More

    ಕುಖ್ಯಾತ ಬೈಕ್​ ಕಳ್ಳನ ಸೆರೆ, ಕದ್ದ ವಾಹನಗಳ ಮಾರಾಟ ವಿಧಾನ ಕೇಳಿದ್ರೆ ಶಾಕ್​ ಆಗ್ತೀರಿ

    ಬೆಂಗಳೂರು: ಪಾರ್ಕಿಂಗ್​ ಸ್ಥಳ ಅಥವಾ ಮನೆ, ಕಚೇರಿ ಮುಂದೆ ಬೈಕ್​ ನಿಲ್ಲಿಸೋಕು ಮುನ್ನ ಎಚ್ಚರ! ನಿಮ್ಮ ಬೈಕ್​ಗಳ ಲಾಕ್​ ಬ್ರೇಕ್​ ಮಾಡಿ ಕಳ್ಳತನ ಮಾಡುವ ಚಾಲಾಕಿ ಕಳ್ಳರ ಗ್ಯಾಂಗ್​ ನಗರದಲ್ಲಿದೆ.

    2010ರಿಂದ ಬೈಕ್​ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿರುವ ತಂಡವೊಂದು ಕದ್ದ ಬೈಕ್​ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವಲ್ಲಿ ನಿರತವಾಗಿದೆ. ಈ ಕುಖ್ಯಾತ ಕಳ್ಳರ ಗ್ಯಾಂಗ್​ ಸೆರೆ ಹಿಡಿಯಲು ಸಿಸಿಬಿ ಪೊಲೀಸರು ಬೀಸಿದ ಬಲೆಗೆ ಶಿವಾಜಿನಗರದ ಸಯ್ಯದ್​ ತಬ್ರೇಜ್​ ಪಾಷಾ ಅಲಿಯಾಸ್​ ಸಿತಾರಾ (40) ಎಂಬಾತ ಸಿಕ್ಕಿಬಿದ್ದಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಬಂಧಿತನಿಂದ 7 ಬೈಕ್​ ಜಪ್ತಿ ಮಾಡಲಾಗಿದೆ.

    ಇದನ್ನೂ ಓದಿರಿ ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!

    ಕದ್ದ ಬೈಕ್​ಗಳನ್ನು ಮಾಲೀಕರಿಗೆ ಗುರುತು ಸಿಗದಂತೆ ನೋಂದಣಿ ಸಂಖ್ಯೆ ಬದಲಾಯಿಸುತ್ತಿದ್ದರು. ಆ ನಂತರ ಇಂಜಿನ್​ ಮತ್ತು ಚಾಸಿರ್ ನಂಬರ್​ ಅನ್ನು ಟ್ಯಾಂಪರ್​ ಮಾಡಿ ಅವುಗಳನ್ನು ಬದಲಾಯಿಸಿ ಬೇರೆ ಬೇರೆ ನಂಬರ್​ ಹಾಕುತ್ತಿದ್ದರು. ಅದಕ್ಕೆ ತಕ್ಕಂತೆ ಆರ್​.ಸಿ. ಬುಕ್​ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು.

    ಇದಲ್ಲದೆ, ಕದ್ದ ವಾಹನಗಳ ಬಿಡಿ ಭಾಗಗಳನ್ನು ಬಿಚ್ಚಿ ಮಾರಾಟ ಮಾಡುತ್ತಿದ್ದರು. ಬೈಕ್​ಗಳನ್ನು 10 ರಿಂದ 25 ಸಾವಿರ ರೂ. ವರೆಗೆ ಮಾರಾಟ ಮಾಡಿ ಬಂದ ಹಣದಲ್ಲಿ ಆರೋಪಿಗಳು ಹಂಚಿಕೊಳ್ಳುತ್ತಿದ್ದರು. ನಗರದ ಹಲವೆಡೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ತನಿಖೆ ನಡೆಸುವಂತೆ ರಾಜಾಜಿನಗರ ಠಾಣೆಗೆ ಪ್ರಕರಣ ವಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

    ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಾದ ವೀಲರ್​ ಷರೀಪ್​ ಮತ್ತು ಕುಲ್ಮಿ ಮೌಲಾ ಎಂಬುವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    ಗಂಡ ಸತ್ತು 2 ತಿಂಗಳಾಯ್ತು, ಕಡುಬಡತನಕ್ಕೆ ಹೆದರಿ ಹಸುಗೂಸನ್ನೇ ದತ್ತು ಕೊಡಲು ಬಯಸಿದಳು… ಕೊನೆಗೆ ಆ ದಂಧೆಗೆ ಸಿಲುಕಿದಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts