ಭಾರತದಲ್ಲೇ ಪೆಟ್ರೋಲ್ ಅಗ್ಗ!

ವಿಜಯವಾಣಿ (5)
Published on

ವಿಜಯವಾಡ: ಇಡೀ ಜಗತ್ತಿನಲ್ಲೇ ಭಾರತದಲ್ಲಿ ಪೆಟ್ರೋಲ್ ಬೆಲೆ ಅತ್ಯಂತ ಕಡಿಮೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್​ಸಿಂಗ್ ಪುರಿ ಹೇಳಿದ್ದಾರೆ.

ಕಳೆದ 3 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತ ಸಾಗಿದೆ. ಈಗ ಭಾರತಕ್ಕೆ ಹೆಚ್ಚಿನ ತೈಲವು ಅಮೆರಿಕ, ಅರ್ಜೆಂಟೈನಾ, ಕೆನಡಾ, ಬ್ರೆಜಿಲ್, ಗಯಾನಾ, ಸುರಿನಾಮೆಯಿಂದ ಬರುತ್ತಿದೆ. ಒಟ್ಟು 40 ರಾಷ್ಟ್ರಗಳು ಭಾರತಕ್ಕೆ ತೈಲ ಪೂರೈಕೆ ಮಾಡುತ್ತಿದ್ದು, ಯಾವುದೇ ಕೊರತೆ ಇಲ್ಲ.

ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ತೈಲ ಪ್ರಮಾಣ ಹೆಚ್ಚಾಗಿದ್ದು, ಸಹಜವಾಗಿಯೇ ಬೆಲೆ ಇಳಿಕೆಯಾಗುತ್ತಿದೆ ಎಂದು ವಿವರಿಸಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ತಮ್ಮ ದೇಶದಲ್ಲಿ ಹೆಚ್ಚು ತೈಲ ಉತ್ಪಾದನೆ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಲಭ್ಯತೆ ಸಾಕಷ್ಟು ಸುಧಾರಿಸಲಿದೆ. ಇದರಿಂದ ತೈಲ ಬೆಲೆ ಇಳಿಕೆಯಾಗಿ, ಹಣದುಬ್ಬರ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net