ಇದೇನು ಚಪಾತಿನಾ? ಮರದ ತುಂಡಾ? ಪಿಜಿ ಊಟ ಹಿಡಿದು ಯುವತಿ ಅಳಲು, ನೆಟ್ಟಿಗರು ಕಿಡಿ!

WhatsApp-Image-2024-04-30-at-2.22.44-PM
Published on

ಇತ್ತೀಚಿನ ದಿನಗಳಲ್ಲಿ ತಮಗೆ ಏನಾದರೂ ಸಮಸ್ಯೆ ಉಂಟಾಗುತ್ತಿದೆ ಅಥವಾ ಅನ್ಯರಿಗೆ ಯಾವುದಾದರೂ ತೊಂದರೆ ಆಗುತ್ತಿದೆ ಎಂದರೆ ಅನೇಕರು ಮೊದಲು ಹೋಗುವುದು ಸೋಷಿಯಲ್ ಮೀಡಿಯಾ ಮೊರೆ. ಹೌದು, ತಮ್ಮ ಸಮಸ್ಯೆಗಳನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಇತರರಿಗೂ ಅದರ ಬಗ್ಗೆ ಅರಿವು ಮೂಡಿಸುತ್ತಾರೆ.

ಸದ್ಯ ಇದೇ ರೀತಿ ಇಲ್ಲೊಬ್ಬಳು ಯುವತಿ ಮಾಡಿದ್ದು, ತನ್ನ ಪಿಜಿಯಲ್ಲಿ ಉಣಬಡಿಸುವ ಆಹಾರದ ಗುಣಮಟ್ಟದ ಬಗ್ಗೆ ಮಾತನಾಡಿದ್ದು, ಪಿಜಿ ಊಟ ಎಷ್ಟು ಚೆನ್ನಾಗಿದೆ, ಎಷ್ಟು ಕ್ವಾಲಿಟಿಯಿಂದ ಮಾಡಿಕೊಡುತ್ತಾರೆ ನೋಡಿ ಎಂಬುದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾಳೆ. ಇದು ಈಕೆಯ ಒಬ್ಬಳ ಸಮಸ್ಯೆ ಅಲ್ಲ! ಯಾಕಂದ್ರೆ, ಪಿಜಿಯಲ್ಲಿ ಇರುವ ಅನೇಕ ಮಂದಿಯ ಬಹುದೊಡ್ಡ ಸಮಸ್ಯೆ ಇದು.

ಕೆಲವು ಪಿಜಿಗಳಲ್ಲಿ ಮಾತ್ರವಲ್ಲ, ಹಲವಾರು ಪಿಜಿಗಳಲ್ಲಿ ಈ ತೊಂದರೆ ಇದೆ. ಸದ್ಯ ಈ ಯುವತಿ ಹಂಚಿಕೊಂಡ ವಿಡಿಯೋ ಮಾತ್ರ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಅನೇಕರು ಆಕೆಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿ, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಯುವತಿ, ಪಿಜಿಯಲ್ಲಿ ಇರಿಸಲಾಗಿದ್ದ ಅನ್ನ, ಪಲ್ಯ ಮತ್ತು ಚಪಾತಿಯನ್ನು ತಟ್ಟೆಗೆ ಬಡಿಸಿಕೊಂಡು ಬಂದಿದ್ದಾಳೆ. ಈ ವೇಳೆ ಚಪಾತಿ ಗಟ್ಟಿಯಾಗಿ, ಕಲ್ಲಿನಂತಾಗಿರುವುದು ಕಂಡುಬಂದಿದೆ.

ಚಪಾತಿ ಹಿಡಿದು ತಟ್ಟೆಯ ಮೇಲೆ ಎರಡು ಸಲ ಬಾರಿಸಿದರೂ ಸಹ ಮುರಿಯದ ಚಪಾತಿ ನೋಡಿ ಯುವತಿ ಬೇಸರಗೊಂಡಿದ್ದಾಳೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ದೃಶ್ಯ ನೋಡಿದ ನೆಟ್ಟಿಗರು, ಇದೇ ನೋಡ್ರಿ ಪಿಜಿ ಆಹಾರದ ಗುಣಮಟ್ಟ ಎಂದು ವ್ಯಾಪಕವಾಗಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net