತು ಅರ್ಪಾಟ್ ಮೆಂಟ್ ಗಳಲ್ಲಿ ಬಯೋ ಗ್ಯಾಸ್ ಉತ್ಪಾದನೆ ಮತ್ತು ಬಳಕೆ ಅರಿವು.
    iv. ಕೃತಕ ಸಾಬೂನು ಮತ್ತು ಡಿಟರ್ ಜೆಂಟ್ ಬದಲಾಗಿ ಸಾವಯವ ವಸ್ತುಗಳ
    ಮನೆಗಳ ಆವರಣದಲ್ಲಿ ಮತ್ತು ಮೇಲ್ಟಾವಣೆಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮತ್ತು ಬಳಕೆ.

    ಬೆಂಗಳೂರು ಸಾರ್ವಜನಿಕ ಆರೋಗ್ಯ ಮಂಡಳಿ ರಚನೆ (Creation of Bengaluru Public Health Board)
    ಬೆಂಗಳೂರು ನಗರವು ಪ್ರತಿ ರಸ್ತೆ ಉದ್ದ-ಅಗಲಕ್ಕೆ ಬೆಳೆದು (Ribbon Development) ಪ್ರತಿಯೊಂದು ಬಡಾವಣೆ ಮತ್ತು ರಸ್ತೆ ಅಕ್ಕ-ಪಕ್ಕದಲ್ಲಿ ವಾಣಿಜ್ಯ ಕೇಂದ್ರಗಳು, ಅಂಗಡಿ- ಮಳಿಗೆಗಳು, ಆಸ್ಪತ್ರೆಗಳು, ಹೋಟೆಲ್ ಗಳು ಮುಂತಾದವು ಹಬ್ಬಿ ಹರಡುತ್ತಿವೆ.
    * ಇವುಗಳ ಸೂಕ್ತ ನಿಯಂತ್ರಣ ಮತ್ತು ಬೆಳವಣಿಗೆಗೆ ಅಗತ್ಯವಿರುವ ಲೈಸೆನ್ಸ್ ನೀಡಲು, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿರವರ ನೇತೃತ್ವದಲ್ಲಿ ನಗರ ಯೋಜನೆ ತಜ್ಞರು ಮತ್ತು ನಾಗರೀಕ ಸೇವೆಗಳಲ್ಲಿ ಪರಿಣಿತರುಗಳನ್ನು ಒಳಗೊಂಡ ಬೆಂಗಳೂರು ಸಾರ್ವಜನಿಕ ಆರೋಗ್ಯ ಮಂಡಳಿಯನ್ನು ಸ್ಥಾಪಿಸಲಾಗುವುದು.
    * ಈ ಮಂಡಳಿಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಗ್ಗೆ ನಿಗಾವಹಿಸುವುದರೊಂದಿಗೆ ತ್ಯಾಜ್ಯ ನಿರ್ವಹಣೆ, ಅಂಟು ರೋಗಗಳ ತಡೆಗಟ್ಟವಿಕೆ, ಮಾಲಿನ್ಯ ತಡೆಗಟ್ಟುವಿಕೆ ಮುಂತಾದ ಆರೋಗ್ಯ ನಿರ್ವಹಣೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಉಸ್ತುವಾರಿ ವಹಿಸುತ್ತದೆ.

    ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ

    ಬೆಂಗಳೂರಿಗೆ ಆಧುನಿಕ ಉಪನಗರ ರೈಲ್ವೆ ವ್ಯವಸ್ಥೆ ಯೋಜನೆ ಮತ್ತು ಹಾಲಿ ಇರುವ ಭಾರತೀಯ ರೈಲ್ವೆ ಮಾರ್ಗ ಬಳಸಿ ಪ್ರಯಾಣಿಕರ ರೈಲು ವ್ಯವಸ್ಥೆ ನಿರ್ಮಾಣ (Local Commuter Railway Network System)
    * ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು 2018 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚಿಸಿ, 148 ಕಿ.ಮೀ. ಉದ್ದದ ಉಪನಗರ ರೈಲ್ವೆ ಯೋಜನೆಯನ್ನು ರೂ.15,767 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಕೇಂದ್ರ ಸರ್ಕಾರದ ಅನುಮತಿ ಪಡೆದರು. ಆದರೆ ಈ ಉಪನಗರ ಯೋಜನೆ ಕಾಮಗಾರಿ ಇದುವರೆಗೂ ನೆನೆಗುದ್ದಿಗೆ ಬಿದ್ದಿದ್ದು, ಈ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
    * ಮುಂಬೈ, ಹೈದರಬಾದ್ ಮತ್ತು ಚನೈ ನಗರಗಳಲ್ಲಿ ಇರುವಂತೆ ಬೆಂಗಳೂರು ನಗರದಲ್ಲಿ ಹಾಲಿ ನಗರದ ಸುತ್ತಲೂ ಇರುವ ಭಾರತೀಯ ರೈಲ್ವೆ ಮಾರ್ಗಗಳ ಜಾಲಗಳನ್ನು ಬಳಸಿ
    * ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ
    * ಬೆಂಗಳೂರು ಕಂಟೋನೆಂಟ್
    * ಚನ್ನಸಂದ್ರ
    * ಬೈಯಪ್ಪನಹಳ್ಳಿ
    * ವೈಟ್ ಫೀಲ್ಡ್
    * ಬಾಣಸವಾಡಿ
    * ಕೆಂಗೇರಿ
    * ಹೆಬ್ಬಾಳ
    * ನಾಯಂಡಹಳ್ಳಿ
    * ಜ್ಞಾನಭಾರತಿ
    * ಲೊಟ್ಟಿಗೊಲ್ಲ ಹಳ್ಳಿ
    * ನೆಲಮಂಗಲ
    * ಬೆಂಗಳೂರು ಪೂರ್ವ
    * ಯಶವಂತಪುರ
    ಮುಂತಾದ ರೈಲ್ವೆ ನಿಲ್ದಾಣಗಳನ್ನು ಜೋಡಿಸಿ, ಸ್ಥಳೀಯ ರೈಲ್ವೆ ಯೋಜನೆಯನ್ನು (Local Commuter Railway Network) ಭಾರತ ಸರ್ಕಾರ ಮತ್ತು ರೈಲ್ವೆ ಮಂಡಳಿ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿ, ಬೆಂಗಳೂರು ನಗರದ ವಾಹನ ಚಾಲನ ಸುಗಮ ಮಾಡಿಕೊಡಲಾಗುವುದು.

    ಬೆಂಗಳೂರು ಮಹಾನಗರ ಹಸರೀಕರಣ ಮತ್ತು ಅರಣೀಕರಣ

    * ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಕಾಲಾನುಕಾಲಕ್ಕೆ ಬೇಕಾಗಿರುವ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ಹಾಗೂ ಸರ್ಕಾರದ ಅಂಗ ಸಂಸ್ಥೆಗಳಾದ ಬಿ.ಬಿ.ಎಂ.ಪಿ.ಬಿ.ಡಿ.ಎ., ಬಿ.ಡ್ಯೂಎಸ್.ಎಸ್.ಬಿ. ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಲು ಬೆಂಗಳೂರು ಕಾರ್ಯಾಚರಣೆ ಸಂಶೋಧನ ಕೇ೦ದ್ರ ( Bangalore Operational Research centre) ಸ್ಥಾಪಿಸಲಾಗುವುದು.

    * ಮನೆ ಅಂಗಳದಲ್ಲಿ ಗಿಡ ನೆಟ್ಟು ಬೆಳಸಿದ ಮನೆ ಮಾಲೀಕನಿಗೆ ಪ್ರತಿ ಗಿಡಕ್ಕೆ ಪ್ರತಿ ವರ್ಷ ರೂ 2000 ರಂತೆ ನಗರ ಪಾಲಿಕೆಗೆ ಪಾವತಿಸಬೇಕಾದ ಸ್ವತ್ತಿನ ತೆರಿಗೆ ವಿನಾಯಿತಿ ನೀಡಲಾಗುವುದು.

