15 ಸಾವಿರ ರೂ. ಬಿಲ್​ಗೆ 36 ಲಕ್ಷ ಟಿಪ್ಸ್​ ಕೊಟ್ಟ ಭೂಪ! ವೇಟರ್​ ಈಗ ಫುಲ್​ ಖುಷ್​!

tip
Published on

ವಾಷಿಂಗ್ಟನ್​: ಕರೊನಾ ಬಂದ ನಂತರ ಬಹುತೇಕರ ಬದುಕು ಬದಲಾಗಿದೆ. ದುಬಾರಿ ಖರ್ಚನ್ನು ದೂರ ಮಾಡಿರುವ ಜನರು ಅಲ್ಪತೃಪ್ತರಾಗುವುದನ್ನು ಕಲಿತಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಲಕ್ಷಾಂತರ ರೂಪಾಯಿ ಟಿಪ್ಸ್​ ಕೊಡುವ ಮೂಲಕ ಸುದ್ದಿಯಾಗಿದ್ದಾನೆ.

ಅಮೆರಿಕದ 'ಆಂಥೋನಿ ಅಟ್ ಪ್ಯಾಕ್ಸನ್' ರೆಸ್ಟೋರೆಂಟ್​ಗೆ ಇಂತದ್ದೊಂದು ಗ್ರಾಹಕ ಬಂದಿದ್ದ. ಈತ ರೆಸ್ಟೋರೆಂಟ್​ನಲ್ಲಿ ಕುಳಿತು ಊಟ ಮಾಡಿದ್ದಾನೆ. ಊಟಕ್ಕೆ 205 ಡಾಲರ್​ (15 ಸಾವಿರ ರೂಪಾಯಿ) ಬಿಲ್​ ಆಗಿದ್ದು, ಅದನ್ನು ಗಿಯನ್ನಾ ಡಿ ಏಂಜೆಲೊ ಹೆಸರಿನ ವೇಟರ್​ ಆತನಿಗೆ ತಂದುಕೊಟ್ಟಿದ್ದಾನೆ. ಆದರೆ ಆತ ಬಿಲ್​ ಅಮೌಂಟ್​ನ ಜತೆ 5000 ಡಾಲರ್​ ಅಂದರೆ ಸರಿಸುಮಾರು 36 ಲಕ್ಷ ರೂಪಾಯಿ ಟಿಪ್ಸ್​ ಕೊಟ್ಟಿದ್ದಾನೆ. ಆ ಹಣವನ್ನು ನೋಡಿದ ಗಿಯನ್ನಾ ಒಮ್ಮೆ ಗಾಬರಿಯಾಗಿದ್ದಾಳೆ. ನಂತರ ಅದನ್ನು ಸ್ವೀಕರಿಸಿದ್ದಾಳೆ.

ಈ ರೀತಿಒಯ ವಿಶಿಷ್ಟ ಗ್ರಾಹಕ ತಮ್ಮ ರೆಸ್ಟೋರೆಂಟ್​ಗೆ ಬಂದಿದ್ದಾಗಿ ಆಂಥೋನಿ ಅಟ್ ಪ್ಯಾಕ್ಸನ್ ರೆಸ್ಟೋರೆಂಟ್​ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅದರ ಜತೆ ಆತನ ಬಿಲ್ಲಿನ ಫೋಟೋವನ್ನೂ ಶೇರ್​ ಮಾಡಲಾಗಿದೆ.

ಭಾರಿ ಹಣವನ್ನು ಟಿಪ್ಸ್​ ಆಗಿ ಪಡೆದಿರುವ ಗಿಯನ್ನಾ ಆ ಹಣವನ್ನು ತನ್ನ ವಿದ್ಯಾಭ್ಯಾಸಕ್ಕಾಗಿ ಬಳಸುವುದಾಗಿ ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net