

ಇಂದೋರ್; ವ್ಯಕ್ತಿಯೊಬ್ಬ ತನ್ನ ನೆರೆಹೊರೆಯವರನ್ನು ಅಪಹಾಸ್ಯ ಮಾಡಲು ತನ್ನ ನಾಯಿಗೆ 'ಶರ್ಮ' ಎಂದು ಹೆಸರಿಟ್ಟ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಇನ್ನೂ ಈ ಘಟನೆ ಹಿಂಸಾಚಾರಕ್ಕೆ ತಿರುಗಿ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ.
(ಏಜೆನ್ಸೀಸ್)
ವಿವಾದದ ನಿಖರವಾದ ವಿಚಾರ ಅರ್ಥಮಾಡಿಕೊಳ್ಳಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಇದರ ಸೂಕ್ಷ್ಮ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಭೂಪೇಂದ್ರ ಮತ್ತು ಅವರ ಇಬ್ಬರು ಸಹಚರರು ತಮ್ಮ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ವೀರೇಂದ್ರ ಆರೋಪಿಸಿದ್ದಾರೆ. ಗಾಯಗೊಂಡ ದಂಪತಿ ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ವರದಿಯ ಆಧಾರದ ಮೇಲೆ, ಪೊಲೀಸರು ಭೂಪೇಂದ್ರ ಸಿಂಗ್ ಮತ್ತು ಅವರ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಪೇಂದ್ರ ಸಿಂಗ್ ಎಂಬಾತನ ವಿರುದ್ಧ ವೀರೇಂದ್ರ ಶರ್ಮಾ ಮತ್ತು ಅವರ ಪತ್ನಿ ಕಿರಣ್ ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ನಾಯಿಯನ್ನು 'ಶರ್ಮಾ ಜಿ' ಎಂದು ಕರೆದು ಸ್ನೇಹಿತರ ಮುಂದೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.