ಪಿಜ್ಜಾ ತಗೊಂಡ್ರು... ಹಣ ಕೇಳಿದ್ದಕ್ಕೆ ಡೆಲಿವರಿ ಬಾಯ್​ಗೆ ಕಲ್ಲಿನಿಂದ ಹೊಡೆದು ಓಡಿಹೋದ್ರು

pizza
Published on

ಬೆಂಗಳೂರು: ಆನ್​ಲೈನ್​ನಲ್ಲಿ ಪಿಜ್ಜಾ ಆರ್ಡರ್​ ಮಾಡಿದ್ದ ದುಷ್ಕರ್ಮಿಗಳು ಡೆಲಿವರಿ ಬಾಯ್​ಗೆ ಹಣ ಕೊಡದೇ ಕಲ್ಲಿನಿಂದ ಹಲ್ಲೆ ನಡೆಸಿ ಪಿಜ್ಜಾ ಸಮೇತ ಪರಾರಿಯಾಗಿದ್ದಾರೆ.

ಜು.28ರಂದು 10 ಗಂಟೆಗೆ ಭರತ್​ ಎಂಬುವವರು ಆನ್​ಲೈನ್​ನಲ್ಲಿ ಮೂರು ಪಿಜ್ಜಾ ಆರ್ಡರ್​ ಮಾಡಿದ್ದರು. 10.30ಕ್ಕೆ ಡೆಲಿವರಿ ಬಾಯ್​ ಹೇಮಂತ್​ ಪಿಜ್ಜಾ ಕೊಡಲು ಬಾಣಸವಾಡಿಯ ಮುನೇಶ್ವರ ದೇವಾಲಯದ ಬಳಿ ಬಂದಿದ್ದರು. ಅಲ್ಲಿಗೆ ಬಂದ ಭರತ್​ ಹಾಗೂ ಇತರರು ಪಿಜ್ಜಾ ತೆಗೆದುಕೊಂಡು ಹಣ ಕೊಡದೇ ಹೋಗಲು ಮುಂದಾದರು. ಹೇಮಂತ್​ ಹಣ ಕೇಳಿದಾಗ ಆರೋಪಿಗಳು ರಸ್ತೆಯಲ್ಲಿ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಪಿಜ್ಜಾದ ಹಣ ಕೊಡದೆ ಹಲ್ಲೆ ಮಾಡಿ ಪರಾರಿಯಾದ ಭರತ್​ ಮತ್ತು ಇತರರ ವಿರುದ್ಧ ಮಹದೇವಪುರ ನಿವಾಸಿ ಹೇಮಂತ್,​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆರೋಪಿಗಳು ಆನ್​ಲೈನ್​ನಲ್ಲಿ ಪಿಜ್ಜಾ ತರಿಸಿಕೊಂಡು ಹಲವು ಜನರಿಗೆ ವಂಚನೆ ಮಾಡಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net