'ಪಿಎಫ್ಐ ನಾವು ಮರಳಿ ಬರುತ್ತೇವೆ'; ಎಚ್ಚರಿಕೆ ನೀಡಿದ ಕಿಡಿಗೇಡಿಗಳು

54456
Published on

ಮಂಗಳೂರು: ಪಿಎಫ್​ಐ ಸಂಘಟನೆ ಬ್ಯಾನ್ ಆದ ಹಿನ್ನೆಲೆ,ಇದೀಗ ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ ರಸ್ತೆಯ ಮೇಲೆ ಸಂಘಟನೆಯ ಎಚ್ಚರಿಕೆಯ ಬರಹವೊಂದು ಕಾಣಿಸಿದೆ.

ರಸ್ತೆ ಮೇಲೆ 'ಚಡ್ಡಿಗಳೇ ಎಚ್ಚರ -ಪಿಎಫ್ಐ ನಾವು ಮರಳಿ ಬರುತ್ತೇವೆ' ಎಂದು ಬರೆಯಲಾಗಿದೆ. ತಡ ರಾತ್ರಿ ಬಂದು ಈ ಬರಹ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಭೇಟಿ ನೀಡಿದ್ದಾರೆ. ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್​ಐ ಸಂಘಟನೆಯನ್ನು ಬ್ಯಾನ್ ಮಾಡಿ ಅದೇಶ ಹೊರಡಿಸಿತ್ತು. ಜತೆಗೆ ಅದರ ಅಂಗಸಂಸ್ಥೆಗಳನ್ನು ಸಹಿತ ಒಟ್ಟು 8 ಸಂಘಟನೆಗಳನ್ನು 5 ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ. ಹೀಗಾಗಿ ಮತ್ತೆ ನಾವು ಮರಳಿ ಬರುತ್ತೇವೆ ಎಂಬ ಸೂಚನಾ ಬರಹವನ್ನು ಕಿಡಿಗೇಡಿಗಳು ರಸ್ತೆ ಮೇಲೆ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net