More

    ‘ಸಲಾರ್’​ ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಸುಳಿವು ಕೊಟ್ಟಿದ್ದಾರೆ ಈ ನಟ!

    ಆಂಧ್ರಪ್ರದೇಶ: ಡಾರ್ಲಿಂಗ್ ಪ್ರಭಾಸ್ ನಟನೆಯ ‘ಸಲಾರ್’​ ಇದೀಗ ಸಿನಿಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಚಿತ್ರದ ಕುರಿತು ಹೊಸ ಮಾಹಿತಿಗಾಗಿ ಫ್ಯಾನ್ಸ್​ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಈ ಮಧ್ಯೆ ತೆಲುಗು ನಟ ಬ್ರಹ್ಮಾಜಿ ಸಲಾರ್​​ ಸಿನಿಮಾದಲ್ಲಿ ನಾನು ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದೇನೆ ಎಂದು ಬಹಿರಂಗವಾಗಿ ಹೇಳಿರುವುದು ಇದೀಗ ಮುನ್ನೆಲೆಗೆ ಬಂದಿದೆ.

    ಇದನ್ನೂ ಓದಿ: ಹೆಂಡತಿ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ ಎಂದು ತಿಳಿದ ನಂತರ ಮಗುವಿಗೆ ಜನ್ಮ ಕೊಟ್ಟ ಪತಿ!

    ರೆಬಲ್​ ಸ್ಟಾರ್​ ಪ್ರಭಾಸ್​ ಮತ್ತು ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್​​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸಲಾರ್​, ಸಾಲು ಪ್ಯಾನ್ ಇಂಡಿಯಾ ಚಿತ್ರಗಳ ಪೈಕಿ ಹೆಚ್ಚಿನ ಖ್ಯಾತಿ ಮತ್ತು ನಿರೀಕ್ಷೆಯನ್ನು ಪಡೆದುಕೊಂಡಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಬ್ರಹ್ಮಾಜಿ, “ನಾನು ಸಲಾರ್​ನ ಭಾಗವಾಗಿದ್ದೇನೆ. ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದೇನೆ, ಕ್ಲೈಮ್ಯಾಕ್ಸ್​ನಲ್ಲಿ ಕಾಣಿಸಿಕೊಳ್ಳಬಹುದು” ಎಂಬ ಸಂಗತಿಯನ್ನು ಇದೀಗ ಬಹಿರಂಪಡಿಸಿದ್ದಾರೆ.

    ಸದ್ಯ ಚಿತ್ರದ ಟೀಸರ್​ ಬಿಡುಗಡೆಗೊಂಡು ಹೊಸ ದಾಖಲೆಯನ್ನು ಬರೆದು, ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಇದೀಗ ಟ್ರೇಲರ್​​ನತ್ತ ಸಿನಿಪ್ರೇಕ್ಷಕರು ಮುಖಮಾಡಿದ್ದು, ಯಾವಾಗ ರಿಲೀಸ್​​ ಆಗಲಿದೆ ಎಂದು ಕಾಯುತ್ತಿದ್ದಾರೆ. ಈ ಮಧ್ಯೆ ಚಿತ್ರತಂಡ ಸಲಾರ್​ ಅನ್ನು ಸೆಪ್ಟೆಂಬರ್ 28, 2023 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳಿಸಲು ಮುಂಚಿತವಾಗಿಯೇ ದಿನಾಂಕವನ್ನು ನಿಗದಿಪಡಿಸಿದೆ.

    ಇದನ್ನೂ ಓದಿ: ಫುಡ್‌ಕೋರ್ಟ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ  – ಮೇಯರ್ ವಿನಾಯಕ ಜತೆ ಅಧಿಕಾರಿಗಳ ಭೇಟಿ 

    ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಶ್ರೀಯಾ ರೆಡ್ಡಿ, ಜಗಪತಿ ಬಾಬು, ಈಶ್ವರಿ ರಾವ್ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

    1 ದಿನದ ರಜೆಗೆ 500, ಇಷ್ಟದ ಡ್ಯೂಟಿಗೆ 10,000 ರೂಪಾಯಿ: ಕೆಲ KSRP ಅಧಿಕಾರಿಗಳ ಲಂಚಾವತಾರ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts