ರೈತರ 450 ಕೋಟಿ ರೂ. ಬಡ್ಡಿ ಮನ್ನಾ

16sri-1 sahakara
ಶೃಂಗೇರಿಯಲ್ಲಿ ಪಿಕಾರ್ಡ್ ಬ್ಯಾಂಕ್‌ನ ಅಮೃತಮಹೋತ್ಸವ ಕಾರ್ಯಕ್ರಮವನ್ನು ಶ್ರೀಮಠದ ಮುಖ್ಯಸಲಹೆಗಾರ ಡಾ. ವಿ.ಆರ್.ಗೌರೀಶಂಕರ್ ಉದ್ಘಾಟಿಸಿದರು. ಟಿ.ಕೆ.ಪರಾಶರ, ಸುರೇಶ್ಚಂದ್ರ, ಕೆ.ಎಂ.ಶ್ರೀನಿವಾಸ್, ಕಂಬಳಗದ್ದೆ ಮಂಜುನಾಥ್, ನವೀನ್ ಇದ್ದರು.
Published on

ಶೃಂಗೇರಿ: ಸಹಕಾರ ಕ್ಷೇತ್ರ ಸದಾ ರೈತರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದೆ ಎಂದು ರಾಜ್ಯ ಕಸ್ಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ಷಡಕ್ಷರಿ ತಿಳಿಸಿದರು.
ಅವರು ಸೋಮವಾರ ಆದಿಚುಂಚನಗಿರಿ ಸಮುದಾಯಭವನದಲ್ಲಿ ಪಿಕಾರ್ಡ್ ಬ್ಯಾಂಕ್‌ನ ಅಮೃತ ಮಹೋತ್ಸವದ ವಾಣಿಜ್ಯ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರೃಪೂರ್ವದಲ್ಲಿ ಹಿರಿಯರು ಉನ್ನತ ಉದ್ದೇಶದಿಂದ ಸಹಕಾರ ಸಂಘ ಕಟ್ಟಿ ಬೆಳೆಸಿದ್ದಾರೆ. ಮಲೆನಾಡಿನಲ್ಲಿ ಶೇ.80 ರಷ್ಟು ರೈತರಿದ್ದು, ಸಂಕಷ್ಟದಿಂದ ಕೃಷಿಕರ ಸಂಖ್ಯೆ ಇಳಿಮುಖವಾಗಿದೆ. ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಿದ್ದು, ರೈತರ 450 ಕೋಟಿ ರೂ. ಬಡ್ಡಿ ಮನ್ನಾ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ರೈತರಿಗೆ ಒಂದು ಸಾವಿರ ಕೋಟಿ ರೂ. ದೀರ್ಘಾವಧಿ ಸಾಲ ನೀಡಿ 100 ಕೋಟಿ ರೂ.ಆದಾಯಗಳಿಸುವ ಉದ್ದೇಶವಿದೆ ಎಂದರು.
ಶೃಂಗೇರಿ ಶ್ರೀಮಠದ ಮುಖ್ಯ ಸಲಹೆಗಾರ ಡಾ. ವಿ.ಆರ್.ಗೌರೀಶಂಕರ್ ಮಾತನಾಡಿ, ಸಹಕಾರ ಕ್ಷೇತ್ರದ ಕುರಿತು ಜನಸಾಮಾನ್ಯರಲ್ಲಿ ಇದ್ದ ಗೊಂದಲ ನಿವಾರಿಸಿ ಪಿಕಾರ್ಡ್ ಬ್ಯಾಂಕ್ ಏಳು-ಬೀಳುಗಳ ನಡುವೆ 75 ವರ್ಷ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಶತಮಾನೋತ್ಸವದತ್ತ ದಾಪುಗಾಲಿಡುತ್ತಿದೆ. ಮಲೆನಾಡಿನಲ್ಲಿ 5-6 ಕೋಟಿ ರೂ. ವ್ಯವಹಾರ ಮಾಡಿ ಜನಮನ್ನಣೆಗೆ ಪಾತ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಸಹಕಾರ ಬ್ಯಾಂಕ್‌ಗಳಿಗೆ ಶತಮಾನಗಳ ಇತಿಹಾಸವಿದೆ. ರೈತರ ಬದುಕಿನ ಜೀವನಾಡಿಯಾಗಿದೆ. ಹವಾಮಾನ ವೈಪರೀತ್ಯ,ಬೆಳೆಗಳನ್ನು ಕಾಡುವ ರೋಗಗಳಿಂದ ತತ್ತರಿಸುತ್ತಿರುವ ರೈತರಿಗೆ ಸರ್ಕಾರ ಬಡ್ಡಿಮನ್ನಾ ಮಾಡಿವೆ. ಜನಸಾಮಾನ್ಯರ ಹಾಗೂ ರೈತರ ಉಪಯೋಗಕ್ಕಾಗಿ ಸಹಕಾರ ಕ್ಷೇತ್ರಗಳು ಪೂರಕವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಸಹಕಾರ ಕ್ಷೇತ್ರಗಳ ಕಟ್ಟಡ ನಿರ್ಮಾಣ,ಇತರ ಕಾಮಗಾರಿ ಸಂದರ್ಭದಲ್ಲಿ ಖರೀದಿಸುವ ಸಿಮೆಂಟ್ ಇತ್ಯಾದಿ ಸಾಮಗ್ರಿಗಳ ಜಿ.ಎಸ್.ಟಿ ಕಡಿಮೆ ಮಾಡಬೇಕಿದೆ ಎಂದರು.
ಸಂಸ್ಥೆ ಮಾಜಿ ಅಧ್ಯಕ್ಷ ಬಿ.ಕೆ.ರವಿ ಅವರನ್ನು ಗೌರವಿಸಲಾಯಿತು. ಕಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ಈ.ಆರ್.ಮಹೇಶ್ ಈಶ್ವರಳ್ಳಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಸಿ.ಶಂಕರಪ್ಪ, ನಿರ್ದೇಶಕ ಜಿ.ವಿ.ಮೋಹನ್, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಚನ್ನಕೇಶವ, ವ್ಯವಸ್ಥಾಪಕ ಕೆ.ಪಿ.ಶ್ರೀನಿವಾಸ್, ತಾಲೂಕಿನ ಸಹಕಾರ ಬ್ಯಾಂಕ್ ಅಧ್ಯಕ್ಷರು ಹಾಗೂ ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net