More

    ಫುಡ್‌ಕೋರ್ಟ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ  – ಮೇಯರ್ ವಿನಾಯಕ ಜತೆ ಅಧಿಕಾರಿಗಳ ಭೇಟಿ 

    ದಾವಣಗೆರೆ: ನಗರದಲ್ಲಿ ವ್ಯವಸ್ಥಿತ ಫುಡ್‌ಕೋರ್ಟ್ ಮತ್ತು ಬೀದಿಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಸೂಕ್ತ ಸ್ಥಳ ನಿಗದಿ ಸಂಬಂಧ, ನಗರಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್ ನೇತೃತ್ವದಲ್ಲಿ ಅಧಿಕಾರಿಗಳು ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಗುಂಡಿ ಮಹದೇವಪ್ಪ ವೃತ್ತ, ಜಯದೇವ ವೃತ್ತ, ಬಾಪೂಜಿ ಆಸ್ಪತ್ರೆ ರಸ್ತೆ, ಹದಡಿ ರಸ್ತೆ, ವೀರಮದಕರಿನಾಯಕ ವೃತ್ತ ಸೇರಿ ವಿವಿಧೆಡೆ ನಿವೇಶನಕ್ಕೆ ಹುಡುಕಾಟ ನಡೆಸಲಾಯಿತು.
    ಮೇಯರ್ ವಿನಾಯಕ ಪೈಲ್ವಾನ್ ಮಾತನಾಡಿ ದಾವಣಗೆರೆಯಲ್ಲಿ ಸಾರ್ವಜನಿಕರು ಹಾಗೂ ಎಲ್ಲ ವರ್ಗದವರಿಗೂ ಸುಲಭವಾಗಿ ಸಿಗುವ ಹಾಗೂ ಅತ್ಯಾಧುನಿಕ ವ್ಯವಸ್ಥೆಯುಳ್ಳ ಫುಡ್‌ಕೋರ್ಟ್ ಆಗಬೇಕಿದೆ. ತ್ಯಾಜ್ಯ ನಿರ್ವಹಣೆ, ಮಳೆಗಾಲದ ಸಂದರ್ಭದಲ್ಲಿ ಸೂಕ್ತ ಜಾಗವಿಲ್ಲದ್ದರಿಂದ ರಸ್ತೆಗಳಲ್ಲೇ ವ್ಯಾಪಾರ ಮಾಡುತ್ತಿರುವ ವರ್ತಕರು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ಅವರಿಗೂ ಸೂಕ್ತ ಸ್ಥಳ ಕಲ್ಪಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
    ಹಾಜರಿದ್ದ ಆಯುಕ್ತೆ ರೇಣುಕಾ ಮಾತನಾಡಿ, ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಫುಡ್‌ಕೋರ್ಟ್ ಮಾಡಿದರೆ ವ್ಯಾಪಾರವೂ ಉತ್ತಮವಾಗಲಿದೆ. ಜನರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.
    ಕೆಳಸೇತುವೆ ವೀಕ್ಷಣೆ:
    ಪಾಲಿಕೆಯ ಎದುರಿನ ರೈಲ್ವೆ ಕೆಳಸೇತುವೆ ವೀಕ್ಷಣೆ ನಡೆಸಿದ ಮೇಯರ್, ಆಯುಕ್ತರು, ಮಳೆ ಹೆಚ್ಚಾದರೆ ಕೆಳಸೇತುವೆಯಲ್ಲಿ ನೀರು ನಿಲ್ಲುತ್ತಿದೆ. ಕೂಡಲೆ ಹೂಳೆತ್ತುವ ಜತೆಗೆ ನೀರು ಹೊರಹಾಕಲು ಮೋಟಾರ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
    ಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್‌ಗಳಾದ ಉದಯಕುಮಾರ್, ಮನೋಹರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts