'ಕೊಳಕು ಭಾರತ': ಲೈಕ್​ಗಾಗಿ ಭಾರತವನ್ನು ಅವಮಾನಿಸಿದ ವಿದೇಶಿಗರಿಗೆ ಕ್ಲಾಸ್​ ತೆಗೆದುಕೊಂಡ ಆಸ್ಟ್ರೇಲಿಯನ್ ಮಹಿಳೆ! dirty India

untitled-design-31-69005378117a4
Published on

ನವದೆಹಲಿ: ಭಾರತದಲ್ಲಿ ಬೆಳಿಗ್ಗೆ ಎದ್ದು ಹೊರಬಂದರೆ ಕಣ್ಣಿಗೆ ಕಾಣುವವರೇ ಪೌರ ಕಾರ್ಮಿಕರು. ಅವರು ತಮ್ಮ ಹೊಟ್ಟೆಗಾಗಿ ಇಡೀ ಪ್ರದೇಶವನ್ನೇ ಸ್ವಚ್ಛಮಾಡುತ್ತಿರುತ್ತಾರೆ. ಅಂತಹ ಕಾರ್ಮಿಕರನ್ನು ಕಂಡ ಆಸ್ಟ್ರೇಲಿಯಾದ ಪ್ರವಾಸಿ ಮಹಿಳೆಯೊಬ್ಬರು (dirty India) ಅವರನ್ನು ಹೊಗಳಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಎಲ್ಲೆಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ರಿಷಿಕೇಶದಲ್ಲಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಚರಂಡಿ ಸ್ವಚ್ಛಗೊಳಿಸುವಾಗ ರಸ್ತೆಯ ಅಂಚಿನಲ್ಲಿ ಕುಳಿತಿದ್ದ ನೈರ್ಮಲ್ಯ ಕಾರ್ಮಿಕ ಹಾಗೂ ಅವರ ಪಕ್ಕದಲ್ಲಿರುವ ಸಣ್ಣ ಬಂಡಿಯನ್ನು ಸೆರೆಹಿಡಿದು ಒಳ್ಳೆಯ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಶೀರ್ಷಿಕೆಯಲ್ಲೇನಿತ್ತು?

"ಪ್ರವಾಸಿಗರು ಮಾಡುವಂತಹ ಅನೇಕ ವಿಡಿಯೋಗಳಲ್ಲಿ ಭಾರತ ಎಷ್ಟು ಕೊಳಕಾಗಿದೆ ಎಂಬುದನ್ನು ತೋರಿಸುವ ವಿಡಿಯೋವನ್ನು ಮಾಡುತ್ತಾರೆ. ಆದರೆ, ಅವರು ಬೆಳಗಿನ ರಸ್ತೆ ಶುಚಿಗೊಳಿಸುವಿಕೆಯನ್ನು ನಿಮಗೆ ತೋರಿಸುವುದಿಲ್ಲ" ಎಂದು ಬರೆದು ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.

ಈ ಶೀರ್ಷಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ಚಿತ್ರಣವನ್ನು ಗಮನ ಸೆಳೆಯುವ ಉದ್ದೇಶದಿಂದ ನಕಾರಾತ್ಮಕತೆಯತ್ತ ಹೇಗೆ ಒಲವು ತೋರುತ್ತದೆ ಎಂಬುದನ್ನು ಅವರು ಶೀರ್ಷಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಭಾರತದ ಕೆಟ್ಟ ಮುಖವನ್ನು ತೋರಿಸಲು ಮಾತ್ರ ಅನೇಕರು ಭಾರತಕ್ಕೆ ಭೇಟಿ ನೀಡುತ್ತಾರೆ. ಅವರು ಆಘಾತಕಾರಿ ಅಂಶಗಳಿಗಾಗಿ ಅಥವಾ ಇಷ್ಟಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಅನುಯಾಯಿಗಳನ್ನು ಪಡೆಯಲು ಈ ರೀತಿ ಮಾಡುತ್ತಾರೆ ಎಂದು ಬರೆದಿದ್ದಾರೆ.

ತ್ಯಾಜ್ಯ ನಿರ್ವಹಣೆಯ ಸುತ್ತ ಸವಾಲುಗಳಿವೆ. ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಭಾರತವು ಪರಿಹರಿಸಬೇಕಾದ ಸಮಸ್ಯೆಗಳನ್ನು ಹೊಂದಿದೆ ಎಂಬುದನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ ಅವರ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಅನುಯಾಯಿಗಳನ್ನು ಪಡೆಯುವ ಉದ್ದೇಶದಿಂದ ಒಂದು ದೇಶವನ್ನು ದೂಷಿಸಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತವು ದೊಡ್ಡ ರಾಷ್ಟ್ರ ಮತ್ತು ಹಲವು ವಿಭಿನ್ನ ರಾಜ್ಯಗಳನ್ನು ಒಳಗೊಂಡಿದೆ. ಅವೆಲ್ಲವೂ ಪರಸ್ಪರ ಭಿನ್ನವಾಗಿವೆ. ನೀವು ಭಾರತದಲ್ಲಿ ಭೇಟಿ ನೀಡಿದರೆ ಎಲ್ಲವೂ ಒಂದೇ ಆಗುವುದಿಲ್ಲ. ಈ ವಿಡಿಯೋ ಮಾಡುತ್ತಿರುವುದು ಋಷಿಕೇಶದಿಂದ ಇದು ಬಹಳ ಸುಂದರವಾಗಿದೆ ಹಾಗೆಯೇ ತುಂಬಾ ಸ್ವಚ್ಛವಾಗಿದೆ ಎಂದು ತಿಳಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ, ಅನೇಕ ಜನರ ಮೆಚ್ಚುಗೆಯನ್ನು ಪಡೆಯಿತು. ಒಬ್ಬ ಬಳಕೆದಾರರು ನೀವು ವಿಷಯಗಳ ಸಕಾರಾತ್ಮಕ ಬದಿಯನ್ನು ನೋಡಿರುವ ಅಂಶ ನನಗೆ ಬಹಳ ಇಷ್ಟವಾಯಿತು. ಭಾರತವು ಸಂಕೀರ್ಣ ದೇಶ ಎಂದು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರ ನನ್ನ ದೇಶದ ಒಳ್ಳೆಯ ಭಾಗವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಕಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net