ಸುವರ್ಣಸೌಧದಲ್ಲಿ ಫೋಟೋ ರಾಜಕಾರಣ; ದಾರಿಯುದ್ದಕ್ಕೂ ಬ್ಯಾನರ್ ಹಾವಳಿ!

Photo F
Published on

ಬೆಳಗಾವಿ: ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ ಇಂದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಸಿ ಅನಾವರಣ ಮಾಡಿದ್ದಕ್ಕೆ ವಿಪಕ್ಷದವರಿಂದ ತೀವ್ರ ವಿರೋಧ ಉಂಟಾಗಿ, ಫೋಟೋ ರಾಜಕಾರಣ ಕಂಡುಬಂದಿತ್ತು.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂತಾದ ಕಾಂಗ್ರೆಸ್ ನಾಯಕರು ಸಾವರ್ಕರ್ ಫೋಟೋಗೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ ಬೇರೆ ಮಹನೀಯರ ಫೋಟೋಗಳನ್ನು ಅಳವಡಿಸಲು ಒತ್ತಾಯಿಸಿ ಸುವರ್ಣ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿದ್ದರು.

ಆದರೆ ಸುವರ್ಣಸೌಧದಲ್ಲಿ ಫೋಟೋ ರಾಜಕಾರಣ ಕಂಡುಬಂದರೆ ಅದರ ಸುತ್ತಮುತ್ತ ಬ್ಯಾನರ್ ಹಾವಳಿ ಕಂಡುಬಂತು. ಸುವರ್ಣಸೌಧದ ಒಳಗೆ ಅವರ ಫೋಟೋ ಹಾಕಿ, ಇವರ ಫೋಟೋ ಹಾಕಿ ಎಂದೆಲ್ಲ ಬೇರೆ ಮಹನೀಯರ ಪರವಾಗಿ ರಾಜಕಾರಣಿಗಳು ಮಾತನಾಡಿದ್ದರೆ, ಅದರ ಸುತ್ತಮುತ್ತಲ ರಸ್ತೆಗಳಲ್ಲಿ ಪಕ್ಷಾತೀತವಾಗಿ ರಾಜಕಾರಣಿಗಳದ್ದೇ ಫೋಟೋಗಳು ರಾರಾಜಿಸುತ್ತಿದ್ದವು. ಎಲ್ಲೆಡೆ ರಾಜಕಾರಣಿಗಳ ಬ್ಯಾನರ್​ ಹಾವಳಿಯ ವಿಪರ್ಯಾಸವೂ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net