ಅಯ್ಯೋ ದುರ್ವಿಧಿಯೇ... ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ದುರಂತ ಸಾವು! Pistachio shell

Pistachio shell
Published on

Pistachio shell : ಪಿಸ್ತಾ ಸಿಪ್ಪೆ ಗಂಟಲಿನಲ್ಲಿ ಸಿಲುಕಿ ಎರಡು ವರ್ಷದ ಮಗು ದಾರುಣವಾಗಿ ಮೃತಪಟ್ಟಿರುವ ಮನಕಲಕುವ ಘಟನೆ ಕಾಸರಗೋಡಿನ ಕುಂಬ್ಳ ನಗರದದಲ್ಲಿ ನಿನ್ನೆ (ಜ.12) ನಡೆದಿದೆ.

ಮೃತ ಬಾಲಕನನ್ನು ಅನಸ್​ ಎಂದು ಗುರುತಿಸಲಾಗಿದೆ. ಈತ ಅನ್ವರ್ ಮತ್ತು ಮೆಹರೂಫಾ ದಂಪತಿಯ ಪುತ್ರ. ಶನಿವಾರ (ಜ.11) ಮಧ್ಯಾಹ್ನ ಮನೆಯಲ್ಲಿ ಪಿಸ್ತಾ ಸಿಪ್ಪೆಯನ್ನು ತಿಂದಿದ್ದ. ಮನೆಯವರು ತಕ್ಷಣ ಆತನ ಬಾಯಿಯಲ್ಲಿ ಕೈ ಹಾಕಿ ಸಿಪ್ಪೆಯನ್ನ ಹೊರತೆಗೆದರು.

ಗಂಟಲಿನಲ್ಲಿ ಇನ್ನೂ ಸಿಪ್ಪೆ ಇದೆಯೇ ಎಂದು ಪರೀಕ್ಷಿಸಲು ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದರು. ಪರೀಕ್ಷೆ ಮಾಡಿದ ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಕುಟುಂಬವು ನಿಟ್ಟುಸಿರುವ ಬಿಟ್ಟು ಮನೆಗೆ ಮರಳಿತು. ಆದರೆ, ವಿಧಿಯಾಟವೇ ಬೇರೆ ಇತ್ತು. ಭಾನುವಾರ ಬೆಳಗ್ಗೆ, ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮಗು ಮೃತಪಟ್ಟಿದೆ.

ವಿದೇಶದಿಂದ ಬಂದಿದ್ದ ಮಗುವಿನ ತಂದೆ ಅನ್ವರ್ ಒಂದು ವಾರದ ಹಿಂದಷ್ಟೇ ಗಲ್ಫ್‌ಗೆ ಮರಳಿದ್ದರು. ಇದೀಗ 2 ವರ್ಷದ ಮುದ್ದಾದ ಮಗನನ್ನು ಕಳೆದುಕೊಂಡ ಇಡೀ ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net