ತಟ್ಟೆ, ಊಟ, ಲೋಟ ಎಲ್ಲವೂ ಚೆಲ್ಲಾಪಿಲ್ಲಿ! ಹಾಸ್ಟೆಲ್​ ಮೇಲೆ ಬಿದ್ದ ವಿಮಾನ ಐವರು ವಿದ್ಯಾರ್ಥಿಗಳು ದುರ್ಮರಣ | Plane Crash

ವಿಜಯವಾಣಿ (2)
Published on

Plane Crash: ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ AI-171 ಏರ್​ ಇಂಡಿಯಾ ವಿಮಾನವು ಟೇಕಾಫ್ ವೇಳೆ ಅಪಘಾತಕ್ಕೆ ತುತ್ತಾಗಿದ್ದು, ದುರಂತದಲ್ಲಿ 241 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 242 ಜನರ ಮಧ್ಯೆ ಓರ್ವ ಮಾತ್ರ ಪವಾಡದಂತೆ ಬದುಕುಳಿದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.

ಈ ಮಧ್ಯೆ ದುರಂತಕ್ಕೀಡಾಗುವ ಮುನ್ನ ವಿಮಾನ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಉಳಿದಿದ್ದ ಹಾಸ್ಟೆಲ್​ಗೆ ನುಗ್ಗಿದ ಪರಿಣಾಮ ಊಟಕ್ಕೆ ಕುಳಿತ್ತಿದ್ದ ವಿದ್ಯಾರ್ಥಿಗಳ ಪೈಕಿ ಐವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಭೀಕರತೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ಡ್ರೀಮ್‌ಲೈನರ್ AI-171 ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ ಬೆಂಕಿಗೆ ಆಹುತಿಯಾಗಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಡಿಜಿಸಿಎ ಪ್ರಕಾರ, ಬೋಯಿಂಗ್ 787 ವಿಮಾನವು ರನ್‌ವೇ 23ರಿಂದ ಮಧ್ಯಾಹ್ನ 1.39ಕ್ಕೆ ಹೊರಟಿತು ಎಂದು ದೃಢಪಡಿಸಲಾಗಿದೆ. ಹೊರಟ ಕೆಲವೇ ಕ್ಷಣಗಳಲ್ಲಿ ‘ಮೇಡೇ’ ಸಂದೇಶ ಹೊರಬಿದ್ದಿದೆ. ಇದಾದ ಬೆನ್ನಲ್ಲೇ ವಿಮಾನ ವಾಯು ಸಂಚಾರ ನಿಯಂತ್ರಣದ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net