ಮುಟ್ಟಿನ ಸಮಸ್ಯೆಗಳನ್ನು ನಿಭಾಯಿಸಲು ಈ ಸರಳ ಮಾರ್ಗಗಳು! Period pain

periods pain
Published on

Period pain: ಮಹಿಳೆಯರ ಮೊದಲ ಋತುಚಕ್ರದಿಂದ ಹಿಡಿದು ಋತುಬಂಧದವರೆಗೆ ಅನೇಕ ರೀತಿಯ ಮುಟ್ಟಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಋತುಚಕ್ರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಲ್ಲದೇ ಜೀವನವನ್ನು ನಡೆಸುತ್ತಾರೆ ಎಂದರೆ ಊಹಿಸಲು ಸಾಧ್ಯವಿಲ್ಲ.

ಅನೇಕ ಮಹಿಳೆಯರು ಈ ದಿನಗಳಲ್ಲಿ ಅನಿಯಮಿತ ಋತುಚಕ್ರ, ಭಾರೀ ರಕ್ತಸ್ರಾವ, ನೋವಿನ ಸೆಳೆತ ಅಥವಾ ಮನಸ್ಥಿತಿಯಲ್ಲಿನ ಬದಲಾವಣೆಗಳಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ಸಮಸ್ಯೆಗಳು ಸುಮಾರು ವರ್ಷಗಳಿಂದಲೇ ಅಸ್ತಿತ್ವದಲ್ಲಿರುತ್ತದೆ. ಇನ್ನು ಕೆಲವು ಆಧುನಿಕ ಶೈಲಿಯ ಬದಲಾವಣೆಗಳು, ಹಾರ್ಮೋನ್​ಗಳ ಅಸಮತೋಲನ, ಪಿಸಿಓಎಸ್, ತೂಕ ಬದಲಾವಣೆಗಳು ಹಾಗೂ ಥೈರಾಯ್ಡ್ ಸ್ಥಿತಿಗಳಿಗೆ ಸಂಬಂಧಿಸಿರುತ್ತವೆ.

ಈ ಸಮಸ್ಯೆಗಳು ಮಹಿಳೆಯರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಪರಿಣಾಮ ಬೀರುತ್ತವೆ. ಕೋಪ ಮಾಡಿಕೊಳ್ಳುವುದು, ಊಟ ಮಾಡದೇ ಇರುವುದು, ಆಯಾಸ, ಒತ್ತಡದಂತಹ ಇನ್ನಿತರ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಹಾಗಾಗಿ ಈ ಎಲ್ಲಾ ಸಮಸ್ಯೆಗಳಿಂದ ದೂರ ಉಳಿಯಲು ಈ 5 ಸಲಹೆಗಳನ್ನು ಪಡೆಯಿರಿ. ಇದು ನಿಮ್ಮನ್ನು ಮುಟ್ಟಿನ ಸಮಸ್ಯೆಯಲ್ಲಾಗುವ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.

ಆರೋಗ್ಯಕರ ಮುಟ್ಟಿಗೆ 5 ಸರಳ ಸಲಹೆಗಳು

1. ಆಹಾರ ಪದ್ಧತಿಯಲ್ಲಿ ಬದಲಾವಣೆ

ಮುಟ್ಟಿನ ಸಮಯದಲ್ಲಿ ನಾವು ಸೇವಿಸುವ ಆಹಾರ ಪದಾರ್ಥಗಳು ಹಲವಾರು ರೀತಿಯಲ್ಲಿ ತೊಂದರೆಯನ್ನುಂಟು ಮಾಡುತ್ತವೆ. ಅಂದರೆ, ಸಂಸ್ಕರಿಸಿದ ಆಹಾರ, ಹುರಿದ, ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸುವುದನ್ನು ನಿಲ್ಲಿಸಿ. ಹೆಚ್ಚಿನ ಫೈಬರ್ ಅಂಶವಿರುವ ತರಕಾರಿಗಳು, ಮೆಗ್ನೀಸಿಯಮ್ ಇರುವ ಎಲೆಗಳ ತರಕಾರಿಗಳು, ದ್ವಿದಳ ಧಾನ್ಯಗಳು, ಪೌಷ್ಟಿಕಾಂಶ ಇರುವ ಪದಾರ್ಥಗಳನ್ನು ಸೇವಿಸಿರಿ ಇದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಹೆಚ್ಚು ನೀರು ಕುಡಿಯಿರಿ

ದಿನಕ್ಕೆ 3-4 ಲೀಟರ್​ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಾಗುವ ನೋವು, ಸೆಳೆತ ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ರಕ್ತದ ಹರಿವನ್ನು ನಿಯಮಿತವಾಗಿರಿಸುತ್ತದೆ. ಅದಲ್ಲದೇ, ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ನೀರು ಮತ್ತು ಅದರ ಜೊತೆಗೆ ಶುಂಠಿ ನಿಂಬೆ ಹಣ್ಣನ್ನು ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಾಗುವ ನೋವುಗಳನ್ನು ತಡೆಯಬಹುದು.

3. ಗಿಡಮೂಲಿಕೆಗಳ ಬಳಕೆ

ಅತಿಯಾದ ನೋವು ಮತ್ತು ರಕ್ತಸ್ರಾವದಿಂದ ಮುಟ್ಟಿನ ಸಮಸ್ಯೆಗಳನ್ನು ಎದುರಿಸುವಂತಹ ಮಹಿಳೆಯರು ಶತಾವರಿ, ಅರಿಶಿನ, ಶುಂಠಿ, ತ್ರಿಫಲ, ಜೀರಿಗೆ, ಅಲೋವೆರಾ, ಅಶೋಕ ಮತ್ತು ಲೋಧ್ರಾದಂತಹ ಗಿಡಮೂಲಿಕೆಗಳನ್ನು ಬಳಸುವುದರಿಂದ ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ವ್ಯಾಯಾಮ

ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಮತ್ತು ತೂಕಕ್ಕೆ ಸಹಾಯ ಮಾಡುತ್ತದೆ. ಇವು ಋತುಚಕ್ರದ ಸಮಯದಲ್ಲಿ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಯೋಗ ಮತ್ತು ಪ್ರಾಣಯಾಮ ಮಾಡುವುದರಿಂದ ಮುಟ್ಟಿನ ತೊಂದರೆಗಳನ್ನು ಪರಿಹರಿಸುತ್ತದೆ.

5. ಜೀವನಶೈಲಿ

ಮುಟ್ಟಿನ ಸಮಸ್ಯೆಯನ್ನು ಅನುಭವಿಸುವಂತಹ ಮಹಿಳೆಯರು ಈ ಸಮಯದಲ್ಲಿ ಬಿಸಿ ನೀರಿನ ಚೀಲಗಳು ಅಥವಾ ಬಿಸಿ ನೀರಿನಿಂದ ಸ್ನಾನ ಮಾಡಿದಾಗ ನೋವಿನಿಂದ ಪರಿಹಾರವನ್ನು ನೀಡುತ್ತವೆ. ದೇಹದ ಮೇಲೆ ಒತ್ತಡವನ್ನು ತಪ್ಪಿಸಿಕೊಳ್ಳಲು ಲೂಸ್​ ಇರುವ ಬಟ್ಟೆಗಳು, ಸರಳ ಮಸಾಜ್​, ಧ್ಯಾನ ಮಾಡಿದಾಗ ಇದು ದೇಹವನ್ನು ವಿಶ್ರಾಂತಿ ಪಡೆಯುವಂತೆ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net