ಕರ್ನಾಟಕ ಚುನಾವಣೆ 2023: ವಿದೇಶದಿಂದ ಬಂದು ಮತ ಚಲಾಯಿಸಿದ ಯುವತಿಯರು!

Young Girls Voting
Published on

ಬೆಂಗಳೂರು: ಇಲ್ಲಿಯೇ ಇದ್ದುಕೊಂಡು ಮತ ಹಾಕಲು ಹಿಂದೇಟು ಹಾಕುವವರ ಮಧ್ಯೆ ಈ ಯುವತಿಯರಿಬ್ಬರು ವಿದೇಶದಿಂದ ಬಂದು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಅಮೆರಿಕದಲ್ಲಿ ಉದ್ಯೋಗಿಯಾಗಿರುವ ಬಸವನಗುಡಿ ಕ್ಷೇತ್ರದ ಮೇಘನಾ ಎಂಬುವರು ವೋಟ್ ಮಾಡಲೆಂದೇ ಬೆಂಗಳೂರಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ಮೂಲಕ ಮತದಾನವೇ ಮುಖ್ಯ ಎಂಬ ಸಂದೇಶವನ್ನು ಸಾರಿದ್ದಾರೆ.

ಫಿಲಿಪೈನ್ಸ್​ನಿಂದ ಬಂದ ಲಿಖಿತ

ಫಿಲಿಪೈನ್ಸ್​ನಲ್ಲಿ ಮೆಡಿಕಲ್ ವಿದ್ಯಾರ್ಥಿನಿಯಾಗಿರುವ ಲಿಖಿತಾ, ಚಿತ್ರದುರ್ಗದ‌ ಮತಗಟ್ಟೆ ಸಂಖ್ಯೆ 225ರಲ್ಲಿ ಮತದಾನ ಮಾಡಿದ್ದಾರೆ. ಲಿಖಿತಾ, SSLC ಬೋರ್ಡ್ ಜಂಟಿ ನಿರ್ದೆಶಕ ರೇವಣಸಿದ್ದಪ್ಪ ಅವರ ಪುತ್ರಿ. ಮತದಾನದ ಬಳಿಕ ಪ್ರತಿಕ್ರಿಯೆ ನೀಡಿರುವ ಲಿಖಿತಾ, ವಿದೇಶದಲ್ಲಿನ ವಿದ್ಯಾರ್ಥಿಗಳಿಗೆ ಪೋಸ್ಟಲ್ ಬ್ಯಾಲೆಟ್ ನೀಡುವಂತೆ ಮನವಿ ಮಾಡಿದರು. ಕಡ್ಡಾಯ ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು. ವಿದೇಶದಿಂದ ಬಂದು ಮತದಾನ ಮಾಡಿದ್ದಕ್ಕೆ ಖುಷಿಯಿದೆ. ಇಲ್ಲಿನ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಪಡೆದು ಮತಚಲಾಯಿಸಿದ್ದೇನೆ ಎಂದರು.

ಮೇ 13ಕ್ಕೆ ಫಲಿತಾಂಶ

ಕರ್ನಾಟಕ ವಿಧಾನಸಭೆಯು ಒಟ್ಟು 224 ಸದಸ್ಯ ಬಲವನ್ನು ಹೊಂದಿದ್ದು, ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 113 ಸದಸ್ಯರ ಬಲವುಳ್ಳ ಸ್ಪಷ್ಟ ಬಹುಮತ ಬೇಕಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದ್ದು, ಯಾರು ಕರ್ನಾಟಕದ ಮುಂದಿನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net