PepsiCo Chief Ramon Laguarta | ಪ್ರಧಾನಿ ಮೋದಿ ಭೇಟಿಯಾದ ಪೆಪ್ಸಿಕೋ ಗ್ಲೋಬಲ್ ಸಿಇಒ ರಾಮನ್ ಲಗುರ್ಟಾ

PepsiCo Chief Ramon Laguarta and modi
Published on

PepsiCo Chief Ramon Laguarta: ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಪೆಪ್ಸಿಕೋ ಗ್ಲೋಬಲ್ ಸಿಇಒ ಮತ್ತು ಅಧ್ಯಕ್ಷ ರಾಮನ್ ಲಗುರ್ಟಾ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಭಾರತದ ಮಾರುಕಟ್ಟೆಗೆ ಕಂಪನಿಯ ದೀರ್ಘಕಾಲೀನ ಬದ್ಧತೆಯ ಬಗ್ಗೆ ಚರ್ಚಿಸಿದರು ಎಂದು ವರದಿಯಾಗಿದೆ.

ಈ ಭೇಟಿಯ ಸಮಯದಲ್ಲಿ ಲಗುರ್ಟಾ ಅವರೊಂದಿಗೆ ಕಂಪನಿಯ ಜಾಗತಿಕ ಕಾರ್ಯಕಾರಿ ಸಮಿತಿಯ ಅನೇಕ ಸದಸ್ಯರು ಹಾಜರಿದ್ದರು ಎನ್ನಲಾಗಿದ್ದು, ಈ ವಿಷಯವಾಗಿ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್​​ ಹಂಚಿಕೊಂಡಿರುವ ಪೆಪ್ಸಿಕೋ, ನಮ್ಮ ಅಧ್ಯಕ್ಷ ಮತ್ತು ಸಿಇಒ ರಾಮನ್ ಲಗುರ್ತಾ, ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಪೆಪ್ಸಿಕೋ ಭಾರತಕ್ಕೆ ದೀರ್ಘಕಾಲೀನ ಬದ್ಧತೆಯನ್ನು ಬಲಪಡಿಸುವ ಮತ್ತು ಉತ್ಪಾದನೆ, ಸುಸ್ಥಿರತೆ, ನಾವೀನ್ಯತೆ ಮತ್ತು ಸಮುದಾಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವ ಬಗ್ಗೆ ಚರ್ಚಿಸಲು ಅವಕಾಶ ಪಡೆದರು ಎಂದು ಬರೆದುಕೊಂಡಿದೆ.

ಜಿಎಸ್‌ಟಿ ದರಗಳ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಈ ಸಭೆ ನಡೆದಿದ್ದು, ಸರ್ಕಾರವು ತಿಂಡಿಗಳು ಸೇರಿದಂತೆ ಆಹಾರ ಉತ್ಪನ್ನಗಳ ಮೇಲಿನ ಸುಂಕವನ್ನು ಶೇಕಡಾ 12 ರಿಂದ ಶೇಕಡಾ 5 ಕ್ಕೆ ಇಳಿಸಿದೆ. ಇದು ಪೆಪ್ಸಿಕೋದ ಪ್ರಮುಖ ಬ್ರ್ಯಾಂಡ್‌ಗಳಾದ ಲೇಸ್, ಕುರ್ಕುರೆ, ಚೀಟೋಸ್ ಮತ್ತು ಕ್ವೇಕರ್ ಓಟ್ಸ್‌ಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಪಾನೀಯಗಳ ಮೇಲಿನ ಜಿಎಸ್‌ಟಿ ದರಗಳನ್ನು ಶೇಕಡಾ 28 ರಿಂದ ಶೇಕಡಾ 40 ಕ್ಕೆ ಹೆಚ್ಚಿಸಲಾಗಿದ್ದು, ಶೇಕಡಾ 12 ರ ತೆರಿಗೆಯನ್ನು ಸೇರಿಸಲಾಯಿತು. ಪೆಪ್ಸಿ, ಮೌಂಟೇನ್ ಡ್ಯೂ, ಮಿರಿಂಡಾ, ಯುಪಿ, ಸ್ಟಿಂಗ್, ಅಕ್ವಾಫಿನಾ, ಟ್ರೋಪಿಕಾನಾ ಮತ್ತು ಸ್ಲೈಸ್ ಮುಂತಾದ ಬ್ರಾಂಡ್‌ಗಳೊಂದಿಗೆ ಕಾರ್ಯನಿರ್ವಹಿಸುವ ಪೆಪ್ಸಿಕೋ, ಜೂನ್ ತಿಂಗಳ ಪಾನೀಯಗಳ ವ್ಯವಹಾರದಲ್ಲಿನ ಕುಸಿತವನ್ನು ವರದಿ ಮಾಡಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net