    * 2007 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ 10 ಗ್ರಾಮಗಳಲ್ಲಿ 300 ಸಾರ್ವಜನಿಕ ಉದ್ಯಾನವನಗಳನ್ನು ನಿರ್ಮಿಸಲಾಗುವುದು.

    * ನಗರದ ನಿವಾಸಿಗಳು ತಮ್ಮ ನಿವೇಶನದಲ್ಲಿ 900 ಚದರ ಮೀಟರ್ ಗಿಂತ ಕಡಿಮೆ ವಿಸ್ತೀರ್ಣದ ಮನೆಯನ್ನು ನಿರ್ಮಿಸಿದರೆ, ಒಂದು ಲಕ್ಷ ರೂ.ಗಳ ಸಹಾಯ ಧನವನ್ನು ಸೋಲಾರ್ ವಿದ್ಯುತ್‌ ಉತ್ಪಾದನೆ ಘಟಕ ಸ್ಥಾಪಿಸಲು ನೀಡಲಾಗುವುದು.

    ನಮ್ಮಮೆಟ್ರೋ ವಿಸ್ತರಣೆ

    * ನಮ್ಮ ಮೆಟ್ರೋ ಮಾರ್ಗ ವಿಸ್ತರಿಸಿ 60 ಕೀ.ಮೀ. ಉದ್ದದ ಎಡ – ಬಲ ಪಾರ್ಶ್ವದ ಪ್ರದೇಶಗಳಿಗೆ ಮೆಟ್ರೋ ಮಾರ್ಗ ಒದಗಿಸಲಾಗುವುದು

    ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಿಕೆ

    * ಕಾವೇರಿ ನದಿಗೆ ಕನಕಪುರ ಬಳಿ ಮೇಕೆದಾಟುವಿಗೆ ಅಡ್ಡಲಾಗಿ 60 ಟಿ.ಎಂ.ಸಿ. ನೀರನ್ನು ಸಂಗ್ರಹಿಸುವ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಿ, ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲಾಗುವುದು.

    * ಎತ್ತಿನಹೊಳೆ ಯೋಜನೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 1.8 ಟಿ.ಎಂ.ಸಿ. ಮತ್ತು ಹೆಸರಘಟ್ಟ ಜಲಾಶಯಕ್ಕೆ 0.8 ಟಿ.ಎಂ.ಸಿ. ನೀರನ್ನು ತುಂಬಿಸಲಾಗುವುದು.

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡು, ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರು ಹೊರವರ್ತುಲ ರಸ್ತೆ (Peripheral Ring Road) ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು.

    ಜೆಡಿಎಸ್ ಜನತಾ ಪ್ರಣಾಳಿಕೆ ಬಿಡುಗಡೆ: ರೈತರು, ಯುವಕರು, ಮಹಿಳೆಯರಿಗೆ ಬಂಪರ್ ಘೋಷಣೆ

    ಬಿಜೆಪಿ ಪ್ರಣಾಳಿಕೆ ಬಿಡುಗಡೆ | ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಯಂದು ಬಿಪಿಎಲ್ ಕುಟುಂಬಗಳಿಗೆ 3 ಗ್ಯಾಸ್ ಸಿಲಿಂಡರ್ ಉಚಿತ; ಪ್ರತಿ ದಿನ ಅರ್ಧ ಲೀ. ಹಾಲು ಫ್ರೀ

    ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ: 5 ಗ್ಯಾರಂಟಿ ಯೋಜನೆ ಜತೆಗೆ ಕಾಂಗ್ರೆಸ್​ ನೀಡಿದ ಇನ್ನಿತರ ಭರವಸೆಗಳು ಹೀಗಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts