

ನವದೆಹಲಿ: ಚಾಕುವಿನಂತ ಹರಿತವಾದ ಹಲ್ಲುಗಳನ್ನು ಹೊಂದಿರುವ ಪಿರಾನ್ಹಾಗಳು ವಿಶ್ವದ ಅತ್ಯಂತ ಅಪಾಯಕಾರಿ ಜೀವರಾಶಿಗಳಲ್ಲಿ ಒಂದಾಗಿದ್ದು, ಇತ್ತೀಚಿನ ವೈರಲ್ ವಿಡಿಯೋವೊಂದರಲ್ಲಿ ಸತ್ತ ಮೊಸಳೆಯ ಬಾಲವನ್ನು ಕ್ಷಣ ಮಾತ್ರದಲ್ಲಿ ಕತ್ತರಿಸುತ್ತಿರುವ ದೃಶ್ಯ ಇದೀಗ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.
ನದಿಯಲ್ಲಿ ನಿರ್ಜೀವ ಮೊಸಳೆಯ ಬಾಲವನ್ನು ವೇಗವಾಗಿ ತನ್ನ ಹರಿತವಾದ ಹಲ್ಲುಗಳಿಂದ ಹರಿದು ಹಾಕುವ ಪಿರಾನ್ಹಾದ ದೃಶ್ಯವನ್ನು ಫಿಶಿಂಗ್ ಸ್ಟೇಟ್ಸ್ ಎಂಬ ಹೆಸರಿನ ಪುಟ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಕೆಲವೇ ಕ್ಷಣದಲ್ಲಿ ಈ ದೃಶ್ಯ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಒಂದು ನಿಮಿಷ ದಿಗ್ಭ್ರಮೆಗೊಂಡಿದ್ದಾರೆ. ಮನುಷ್ಯನ ಅಂಗೈ ಅಗಲದಷ್ಟು ಇರುವ ಪಿರಾನ್ಹಾ ಎಷ್ಟು ಆಕ್ರಮಣಕಾರಿ ಎಂಬುದು ಹಲವರಿಗೆ ಈ ದೃಶ್ಯದ ಮೂಲಕ ಅರಿವಾಗಿದೆ,(ಏಜೆನ್ಸೀಸ್).