ಫಿಸಿಯೋಥೆರೆಪಿಸ್ಟ್​ಗಳು ವೈದ್ಯರಲ್ಲ! 'ಡಾಕ್ಟರ್​' ಪದ ಬಳಕೆಯು ಕಾನೂನು ಉಲ್ಲಂಘನೆ: ವರದಿ | Physiotherapists

Untitled design (5)
Published on

Physiotherapists: ಫಿಸಿಯೋಥೆರೆಪಿಸ್ಟ್​ಗಳು ವೈದ್ಯರಲ್ಲ. ಅವರು 'ಡಾಕ್ಟರ್​' ಎಂಬ ಪದವನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಮಾಡಿದರೆ ಅದು ಕಾನೂನು ಉಲ್ಲಂಘನೆ ಎಂದು ಆರೋಗ್ಯ ಸೇವೆಗಳ ನಿರ್ದೇಶನಾಲಯವು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

'ಎನ್​ಡಿಟಿವಿ' ವರದಿ ಪ್ರಕಾರ, ಸೆ.09ರಂದು ಬರೆದ ಪತ್ರದಲ್ಲಿ, ಡಿಜಿಎಚ್‌ಎಸ್ ಡಾ. ಸುನೀತಾ ಶರ್ಮಾ ಅವರು, ಡಾಕ್ಟರ್​ ಎಂಬ ಪದವನ್ನು ಫಿಸಿಯೋಥೆರೆಪಿಸ್ಟ್​ಗಳು ಬಳಸಿಕೊಳ್ಳುವಂತಿಲ್ಲ. ಯಾಕೆಂದರೆ, ಇದು 1916ರ ಭಾರತೀಯ ವೈದ್ಯಕೀಯ ಪದವಿ ಕಾಯ್ದೆಯಡಿ ಕಾನೂನು ಉಲ್ಲಂಘನೆಗೆ ಒಳಡುತ್ತದೆ ಎಂದು ಸ್ಪಷ್ಪಪಡಿಸಿದ್ದಾರೆ.

ಫಿಸಿಯೋಥೆರೆಪಿಸ್ಟ್​ಗಳು ಮೆಡಿಕಲ್​ ವೈದ್ಯರಾಗಿ ತರಬೇತಿಯನ್ನು ಪಡೆದಿರುವುದಿಲ್ಲ. ಹೀಗಾಗಿ, 'ಡಾಕ್ಟರ್​' ಪದವನ್ನು ಅವರು ಬಳಿಸಿಕೊಳ್ಳಬಾರದು. ಇದು ರೋಗಿಗಳು ಮತ್ತು ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿಸಿದ ರೋಗಿಗಳಿಗೆ ಮಾತ್ರ ಅವರು ಚಿಕಿತ್ಸೆ ಕೊಡಬೇಕು. ಅವರಿಗೆ ವೈದ್ಯಕೀಯ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ತರಬೇತಿಯನ್ನು ನೀಡಿರುವುದಿಲ್ಲ. ಇದು ಮತ್ತೊಂದು ತೊಂದರೆಗೆ ದಾರಿ ಮಾಡಿಕೊಡಬಹುದು. ಹೀಗಾಗಿ ಬಳಕೆ ಬೇಡ ಎಂದು ತಿಳಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net